ವಾರದ ಸಂತೆಯ ಸ್ಥಳದಲ್ಲಿ ನಮಾಝ್ | 8 ಮಂದಿಯ ಬಂಧನ

Share the Article

ಉತ್ತರಖಂಡ : ಸಾರ್ವಜನಿಕ ಸ್ಥಳದಲ್ಲಿ ನಮಾಝ್ ಮಾಡಿದ ಆರೋಪದ ಮೇರೆಗೆ ಹರಿದ್ವಾರದಲ್ಲಿ 8 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

ಹರಿದ್ವಾರದ ವಾರದ ಮಾರುಕಟ್ಟೆಯಲ್ಲಿ‌ 8 ಯುವಕರು ನಮಾಜ್ ಮಾಡುತ್ತಿದ್ದರು,ಈ ಸಂದರ್ಭದಲ್ಲಿ ಅವರನ್ನು ಬಂಧಿಸಲಾಗಿದೆ.

ಬಂಧಿತರನ್ನು ಮಹಮ್ಮದ್ ನಿಜಾಮ್, ನಸೀಮ್, ಮುರ್ಸಲೀನ್, ಅಶ್ರಫ್, ಅಸ್ಗರ್, ಮುಸ್ತಫಾ, ಸಜ್ಜಾದ್ ಅಹಮ್ಮದ್ ಮತ್ತು ಇಕ್‌ರಮ ಎಂದು ಹೇಳಲಾಗಿದೆ.

ಬಂಧಿತರ ವಿರುದ್ಧ ಸಿಆರ್ ಪಿಸಿ ಸೆಕ್ಸನ್ 151 ಅಡಿ ಪ್ರಕರಣ ದಾಖಲಿಸಲಾಗಿದೆ. ಬಳಿಕ ಅವರನ್ನು ಮ್ಯಾಜಿಸ್ಟ್ರೇಟ್ ಜಾಮೀನು ನೀಡಿ ಬಿಡುಗಡೆಗೊಳಿಸಿದ್ದಾರೆ.

Leave A Reply