Home Interesting ದಕ್ಷಿಣ ಆಫ್ರಿಕಾದಲ್ಲಿ ಗುಂಡಿನ ದಾಳಿಯಿಂದ 15 ಮಂದಿ ಸಾವು

ದಕ್ಷಿಣ ಆಫ್ರಿಕಾದಲ್ಲಿ ಗುಂಡಿನ ದಾಳಿಯಿಂದ 15 ಮಂದಿ ಸಾವು

Hindu neighbor gifts plot of land

Hindu neighbour gifts land to Muslim journalist

ದಕ್ಷಿಣ ಆಫ್ರಿಕಾದ ಜೋಹಾಸ್ಸ್ ಬರ್ಗ್ ಸಮೀಪದ ಸೋವೇಟೋ ಪಟ್ಟಣದ ಬಾರ್ ಒಂದರಲ್ಲಿ ಭಾರಿ ಶೂಟ್ ಔಟ್ ನಡೆದಿದ್ದು, ಕನಿಷ್ಠ 15 ಮಂದಿ ಮೃತ ಪಟ್ಟ ಘಟನೆಯೊಂದು ನಡೆದಿದೆ.

ಮಿನಿಬಸ್ಸಿನಲ್ಲಿ ಬಂದ ಕೆಲವು ಜನರು ಬಾರಿನಲ್ಲಿ ಇದ್ದ ವ್ಯಕ್ತಿಗಳಿಗೆ ಮನಬಂದಂತೆ ಶೂಟೌಟ್ ಮಾಡಿದ್ದಾರೆ. ಇದರಲ್ಲಿ ಹಲವು ಮಂದಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಅಲ್ಲಿನ ಪೊಲೀಸರು, ನಮಗೆ ಭಾನುವಾರ 12.30ಕ್ಕೆ ಕರೆಯೊಂದು ಬಂದಿತ್ತು. ಸ್ಥಳಕ್ಕೆ ಬಂದಾಗ ಆಗಾಗಲೇ 12 ಮಂದಿ ಮೃತಪಟ್ಟಿದ್ದಾರೆ ಎಂದು ಹೇಳಿದರು.

ಶನಿವಾರ ತಡ ರಾತ್ರಿ ಮಿನಿಬಸ್ ಮತ್ತು ಟ್ಯಾಕ್ಸಿಗಳಲ್ಲಿ ಬಂದ ದುಷ್ಕರ್ಮಿಗಳು, ಬಾರ್ ನಲ್ಲಿ ಕೆಲವು ಪೋಷಕರ ಮೇಲೆ ಗುಂಡು ಹಾರಿಸಿದ್ದಾರೆ. ಹೋಟೆಲ್ ನಲ್ಲಿ ಆನಂದದಿಂದ ಇರುವ ಸಂದರ್ಭದಲ್ಲಿ ಇದಕ್ಕಿದಂತೆ ಗುಂಡಿನ ಶಬ್ದ ಕೇಳಿದ್ದಾರೆ. ತಕ್ಷಣವೇ ಅಲ್ಲಿಂದ ಜನರು ಹೊರಗಡೆ ಬರಲು ಪ್ರಯತ್ನಿಸಿದ್ದಾರೆ. ಗುಂಡಿನ ದಾಳಿ ನಡೆಸಿರುವ ಉದ್ದೇಶವೇನು ಮತ್ತು ಅವರು ಇದೇ ಜನರನ್ನು ಯಾಕೆ ಟಾರ್ಗೆಟ್ ಮಾಡಿದ್ದಾರೆ ಎಂಬ ಬಗ್ಗೆ ಮಾಹಿತಿ ಇಲ್ಲ ಎಂದು ಪೊಲೀಸರು ಹೇಳಿದ್ದಾರೆ.

ಈ ಘಟನೆಯಲ್ಲಿ 15 ಮಂದಿ ಮೃತ ಪಟ್ಟಿದ್ದಾರೆ. ಈ ಕುರಿತು ತನಿಖೆ ನಡೆಯುತ್ತಿದೆ ಎಂದು ಗೌಟೆಂಗ್ ಠಾಣೆಯ ಪೊಲೀಸ್ ಕಮಿಷನರ್ ಲೆಫ್ಟ್ ನೆಂಟ್ ಜನರಲ್ ಎಲಿಯಾಸ್ ಮಾವೆಲಾ ಹೇಳಿದರು.