ಬೆಳ್ತಂಗಡಿ:ಕಾರಿನಲ್ಲಿ ಬಂದ ತಂಡದಿಂದ ಯುವಕನ ಕಿಡ್ನಾಪ್ ನಡೆಸಿ ಹಲ್ಲೆ!! ಐವರು ಆರೋಪಿಗಳು ಪೊಲೀಸರ ವಶಕ್ಕೆ

Share the Article

ಬೆಳ್ತಂಗಡಿ:ಮನೆಗೆ ಹೋಗುತ್ತಿದ್ದ ಯುವಕನೊಬ್ಬನನ್ನು ಕಾರಿನಲ್ಲಿ ಬಂದ ದುಷ್ಕರ್ಮಿಗಳ ತಂಡವೊಂದು ಕಿಡ್ನಾಪ್ ಮಾಡಿ, ಬಳಿಕ ಶಾಲೆಯ ಮೈದಾನವೊಂದರಲ್ಲಿ ಹಲ್ಲೆ ನಡೆಸಿದ ಘಟನೆಯೊಂದು ಬೆಳ್ತಂಗಡಿ ತಾಲೂಕಿನ ಅಳದಂಗಡಿ ಬಳಿ ನಡೆದಿದೆ.

ಹಲ್ಲೆಗೊಳಗಾದ ಯುವಕನನ್ನು ಲಾಯಿಲ ಅಂಕಾಜೆ ಬೈಲು ನಿವಾಸಿ ನಿಶಾನ್(24) ಎಂದು ಗುರುತಿಸಲಾಗಿದ್ದು, ಹಲ್ಲೆಯ ಬಳಿಕ ವಿಷಯ ತಿಳಿದ ಆತನ ಸ್ನೇಹಿತರು ಸ್ಥಳಕ್ಕೆ ತೆರಳಿದ್ದು, ಈ ವೇಳೆ ಎರಡೂ ತಂಡಗಳ ಮಧ್ಯೆ ವಾಗ್ವಾದ ನಡೆದಿದೆ ಎನ್ನಲಾಗಿದೆ. ಸದ್ಯ ಗಾಯಳು ಯುವಕ ಬೆಳ್ತಂಗಡಿ ಆಸ್ಪತ್ರೆಯಲ್ಲಿ ದಾಖಲಾಗಿದ್ದು,ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

Leave A Reply