ನೂಜಿಬಾಳ್ತಿಲದಲ್ಲಿ ತಡ ರಾತ್ರಿ ಅಕ್ರಮ ಜಾನುವಾರು ಸಾಗಾಟ?
ಓರ್ವ ವಶಕ್ಕೆ

ಕಡಬ: ನೂಜಿಬಾಳ್ತಿಲ ಗ್ರಾಮದ ಕನ್ವರೆ ಎಂಬಲ್ಲಿ ಅಕ್ರಮವಾಗಿ ಜಾನುವಾರು ಸಾಗಾಟ ಮಾಡಲಾಗಿದ್ದು, ಖಚಿತ ಮಾಹಿತಿಯ ಮೇರೆಗೆ ಪೋಲಿಸರು ದಾಳಿ ನಡೆಸಿ ಓರ್ವನನ್ನು ವಶಕ್ಕೆ ತೆಗೆದುಕೊಂಡ ಘಟನೆ ಜು.11ರ ತಡ ರಾತ್ರಿ ನಡೆದಿದೆ.

 

ಕನ್ವರೆ-ಕಳಾರ ರಸ್ತೆಯ ಕನ್ವರೆ ಕ್ರಾಸ್ ಬಳಿ ಆಪೆ ರಿಕ್ಷಾದಲ್ಲಿ ಜಾನುವಾರುವೊಂದನ್ನು ಸ್ಥಳೀಯ ವ್ಯಕ್ತಿಗಳು ಸಾಗಾಟ ಮಾಡಿದ್ದು, ಈ ಬಗ್ಗೆ ಮಾಹಿತಿ ತಿಳಿದ ಸ್ಥಳಕ್ಕೆ ತೆರಳಿದಾಗ ಜಾನುವಾರು ಹಾಗೂ ಜಾನುವಾರು ಸಾಗಾಟ ಮಾಡಿದವರು ಪರಾರಿಯಾಗಿದ್ದಾರೆ. ಈ

ವೇಳೆ ಸಾಗಾಟ ಮಾಡಿದವರಲ್ಲಿ ಓರ್ವ ವ್ಯಕ್ತಿ ಪೋಲಿಸರಿಗೆ ಸಿಕ್ಕಿದ್ದು ಈತನನ್ನು ಪೋಲಿಸರು ವಶಕ್ಕೆ ತೆಗೆದುಕೊಂಡಿದ್ದಾರೆ.
ಜಾನುವಾರು ಸಿಕ್ಕಿಲ್ಲ. ಪೋಲಿಸರು ಸ್ಥಳಕ್ಕೆ ತೆರಳಿದಾಗ ಜಾನುವಾರು ಪತ್ತೆಯಾಗಿಲ್ಲ, ಓರ್ವನನ್ನು ವಶಕ್ಕೆ ತೆಗೆದುಕೊಂಡು ವಿಚಾರಿಸಿ ಬಿಡಲಾಗಿದೆ ಎಂದು ಪೋಲಿಸ್ ಮೂಲಗಳಿಂದ ಮಾಹಿತಿ ಲಭಿಸಿದೆ

Leave A Reply

Your email address will not be published.