Home ದಕ್ಷಿಣ ಕನ್ನಡ Breaking News । ದಕ್ಷಿಣ ಕನ್ನಡದಲ್ಲಿ ಮತ್ತೆ 2 ದಿನ ಮದ್ಯ ಕಂಪ್ಲೀಟ್ ಬಂದ್ !ಮಾರಾಟ,...

Breaking News । ದಕ್ಷಿಣ ಕನ್ನಡದಲ್ಲಿ ಮತ್ತೆ 2 ದಿನ ಮದ್ಯ ಕಂಪ್ಲೀಟ್ ಬಂದ್ !
ಮಾರಾಟ, ದಾಸ್ತಾನು, ಸಾಗಾಟಿಕೆ ಕೂಡಾ ನಿಷೇಧ – ಜಿಲ್ಲಾಧಿಕಾರಿ ಆರ್ಡರ್ !

Hindu neighbor gifts plot of land

Hindu neighbour gifts land to Muslim journalist

ಕೋಮು ಸೂಕ್ಷ್ಮವಾದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ ಮೂರು ದಿನಗಳಿಂದ ತೊಂದರೆ ಆಗಸ್ಟ್ ಒಂದರಿಂದ ಇವತ್ತು ಬೆಳಗಿನವರೆಗೆ ಮದ್ಯ ಮಾರಾಟವನ್ನು ನಿಷೇಧಿಸಲಾಗಿತ್ತು. ಇದೀಗ ಮದ್ಯ ಪ್ರಿಯರಿಗೆ ಮತ್ತೂಂದು ಶಾಕ್ ಬಂದಿದೆ.

ಇವತ್ತು ಬೆಳಗ್ಗೆ ಒಂಬತ್ತು ಗಂಟೆಗೆ ಆ ಗಡುವು ಮುಗಿಯುತ್ತಿದ್ದು, ಬಳ್ಳಾರಿ ಪರಿಸರದಲ್ಲಿ ಮತ್ತು ಸುತ್ತಮುತ್ತಲು ಇನ್ನೂ ಪ್ರಕ್ಷುಬ್ದ ವಾತಾವರಣ ಮನೆ ಮಾಡಿದೆ. ಆದ್ದರಿಂದ ಮುಂಜಾಗ್ರತಾ ಕ್ರಮವಾಗಿ ಮಂಗಳೂರು ಪೊಲೀಸ್ ಆಯುಕ್ತರು ಮತ್ತು ಅಧೀಕ್ಷಕರು ಇನ್ನೂ ಕೆಲವು ದಿನಗಳ ಕಾಲ ದಕ್ಷಿಣ ಕನ್ನಡದಲ್ಲಿ ಮಧ್ಯ ಮಾರಾಟವನ್ನು ನಿಷೇಧಿಸಬೇಕೆಂದು ಜಿಲ್ಲಾಧಿಕಾರಿಯವರಿಗೆ ಮನವಿ ಮಾಡಿದ್ದರು. ಈ ಮನವಿಯನ್ನು ಪುರಸ್ಕರಿಸಿದ ಮತ್ತೆ ಎರಡು ದಿನಗಳ ಕಾಲ ನಿಷೇಧಿಸಿ ಆದೇಶ ಹೊರಡಿಸಿದೆ.

ಆದುದರಿಂದ ಮಧ್ಯ ಮಾರಾಟ ಸಾಗಾಟ ದಾಸ್ತಾನು ಮುಂತಾದ ಎಲ್ಲಾ ಚಟುವಟಿಕೆಗಳನ್ನು ನಿರ್ಬಂಧಿಸಿ ಸಂಪೂರ್ಣವಾಗಿ, ಎಲ್ಲಾ ರೀತಿಯ ಮದ್ಯದ ವ್ಯವಹಾರಗಳನ್ನು ಆಗಸ್ಟ್ 5 ಬೆಳಿಗ್ಗೆ 9:00 ತನಕ ಬಂದ್ ಮಾಡಲಾಗಿದೆ.

ಮದ್ಯ ಪ್ರಿಯ ಜನರಿಗೆ ಇದರಿಂದ ತೊಂದರೆ ಆಗಿ, ಇನ್ನೆರಡು ಡ್ರೈ ದಿನಗಳನ್ನು ಕಳೆಯಬೇಕಿದೆ.