

*ಮೂಡುಬಿದ್ರೆ ಅಕ್ರಮವಾಗಿ ಕಸಾಯಿಖಾನೆ ದಾಳಿ – ಐದು ದನಗಳ ರಕ್ಷಣೆ*ಮೂಡುಬಿದ್ರಿ ಗುಡ್ಡಗಾಡಿನಲ್ಲಿ ಇದ್ದ ಕಸಾಯಿಖಾನೆಗೆ ಪೊಲೀಸ್ ಆಕ್ರಮವಾಗಿ ದಾಳಿ ಮಾಡಿ ಐದು ದನಗಳನ್ನು ರಕ್ಷಣೆ ಮಾಡಿದ ಘಟನೆ ಪುತ್ತಿಗೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಹಾಂಡೇಲು ಎಂಬಲ್ಲಿ ನಡೆದಿದೆ.ಹಂಡೇಲು ನಿವಾಸಿ ಹಾಸನ್ ಬಾವಾ ಎಂಬಾತ ತನ್ನ ಕುಟುಂಬಸ್ಥರೊಂದಿಗೆ ಕಸಾಯಿಖಾನೆ ನಡೆಸುತ್ತಿದ್ದ ಎಂಬಾ ಖಚಿತ ಮಾಹಿತಿಯೊಂದಿಗೆ ನಿರಂಜನ್ ಕುಮಾರ್ ಉಪನಿರೀಕ್ಷಕಾರದ ಸುದೀಪ್ ಸಿದ್ದಪ್ಪ ದಿವಾಕರ್ ರೈ ಸಹಿತ ಸಿಬ್ಬಂದಿಗಳು ಅಲ್ಲಿಗೆ ದಾಳಿ ಮಾಡಿ ಐದು ದನಗಳು, ದನದ ಚರ್ಮ, ಅದರ ವಧೆಗೆ ಬಳಸುವ ಆಯುಧಗಳನ್ನು ವಶಕ್ಕೆ ಪಡೆದು ಕೊಂಡಿದ್ದಾರೆ.ಆರೋಪಿಗಳು ಪರಾರಿಯಾಗಿದ್ದಾರೆ,ನಿರ್ಜನ ಮತ್ತು ಆಕ್ರಮಣವಾಗಿ ಕಸಾಯಿ ಖಾನೆ ನಡೆಸಲು ಪೂರಕ ಪ್ರದೇಶವನ್ನು ಆರೋಪಿ ನಿರ್ಮಿಸಿದ್ದು.ಗುಡ್ಡದ ಬಳಿ ಇದ್ದ ತನ್ನ ಮನೆಯಿಂದಲೇ ನೀರು ಹಾಗೂ ವಿದ್ಯುತ್ ಸಂಪರ್ಕ ಮಾಡಿದ್ದ ಎನ್ನುವ ಅಂಶವು ತನಿಖೆ ವೇಳೆ ಬೆಳಕಿಗೆ ಬಂದಿದೆ.ಆರೋಪಿ ಹಾಸನ್ ಬಾವಾ ವಿರುದ್ಧ 2021ರಲ್ಲಿ ಆಕ್ರಮವಾಗಿ ದನದ ಮಾಂಸ ಇರಿಸಿದ್ದ ಪ್ರಕರಣ ದಾಖಲಾಗಿತ್ತು.












