Home latest ರೀಲ್ಸ್ ಗೀಳು, ಅನೈತಿಕ ಸಂಬಂಧಕ್ಕೆ ಗಂಡನನ್ನೇ ಕೊಂದಳಾ ಪತ್ನಿ..!

ರೀಲ್ಸ್ ಗೀಳು, ಅನೈತಿಕ ಸಂಬಂಧಕ್ಕೆ ಗಂಡನನ್ನೇ ಕೊಂದಳಾ ಪತ್ನಿ..!

Hindu neighbor gifts plot of land

Hindu neighbour gifts land to Muslim journalist

ಸೋಷಿಯಲ್ ಮೀಡಿಯಾವನ್ನು ಎಷ್ಟು ಇತಿಮಿತಿಯಲ್ಲಿ ಉಪಯೋಗಿಸುತ್ತೀರೋ ಅಷ್ಟೇ ಒಳ್ಳೆಯದು. ಹೆಚ್ಚಾದರೆ ಅಪಾಯಕಾರಿ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ.
ಇಲ್ಲೊಂದು ಘಟನೆಯಲ್ಲಿ ಹೆಂಡತಿಯ ಇನ್‌ಸ್ಟಾಗ್ರಾಮ್ ರೀಲ್ಸ್ ಹುಚ್ಚಿಗೆ ಗಂಡ ಬಲಿಯಾಗಿದ್ದಾನೆ. ರಾಜಸ್ಥಾನದ ಜೋಧಪುರದ ಲುನಿ ಎಂಬಲ್ಲಿ ಇಂತಹದೊಂದು ಆಘಾತಕಾರಿ ಘಟನೆ ನಡೆದೆ.

ಕೆಲದಿನಗಳ ಹಿಂದೆಯಷ್ಟೇ ಜೋಧಪುರದ ಪ್ರಮುಖ ರಸ್ತೆಯಲ್ಲಿ ಡಬಲ್ ಮರ್ಡರ್ ನಡೆದಿತ್ತು. ಇದು ಆಕ್ಸಿಡೆಂಟ್ ಮೂಲಕ ಮಾಡಿದ ಕೊಲೆಯಾಗಿತ್ತು. ಇದನ್ನು ನೋಡಿದ ಪ್ರತಿಯೊಬ್ಬರಿಗೂ ಇದೊಂದು ಪ್ರೀ ಫ್ಲ್ಯಾನ್ಡ್ ಮರ್ಡರ್ ಎಂದೇ ಹೇಳಿದ್ದರು. ಆದರೆ ಯಾಕಾಗಿ ಈ ಕೊಲೆ ನಡೆದಿರಬಹುದು ಎಂಬ ಪ್ರಶ್ನೆ ಹಾಗೇ ಉಳಿದಿತ್ತು.
ಆದರೆ ಈ ಎಲ್ಲಾ ಪ್ರಶ್ನೆಗೆ ಈಗ ಉತ್ತರವೊಂದು ದೊರಕಿದೆ.

ಈ ಘಟನೆಯಲ್ಲಿ ಮೃತಪಟ್ಟಿರುವ ವ್ಯಕ್ತಿಯ ಹೆಸರು ರಮೇಶ್ ಪಟೇಲ್ ಹಾಗೂ ಅವರ ಪತ್ನಿ ಪ್ರೇಮಿಕಾ ಗುಡ್ಡಿ. ಇವರಿಬ್ಬರೂ ಸೇರಿ ಫೇಸ್ ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ರೀಲ್ಸ್ ಮಾಡುತ್ತಿದ್ದರು. ಆದರೆ ಸದಾ ಸೋಷಿಯಲ್ ಮೀಡಿಯಾದಲ್ಲಿ ಕಾಲ ಕಳೆಯುತ್ತಿದ್ದ ಹೆಂಡತಿಯ ನಡೆಯಿಂದ ರಮೇಶ್ ಪಟೇಲ್ ಬೇಸರಗೊಂಡಿದ್ದ. ಹಲವು ಬಾರಿ ಬುದ್ಧಿವಾದ ಹೇಳಿದರೂ ಹೆಂಡತಿ ಕೇಳಿರಲಿಲ್ಲ. ಹೀಗಾಗಿ ಗಂಡ ಹೆಂಡತಿಯ ನಡುವೆ ಇದೇ ವಿಚಾರವಾಗಿ ಸಣ್ಣ ಪುಟ್ಟ ಜಗಳಗಳಾಗುತ್ತಿತ್ತು.

ಸೋಷಿಯಲ್ ಮೀಡಿಯಾ ಬಳಸಲು ತನ್ನ ಗಂಡ ಅವಕಾಶ ನೀಡಲ್ಲ ಎಂದರಿತ ಪ್ರೇಮಿಕಾ ಗಂಡನನ್ನೇ ಮುಗಿಸಲು ಪ್ಲಾನ್ ಮಾಡಿದ್ದಾಳೆ. ಇದರ ಜೊತೆಗೇನೇ ಪ್ರೇಮಿಕಾಗೆ ಶಂಕರ್ ಪಟೇಲ್ ಎಂಬ ವ್ಯಕ್ತಿಯ ಪರಿಚಯವಾಗಿತ್ತು. ಇಬ್ಬರ ನಡುವೆ ಅನೈತಿಕ ಸಂಬಂಧ ಕೂಡ ಬೆಳೆದಿದೆ. ಅತ್ತ ಶಂಕರ್‌ಗೆ ಪ್ರೇಮಿಕಾ ಬೇಕಿತ್ತು. ಇತ್ತ ಪ್ರೇಮಿಕಾಗೆ ಗಂಡ ರಮೇಶ್ ಪಟೇಲ್ ಬೇಡಿತ್ತು. ಹೀಗಾಗಿ ಗಂಡನನ್ನೇ ಮುಗಿಸಲು ತನ್ನ ಪ್ರಿಯತಮನಿಗೆ ಹೇಳಿದ್ದಾಳೆ‌

ಕಾಮದ ಪೊರೆ ಕಣ್ಣಿಗಂಟಿದ್ದ ಶಂಕರ್ ಪಟೇಲ್ ಕೊಲೆಗೆ ಸ್ಕೆಚ್ ರೂಪಿಸಿ ದೆಹಲಿಯಿಂದ ಹಳೆಯ ಎಸ್ಎಯುವಿ ಕಾರೊಂದನ್ನು ಖರೀದಿಸಿದ್ದ. ಅಷ್ಟು ಮಾತ್ರವಲ್ಲದೇ ರಮೇಶ್ ಪಟೇಲ್ ಅವರ ಚಲನವಲನಗಳ ಬಗ್ಗೆ ಪ್ರೇಮಿಕಾಳಿಂದ ಅಪ್‌ಡೇಟ್ ಪಡೆದುಕೊಳ್ಳುತ್ತಿದ್ದ. ಅದರಂತೆ ಜುಲೈ 17 ರಂದು ರಮೇಶ್ ಪಟೇಲ್ ತನ್ನ ಸೋದರಸಂಬಂಧಿ ಕವಿತಾರನ್ನು ಕರೆದುಕೊಂಡು ಲುನಿಯಿಂದ ಜೋದ್‌ಪುರಕ್ಕೆ ಹೊರಟಿದ್ದರು. ಲುನಿ ಪೊಲೀಸ್ ಠಾಣೆ ವ್ಯಾಪ್ತಿಯ ಗ್ರಾಮದಿಂದ ಹೊರಡುತ್ತಿದ್ದಂತೆಯೇ ಕಾರೊಂದು ಬೈಕ್‌ಗೆ ಡಿಕ್ಕಿ ಹೊಡೆದಿದೆ. ಏನಾಗ್ತಿದೆ ಎಂದು ನೋಡುವಷ್ಟರಲ್ಲಿ ಸುಮಾರು 200 ಮೀಟರ್ ವರೆಗೆ ಇಬ್ಬರನ್ನು ಕಾರು ಎಳೆದೊಯ್ದಿದೆ. ಪರಿಣಾಮ ರಮೇಶ್ ಹಾಗೂ ಕವಿತಾ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಈ ಭೀಕರ ಅಪಘಾತ ಸಂಭವಿಸಿದರೂ ಕೊಲೆ ನಡೆದಿದೆ ಎಂಬುದರ ಯಾವುದೇ ಸುಳಿವು ಇರಲಿಲ್ಲ. ಈ ಇಬ್ಬರ ಕೊಲೆಯನ್ನು ಯಾರು ಮಾಡಿದ್ದಾರೆ ಎಂಬುದೇ ಅನಂತರ ದೊಡ್ಡ ಪ್ರಶ್ನೆಯಾಗಿತ್ತು. ಇತ್ತ ಕಡೆಯಿಂದ ರಮೇಶ್ ಪಟೇಲ್ ಅವರ ಕುಟುಂಬಸ್ಥರಿಂದ ಪೊಲೀಸರಿಗೆ ಒತ್ತಡ ಹೆಚ್ಚಾಯಿತು. ಹೀಗಾಗಿ ತನಿಖೆಯನ್ನು ಚುರುಕುಗೊಳಿಸಿದ ಪೊಲೀಸರು ಅಂತಿಮವಾಗಿ ಬಂದು ನಿಂತಿದ್ದು ರಮೇಶ್ ಪಟೇಲ್ ಅವರ ಮನೆಯ ಮುಂದೆ ಎಂಬುದು ವಿಶೇಷ.

ಏಕೆಂದರೆ ಘಟನೆ ನಡೆದ ಸ್ಥಳದಲ್ಲಿ ಪ್ರೇಮಿಕಾಳಿಗೂ ಕರೆ ಹೋಗಿರುವುದು ಪತ್ತೆಯಾಗಿದೆ. ಹೀಗಾಗಿ ಪ್ರೇಮಿಕಾಳನ್ನು ವಶಕ್ಕೆ ಪಡೆದ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸಿದ್ದಾರೆ. ಈ ವೇಳೆ ಗಂಡನ ನಡುವೆ ಇನ್‌ಸ್ಟಾಗ್ರಾಮ್ ರೀಲ್ಸ್ ವಿಚಾರಕ್ಕೆ ಜಗಳವಾಗುತ್ತಿರುವ ವಿಚಾರ ಬಾಯಿಬಿಟ್ಟಿದ್ದಾಳೆ. ಅಷ್ಟೇ ಅಲ್ಲದೆ ಮತ್ತಷ್ಟು ವಿಚಾರಣೆಗೊಳಪಡಿಸಿದಾಗ ಶಂಕರ್ ಜೊತೆ ಅನೈತಿಕ ಸಂಬಂಧ ಹೊಂದಿರುವುದನ್ನು ಹೇಳಿದ್ದಾಳೆ.

ಅಲ್ಲಿಗೆ ಪೊಲೀಸರಿಗೆ ಪ್ರೀ ಪ್ಲ್ಯಾನ್ ಮರ್ಡರ್ ಯಾಕೆ ಮಾಡಿದ್ದರು ಎಂಬುದಕ್ಕೆ ಸ್ಪಷ್ಟತೆ ಸಿಕ್ಕಿದೆ. ಕವಿತಾಳನ್ನು ಯಾಕೆ ಕೊಲೆ ಮಾಡಿದರು ಎಂಬ ಪ್ರಶ್ನೆಗೆ ಸಿಕ್ಕ ಉತ್ತರ, ರಮೇಶ್ ಪಟೇಲ್‌ರನ್ನು ಕೊಲೆ ಮಾಡಲು ಮಾತ್ರ ಪ್ಲಾನ್ ಹಾಕಿದ್ದರು. ಆದರೆ ಅಂದು ಕವಿತಾ ಕೂಡ ಅವರ ಜೊತೆ ಹೋಗಿದ್ದಳು. ಹೀಗಾಗಿ ಅವಳನ್ನು ಕೂಡ ಕೊಲೆ ಮಾಡಲಾಗಿದೆ. ಇದೀಗ ಪ್ರೇಮಿಕಾ ಸೇರಿದಂತೆ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆಯಲಾಗಿದೆ.