ಅಮ್ಮನ ಹುಟ್ಟುಹಬ್ಬಕ್ಕೆ ತನ್ನ ಜೀವವನ್ನೇ ಗಿಫ್ಟ್ ಮಾಡಿದ ಮಗ, ಬಾಲಕನ ನಿರ್ಧಾರದ ಹಿಂದಿದೆ ಮನಮಿಡಿಯುವ ಕಥೆ!
‘ಅಮ್ಮ’ ಪ್ರತಿಯೊಂದು ಕ್ಷಣಕ್ಕೂ ಖುಷಿಖುಷಿಯಾಗಿ ಇರಬೇಕು ಎಂಬುದೇ ಪ್ರತಿಯೊಂದು ಮಗುವಿನ ಆಸೆ. ಆದರೆ ಕೆಲವೊಂದಷ್ಟು ಮಕ್ಕಳು ತಾಯಿಯನ್ನು ತಿರಸ್ಕಾರ ಭಾವದಿಂದ ನೋಡುತ್ತಾರೆ. ಆಕೆ ಅದೆಷ್ಟೇ ಕಷ್ಟಪಟ್ಟು ದುಡಿದು ಸಾಕಿದರು ಆಕೆಗಾಗಿ ಕಿಂಚಿತ್ತು ಪ್ರೀತಿ ತೋರಿಸಿದೆ, ತಾವು ನಡೆದಿದ್ದೆ ದಾರಿ ಎಂಬಂತೆ ವರ್ತಿಸುತ್ತಾರೆ. ಆದರೆ ಇಲ್ಲೊಬ್ಬ ಮಗ ತಾಯಿಯ ಹುಟ್ಟುಹಬ್ಬಕ್ಕಾಗಿ ಎಂತಹ ಉಡುಗೊರೆಯನ್ನು ನೀಡಿದ್ದಾನೆ ಗೊತ್ತಾ..
ತನ್ನ ಅಮ್ಮನ ಕಷ್ಟವನ್ನು ಪ್ರತಿದಿನವು ನೋಡುತ್ತಿದ್ದ ಬಾಲಕ ಅದೊಂದು ದಿನ ಆಕೆಯ ಹುಟ್ಟುಹಬ್ಬ ಎಂದು ತಿಳಿದು ಜೀವಕ್ಕಿಂತ ದೊಡ್ಡದಾದ ಉಡುಗೊರೆಯನ್ನು ನೀಡಿದ್ದಾನೆ. ಹೌದು. ತನ್ನ ತಾಯಿಗಾಗಿ ತನ್ನ ಪ್ರಾಣವನ್ನೇ ತೆತ್ತಿದ್ದಾನೆ. ಅಷ್ಟಕ್ಕೂ ಈತನ ಈ ಉಡುಗೊರೆಯ ಹಿಂದಿತ್ತು ತಾಯಿಯ ಕಷ್ಟದ ಕಣ್ಣೀರು.
ತಾಯಿಗೆ ಬರ್ತ್ ಡೇ ಗಿಪ್ಟ್ ಎಂದು ತಾಯಿಯ ಹುಟ್ಟಿದ ದಿನವೇ ಡೆತ್ ನೋಟ್ ಬರೆದುಕೊಂಡು ಬೆಹ್ರೋಡ್ನಲ್ಲಿ 15 ವರ್ಷದ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದು ಪ್ರಕರಣ ಇದೀಗ ಭಾರೀ ಚರ್ಚೆಗೆ ಕಾರಣವಾಗಿದೆ. ರೋಹಿತ್ ಖಾಸಗಿ ಶಾಲೆಯೊಂದರಲ್ಲಿ 10ನೇ ತರಗತಿ ಓದುತ್ತಿದ್ದ. ಈತ ಫ್ಯಾನ್ ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಸ್ಥಳದಲ್ಲಿ ಡೆತ್ ನೋಟು ಕೂಡ ಸಿಕ್ಕಿದೆ. ಇದು ಈತನ ಸಾವಿನ ಹಿಂದಿನ ಅಳಲನ್ನು ತೋರ್ಪಡಿಸಿದೆ. ಈತನ ತಂದೆ ತೀರಿಕೊಂಡಿದ್ದರು. ತಾಯಿ ಹರಿಯಾಣ ಗಡಿಯ ಸಮೀಪವಿರುವ ಭಗವಾದಿ ಖುರ್ದ್ ಗ್ರಾಮದ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಪ್ರಕರಣದ ತನಿಖೆ ನಡೆಸುತ್ತಿರುವ ಎಎಸ್ಐ ರಾಜಕಮಲ್ ಜಾಬ್ಟೆ ಅವರ ಪ್ರಕಾರ, ಪೊಲೀಸರಿಗೆ ಸ್ಥಳದಲ್ಲಿ ಆತ್ಮಹತ್ಯೆ ಪತ್ರ ಸಿಕ್ಕಿದೆ. ಇದರಲ್ಲಿ ರೋಹಿತ್ ಸಾಯುವ ಮುನ್ನ “ಅಮ್ಮ, ನೀನು ಇನ್ಮುಂದೆ ಯಾವತ್ತೂ ಶಾಲೆಗೆ ತಡವಾಗಿ ತಲುಪುವುದಿಲ್ಲ. ನಾನು ನಿಮಗೆ ಪ್ರಪಂಚದಲ್ಲೇ ದೊಡ್ಡ ಉಡುಗೊರೆಯನ್ನು ನೀಡಲಿದ್ದೇನೆ. ಜನ್ಮದಿನದ ಉಡುಗೊರೆ- ಜನ್ಮದಿನದ ಶುಭಾಶಯಗಳು ಮಮ್ಮಿ” ಎಂದು ಬರೆದಿದ್ದಾನೆ.
ತಾಯಿ ಶಾಲೆಗೆ ತಡವಾಗಿ ಬರುತ್ತಿದ್ದರು ಎಂದು ಹೇಳಲಾಗಿದೆ. ಇದಕ್ಕೆ ತಾನೇ ಕಾರಣ ಎಂಬುವುದು ರೋಹಿತ್ ಅನಿಸಿಕೆಯಾಗಿತ್ತು ಎಂದು ಆತ ಯೋಚಿಸಿದ್ದ ಎನ್ನಲಾಗಿದೆ. ಇದಲ್ಲದೆ ಬಾಲಕ ಕೆಲವು ದಿನಗಳಿಂದ ಮಾನಸಿಕವಾಗಿ ನೊಂದುಕೊಂಡಿದ್ದ ಎಂಬ ಮಾಹಿತಿ ಕೂಡ ಇದ್ದು, ಈ ಬಗ್ಗೆ ಕೇಸ್ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.