ದ.ಕ.ಜಿಲ್ಲೆಯಲ್ಲಿ ರಾತ್ರಿ ನಿರ್ಬಂಧ ಎರಡು ದಿನ ಮುಂದುವರಿಕೆ -ಜಿಲ್ಲಾಧಿಕಾರಿ

ದಕ್ಷಿಣ ಕನ್ನಡ ಜಿಲ್ಲಾ ವ್ಯಾಪ್ತಿಯಲ್ಲಿ ಕಾನೂನು ಸುವ್ಯವಸ್ಥೆ ದೃಷ್ಟಿಯಿಂದ ಇನ್ನೂ 2 ದಿನಗಳ ಕಾಲ (ಆ.1ಮತ್ತು 2ರಂದು) ರಾತ್ರಿ ನಿರ್ಬಂಧವನ್ನು ವಿಸ್ತರಿಸಿ ದ.ಕ. ಜಿಲ್ಲಾಧಿಕಾರಿ ಆದೇಶ ಮಾಡಿದ್ದಾರೆ. ಈ ಕಾರಣದಿಂದ ಆ.3ರ ಬೆಳಗ್ಗೆ 6ವರೆಗೆ ನಿರ್ಬಂಧ ಮುಂದುವರಿಯಲಿದೆ.

 

ಸಂಜೆ 6 ಗಂಟೆಯಿಂದ ಬೆಳಗ್ಗೆ 6 ಗಂಟೆಯವರೆಗೆ ನೈಟ್ ಕರ್ಪ್ಯೂ ಇರಲಿದೆ. ಮೂರು ದಿನಗಳ ಹಿಂದೆ ಹೊರಡಿಸಿದ್ದ ನೈಟ್ ಕರ್ಪ್ಯೂ ಆದೇಶ ಇಂದಿಗೆ ಕೊನೆಯಾದ ಹಿನ್ನೆಲೆಯಲ್ಲಿ ಇಂದು ಮತ್ತೆ ವಿಸ್ತರಿಸಿ ಆದೇಶ ಮಾಡಲಾಗಿದೆ.

ಸಂಜೆ 6 ಗಂಟೆಯೊಳಗೆ ಅಂಗಡಿ ಮುಂಗಟ್ಟು ಮುಚ್ಚುವಂತೆ ಆದೇಶ ಹೊರಡಿಸಲಾಗಿದ್ದು, ತುರ್ತು ಸೇವೆಗೆ ಮಾತ್ರ ಅವಕಾಶ. ಈ ಆದೇಶ ಆ.3ರ ಮುಂಜಾನೆಯವರೆಗೆ ನಿರ್ಬಂಧ ಮುಂದುವರೆಯಲಿದೆ.

Leave A Reply

Your email address will not be published.