ಭೀಕರ ಮಳೆಗೆ ಮನೆ ಕುಸಿದು ವೃದ್ಧೆ ಸಾವು, ಇಬ್ಬರಿಗೆ ಗಂಭೀರ ಗಾಯ

ಕಲುಬುರಗಿ : ಕಳೆದೆರಡು ವಾರಗಳಿಂದ ರಾಜ್ಯದಲ್ಲಿ ಬಿಡದೆ ಮಳೆ ಸುರಿಯುತ್ತಿರುವುದರಿಂದ, ಅನೇಕ ಪ್ರಾಣಹಾನಿ ಸೇರಿದಂತೆ ಮನೆ ಹಾನಿ, ಗುಡ್ಡ ಕುಸಿತಗಳು ಸಂಭವಿಸಿದ್ದು ಅನೇಕ ನಷ್ಟಗಳು ಸಂಭವಿಸಿದೆ. ಇದೀಗ ಕಲಬುರಗಿಯಲ್ಲಿ ಮಳೆಗೆ ವೃದ್ಧೆಯೊಬ್ಬರು ಸಾವನ್ನಪ್ಪಿದ ಘಟನೆ ವರದಿಯಾಗಿದೆ.

 

ಮೃತಪಟ್ಟ ವೃದ್ಧೆ ಆರೀಫಾ ಬೇಗಂ (60 ).

ಕಲುಬುರಗಿಯ ಚಿತ್ತಾಪೂರ ಪಟ್ಟಣದಲ್ಲಿ ಮನೆ ಕುಸಿದು ವೃದ್ಧೆ ಸಾವನ್ನಪ್ಪಿದ್ದು, ಮೃತರ ಪತಿ ಸರ್ಧಾರ್‌ ಅಲಿ ಹಾಗೂ ಮಗಳು ಯಾಸ್ಮಿನ್‌ ಬೇಗಂಗೆ ಸಣ್ಣಪುಟ್ಟ ಗಾಯಗಳಾಗಿದೆ. ಗಾಯಳುಗಳು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

Leave A Reply

Your email address will not be published.