Home latest ಪಕ್ಕದ ಮನೆಯ ಯುವಕನೊಂದಿಗೆ ಆಂಟಿ ನಡೆಸಿದಳು ಕಾಮದಾಟ ! ನಂತರ ನಡೆದದ್ದು ಮಹಾಘೋರ ದುರಂತ!

ಪಕ್ಕದ ಮನೆಯ ಯುವಕನೊಂದಿಗೆ ಆಂಟಿ ನಡೆಸಿದಳು ಕಾಮದಾಟ ! ನಂತರ ನಡೆದದ್ದು ಮಹಾಘೋರ ದುರಂತ!

Hindu neighbor gifts plot of land

Hindu neighbour gifts land to Muslim journalist

ಪಕ್ಕದ ಮನೆಯವನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ವಿವಾಹಿತೆಯೋರ್ವಳು ತನ್ನ ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿದ್ದ ಪತಿಯನ್ನೇ ಬರ್ಬರವಾಗಿ ಕೊಂದ ಘಟನೆಯೊಂದು ಹುಣಸೂರಿನಲ್ಲಿ ನಡೆದಿದೆ.

ಹೆಂಡತಿಯಾದವಳು ಗಂಡ ಮನೆ ಸಂಸಾರ ಮಕ್ಕಳು ಅಂತ ಹೊಂದಿಕೊಂಡು ಇದ್ದರೆ ಚೆನ್ನ. ಹಾಗಿದ್ದರೇನೇ ಸುಂದರ ಸಂಸಾರ ಎನಿಸಬಹುದು. ಇನ್ನೂ ಮುಂದಕ್ಕೆ ಹೋಗಿ ತನ್ನ ದೇಹ ಚಪಲಕ್ಕೆ ಅನೈತಿಕ ಸಂಬಂಧಕ್ಕೆ ಇಳಿದರೆ ಇಂತಹ ದುರ್ಘಟನೆಗಳು ನಡೆಯುವುದು ಖಂಡಿತ.

ವಿವಾಹಿತ ಮಹಿಳೆಯೊಬ್ಬಳು ಮಲಗಿದ್ದ ತನ್ನ ಪತಿಯನ್ನು ಕೊಲೆಗೈದ ಆಘಾತಕಾರಿ ಘಟನೆ ತಾಲೂಕಿನ ಹುಣಸೂರು ಹುಂಡಿಮಾಳ ಗ್ರಾಮದಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ಲೋಕಮಣಿ (36) ಮೃತ ದುರ್ದೈವಿ, ಆರೋಪಿ ಪತ್ನಿ ಶಿಲ್ಪಾ.

ಘಟನೆ ವಿವರ : ಲೋಕಮಣಿಗೆ 9 ವರ್ಷಗಳ ಹಿಂದೆ ಎಚ್.ಡಿ .ಕೋಟೆ ತಾಲೂಕಿನ ಅಗಸನಹುಂಡಿ ಶಿಲ್ಪ ಎಂಬುವಳೊಂದಿಗೆ ವಿವಾಹವಾಗಿತ್ತು. ಇವರಿಗೆ 6 ಮತ್ತು 3 ವರ್ಷದ ಇಬ್ಬರು ಮಕ್ಕಳಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಶಿಲ್ಪಾಳಿಗೆ ಪಕ್ಕದ ಮನೆಯ ಅಭಿ ಎಂಬಾತನೊಂದಿಗೆ ಅಕ್ರಮ ಸಂಬಂಧವಿದ್ದು, ಕೆಲದಿನಗಳ ಹಿಂದೆ ಪತಿಗೆ ತಿಳಿದಿದೆ.

ಈ ವಿಚಾರ ತಿಳಿಯುತ್ತಿದ್ದಂತೆ ಗಂಡನ ಕೈಕಾಲು ಹಿಡಿದು, ಮರ್ಯಾದೆ ಹೋಗುತ್ತದೆ ಯಾರಿಗೂ ಹೇಳಬೇಡಿ ತಪ್ಪಾಯಿತು. ಇನ್ನು ಮುಂದೆ ತಪ್ಪು ಮಾಡಲ್ಲವೆಂದು ಹೇಳಿಕೊಂಡಿದ್ದಳು. ಈಕೆಯ ಮಾತಿನಿಂದ ಸಮಾಧಾನಗೊಂಡು ನೆಮ್ಮದಿಯಾಗಿದ್ದ ಗಂಡನನ್ನು ಜೂ.9 ರಂದು ಮಲಗಿದ್ದಲ್ಲೇ ಮಧ್ಯರಾತ್ರಿ ಕತ್ತುಹಿಸುಕಿ ಕೊಲೆಗೈದಿದ್ದಾಳೆ ಈ ಹೆಂಡತಿ.

ಜೂ.10 ರಂದು ಮುಂಜಾನೆ 5 ಗಂಟೆಗೆ ಗಂಡನನ್ನು ಎಬ್ಬಿಸುವಂತೆ ಅತ್ತೆ ಶಿಲ್ಪಾಳಿಗೆ ತಿಳಿಸಿದಾಗ ಅವಳು ನೀವೇ ನಿಮ್ಮ ಮಗನನ್ನು ಎಬ್ಬಿಸಿ ಎಂದು ಹೇಳಿದಳು. ಆಗ ತಾಯಿ ಮಗನ ಬಳಿ ಹೋಗಿ ಎಬ್ಬಿಸಿದಾಗ ಎದ್ದೇಳದೇ ಇದ್ದುದನ್ನು ಕಂಡು ಪತಿ ಲೋಕಮಣಿ ಹೃದಯಘಾತದಿಂದ ನಿಧನ ಹೊಂದಿದ್ದಾರೆಂದು ಊರಿನವರಿಗೆ ನಂಬಿಸಿದ್ದಾಳೆ. ನಂತರ ಅವನ ಮೃತದೇಹವನ್ನು ಸಂಬಂಧಿಕರು ಹಾಗೂ ಊರವರ ಸಹಾಯದಿಂದ ದಹನಗೈದಿದ್ದಾರೆ.

ಆದರೆ ಹೆತ್ತ ತಾಯಿಗೆ ಮಾತ್ರ ಮಗನ ಸಾವಿನಲ್ಲಿ ಸಂಶಯ ಕಾಡಲಾರಂಭಿಸಿದೆ. ಏಕೆಂದರೆ ಮಗನ ಸಾವಿನ ನಂತರ ಸೊಸೆ ಶಿಲ್ಪ ಹಾಗೂ ಪಕ್ಕದ ಮನೆಯ ಯುವಕನ ಜೊತೆ ಹೆಚ್ಚು ಮಾತನಾಡುತ್ತಿದ್ದಳು. ಈಕೆಯ ನಡವಳಿಕೆಯಲ್ಲಿ ಅನುಮಾನಗೊಂಡ ಅತ್ತೆ ರಾಜಮ್ಮ ಹುಣಸೂರು ಗ್ರಾಮಾಂತರ ಪೊಲೀಸರಿಗೆ ದೂರು ನೀಡಿದಾಗ, ತನಿಖೆ ನಡೆಸಿದಾಗ ಅಕ್ರಮ ಸಂಬಂಧ ಬಯಲಿಗೆ ಬಂದಿದೆ.
ಪ್ರಕರಣ ಸಂಬಂಧ ಆರೋಪಿ ಶಿಲ್ಪಾಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೊಪ್ಪಿಸಿದ್ದಾರೆ. ಪ್ರಿಯಕರ ಅಭಿ ತಲೆಮರೆಸಿಕೊಂಡಿದ್ದಾನೆ. ಹೆಂಡತಿಯ ಕಾಮದಾಟಕ್ಕೆ ಈಗ ಇಬ್ಬರು ಮಕ್ಕಳು ತಬ್ಬಲಿಯಾಗಿದ್ದಾರೆ.