ಪಾಲ್ತಾಡಿ : ಕಿಂಡಿ ಅಣೆಕಟ್ಟಿನಲ್ಲಿ ಸಿಲುಕಿದ ಬೃಹತ್ ಮರ

Share the Article

ಸವಣೂರು: ಪಾಲ್ತಾಡಿ ಗ್ರಾಮದ ಪಲ್ಲತಡ್ಕ ಎಂಬಲ್ಲಿರುವ ಕಿಂಡಿ ಅಣೆಕಟ್ಟಿನಲ್ಲಿ ಮಳೆ ನೀರಿನೊಂದಿಗೆ ಬಂದ ಬೃಹತ್ ಮರ ಸಿಲುಕಿಕೊಂಡಿದೆ.

ಇದರಿಂದ ಕಿಂಡಿ ಅಣೆಕಟ್ಟಿಗೆ ಅಪಾಯ ತಂದೊಡ್ಡಿದೆ.ಅಲ್ಲದೆ ಸ್ಥಳೀಯರ ತೋಟಗಳಿಗೂ ನೀರು ನುಗ್ಗಿದ್ದು,ತೋಟದಲ್ಲಿ ಹಾಕಿರುವ ಗೊಬ್ಬರ ನೀರುಪಾಲಾಗಿದೆ.

ನಿರಂತರವಾಗಿ ಸುರಿದ ಮಳೆಯಿಂದಾಗಿ ಹೊಳೆಯಲ್ಲಿ ನೀರಿನ ಮಟ್ಟ ಹೆಚ್ಚಳವಾಗಿದೆ,ಸ್ಥಳೀಯ ತೋಟಗಳು ನೀರುಪಾಲಾಗುವ ಭೀತಿ ಎದುರಾಗಿದೆ.

ಸ್ಥಳಕ್ಕೆ ಕಂದಾಯ ಇಲಾಖೆ ಹಾಗೂ ಗ್ರಾ.ಪಂ.ಸದಸ್ಯರು ಭೇಟಿ ನೀಡಿದ್ದಾರೆ.

Leave A Reply