ರಣರೋಚಕ, ಭೀಕರ ಕಾಳಗದಲ್ಲಿ ದೈತ್ಯ ಅನಕೊಂಡ ಮೊಸಳೆಯ ಸೆಣಸಾಟ | ವೀಡಿಯೋ ವೈರಲ್

ಈ ಪ್ರಾಣಿಗಳ ನಡುವೆ ನಡೆಯುವ ಪ್ರಾಣ ರಕ್ಷಣೆಯ ವೀಡಿಯೋಗಳು ನಮಗೆ ಸಾಮಾಜಿಕ ಜಾಲತಾಣದಲ್ಲಿ ಕಾಣ ಸಿಗುತ್ತವೆ. ಇದೀಗ ಬಂದಿರುವ ಒಂದು ವೀಡಿಯೋದಲ್ಲಿ ದೈತ್ಯ ಹಾವೊಂದು ಮೊಸಳೆಯನ್ನೇ ಸಾಯಿಸುವ ದೃಶ್ಯ ನಿಜಕ್ಕೂ ಮೈ ಜುಮ್ಮೆನಿಸುತ್ತದೆ.

 

ದೈತ್ಯ ಅನಕೊಂಡ ದಕ್ಷಿಣ ಅಮೆರಿಕಾದ ಉತ್ತರ ಪ್ರದೇಶಗಳಿಗೆ ಸ್ಥಳಿಯವಾದ ಬೋವಾ ಜಾತಿಯಾಗಿದೆ.
ಹಸಿರು ಬಣ್ಣದ ಈ ಹಾವು ಅತ್ಯಂತ ತೂಕ ಮತ್ತು ದೀರ್ಘ ಕಾಲ ಬದುಕುವ ಹಾವಿನ ಜಾತಿಗಳಲ್ಲಿ ಒಂದಾಗಿದೆ. ಇದು ಸಾಮಾನ್ಯವಾಗಿ 30 ಅಡಿ ಉದ್ದ ಇದೆ. ಅಷ್ಟು ಮಾತ್ರವಲ್ಲದೇ 250 ಕೆಜಿಯಷ್ಟು ಇದು ತೂಕ ತೂಗಬಹುದು. ಹಸಿರು ಅನಕೊಂಡಗಳು ಸಾಮಾನ್ಯವಾಗಿ ಚೌಗು ಮತ್ತು ತೊರೆಗಳಂತಹ ನೀರಿನಲ್ಲಿ ಕಂಡುಬರುತ್ತವೆ. ಸಣ್ಣ ಅನಕೊಂಡಗಳು ಸಾಮಾನ್ಯವಾಗಿ ಸಣ್ಣ ಸಸ್ತನಿಗಳು, ಪಕ್ಷಿಗಳು, ಮೀನುಗಳು, ಇತ್ಯಾದಿಗಳಂತಹ ಬೇಟೆಯನ್ನು ಬೇಟೆಯಾಡುತ್ತವೆ. ಆದರೂ ಇವು ದೊಡ್ಡ ದೊಡ್ಡ ಪ್ರಾಣಿಗಳನ್ನು ತಿನ್ನಲು ಸಮರ್ಥವಾಗಿರುತ್ತವೆ.

ವೈರಲ್ ಆಗುತ್ತಿರುವ ಈ ವೀಡಿಯೊವನ್ನು ಆಫ್ರಿಕನ್ ವೈಲ್ಡ್‌ಲೈ1′ ಪುಟವು ಹಂಚಿಕೊಂಡಿದೆ. ದೈತ್ಯ ಅನಕೊಂಡವು ನೀರಿನಲ್ಲಿ ಮೊಸಳೆಯ ಸಂಪೂರ್ಣ ದೇಹದ ಸುತ್ತಲೂ ಬಿಗಿಯಾಗಿ ಸುತ್ತಿದೆ. ಮೊಸಳೆಯು ಉಸಿರಾಡಲು ಹೆಣಗಾಡುತ್ತಿದೆ, ಕೊನೆಗೆ ಹಾವಿನ ಹಿಡಿತ ಇನ್ನಷ್ಟು ಬಿಗಿಯಾಗುತ್ತಿದ್ದಂತೆ ಮೊಸಳೆ ಜೀವ ಬಿಡುತ್ತದೆ. ಈ ವೀಡಿಯೋ ನೆಟ್ಟಿಗರನ್ನು ನಿಜಕ್ಕೂ ಒಂದು ಕ್ಷಣ ಬೆಚ್ಚಿ ಬೀಳಿಸಿದರೂ ಇದರ ಕಾದಾಟ ಎಲ್ಲರನ್ನೂ ಆಕಷಿರ್ಸಿದೆ.

Leave A Reply

Your email address will not be published.