ಜೆಸಿಐ ಸುಳ್ಯ ಸಿಟಿ ವತಿಯಿಂದ ಕೆಸರ್ ಡ್ ಕಸರತ್ತ್

ಜೆ ಸಿ ಸುಳ್ಯ ಸಿಟಿ ವತಿಯಿಂದ ಮ್ಯಾಟ್ರಿಕ್ಸ್ ವಿದ್ಯಾಸಂಸ್ಥೆ ಸುಳ್ಯ ಮತ್ತು ಬ್ರದರ್ಸ್ ಬಳ್ಳಡ್ಕ ರವರ ಸಹಯೋಗದೊಂದಿಗೆ ಬಳ್ಳಡ್ಕಗದ್ದೆಯಲ್ಲಿ ಕೆಸರ್ ಡ್ ಕಸರತ್ತ್ ಕ್ರೀಡಾಕೂಟ ನಡೆಯಿತು ಈ ಕ್ರೀಡಾಕೂಟದ ಅಧ್ಯಕ್ಷತೆಯನ್ನು ಜೆಸಿಐ ಸುಳ್ಯ ಸಿಟಿ ಅಧ್ಯಕ್ಷ ಬಶೀರ್ ಯುಪಿ ವಹಿಸಿದ್ದರು.

 

ಶಿವರಾಮ ಬಳ್ಳಡ್ಕ ದೀಪ ಬೆಳಗಿಸುವುದರೊಂದಿಗೆ ಉದ್ಘಾಟಿಸಿದರು ವೇದಿಕೆಯಲ್ಲಿ ಉಬರಡ್ಕ ಗ್ರಾಮ ಪಂಚಾಯತ್ ಸದಸ್ಯರುಗಳಾದ ಹರೀಶ್ ಉಬರಡ್ಕ, ಅನಿಲ್ ಬಳ್ಳಡ್ಕ,ಮಮತಾ ಕುದ್ಪಾಜೆ ಮತ್ತು ಮ್ಯಾಟ್ರಿಕ್ಸ್ ವಿದ್ಯಾಸಂಸ್ಥೆ ಸುಳ್ಯ ದ ಅಧ್ಯಕ್ಷರಾದ ವಿನಯರಾಜ್ ಮಡ್ತಿಲ ಉಪಸ್ಥಿತರಿದ್ದರು ಕಾರ್ಯಕ್ರಮದಲ್ಲಿ ಹಿರಿಯ ಕೃಷಿಕ ಶಿವರಾಮ ಸೂಂತೋಡು ರವರನ್ನು ಸನ್ಮಾನಿಸಲಾಯಿತು ಮನಮೋಹನ್ ಬಳ್ಳಡ್ಕ ರಂಜಿತ್ ಪಿಜೆ ಮತ್ತು ಪ್ರಜ್ವಲ್ ರವರು ಕಾರ್ಯಕ್ರಮವನ್ನು ಸಂಯೋಜಿಸಿದರು ಘಟಕದ ಕಾರ್ಯದರ್ಶಿ ಶಶಿಧರ್ ಎಕ್ಕಡ್ಕ ವಂದಿಸಿದರು

Leave A Reply

Your email address will not be published.