ಪೌರ ಕಾರ್ಮಿಕರ ಹಕ್ಕೊತ್ತಾಯಕ್ಕೆ ಮಣಿಯದ ರಾಜ್ಯ ಸರಕಾರ ಕೆಪಿಸಿಸಿ ಸದಸ್ಯ ಅಬ್ದುಲ್ ರಹಿಮಾನ್ ಪಡ್ಪು ಆಕ್ರೋಶ

ರಾಜ್ಯಾದ್ಯಂತ ಪೌರ ಕಾರ್ಮಿಕರು ಪ್ರತಿಭಟನೆಯು ನಾಲ್ಕನೆ ದಿನಕ್ಕೆ ಕಾಲಿಸಿದೆ‌. ನೇರ ನೇಮಕಾತಿ ಸೇರಿದಂತೆ ಸುರಕ್ಷಿತ ಕವಚಗಳು ನಿವೃತ್ತಿ ಸೇವಾ ಸೌಲಭ್ಯಗಳು ಮತ್ತು ಇತರ ಪ್ರಮುಖ ಕಲ್ಯಾಣ ಸೌಲಭ್ಯಗಳನ್ನು ನೀಡುವಂತೆ ಪೌರ ಕಾರ್ಮಿಕರ ಮೂಲಭೂತ ಹಕ್ಕುಗಳಿಗೆ ಮುಖ್ಯ ಮಂತ್ರಿಗಳ ಸಭೆಯಲ್ಲಿ ಪೌರ ಕಾರ್ಮಿಕರ ಬೇಡಿಕೆಗಳನ್ನು ಪ್ರಸ್ತಾಪಿಸಿದರು ಇದೀಗ ರಾಜ್ಯ ಸರ್ಕಾರ ಬೇಡಿಕೆಗಳನ್ನು ಈಡೇರಿಸದೆ ಪೌರ ಕಾರ್ಮಿಕರನ್ನು ಕಡೆಗಣಿಸುತ್ತಿರುವುದು ಸಂಮಜಸವಲ್ಲ. ಪ್ರತಿಭಟನಾಕಾರರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸಕ್ಕೆ ತೊಡಗಿಸಿಕೊಳ್ಳಲು ಕ್ರಮ ಕೈಗೊಳ್ಳಲು ರಾಜ್ಯ ಸರ್ಕಾರ ವಿಪುಲವಾಗಿದೆ. ಸ್ವಚ್ಛ ಭಾರತ್ ನವ ನಿರ್ಮಾಣ ಟೊಳ್ಳು ಭಾಷಣ ಮಾಡುವುದಲ್ಲದೆ ಇದೀಗ ನಗರದೆಲ್ಲಡೆ ಕಸದ ರಾಶಿ ತುಂಬಿಕೊಂಡು ಗಬ್ಬು ದುರ್ವಾಸನೆ ಬೀರತೊಡಗಿದೆ‌ ಇದರಿಂದಾಗಿ ಜನಸಾಮಾನ್ಯರು ಶಾಲಾ ಮಕ್ಕಳಿಗೆ ಕಷ್ಟಕರವಾದ ವಾತಾವರಣ ತೊಡಗಿದೆ. ರಾಜ್ಯ ಸರ್ಕಾರ ಸ್ವಚ್ಚತೆ ಕಾರ್ಯ ನಿರ್ವಹಿಸಿವ ನೌಕರರನ್ನು ಕಡೆಗಣಿಸಿಸುತ್ತಿರುವುದು ಒಂದು ರೀತಿಯ ಶೋಷಣೆ ಮಾಡಿದಂತೆ ಈ ಕೂಡಲೇ ರಾಜ್ಯ ಸರ್ಕಾರ ಪೌರ ಕಾರ್ಮಿಕರ ಸಮಗ್ರ ಬೇಡಿಕೆಗಳನ್ನು ಈಡೇರಿಸದಿದ್ದಲ್ಲಿ ಪೌರ ಕಾರ್ಮಿಕರ ಹಕ್ಕೊತ್ತಾಯಕ್ಕಾಗಿ ರಾಜ್ಯಾದ್ಯಂತ ಕಾಂಗ್ರೆಸ್ ಪಕ್ಷದ ವತಿಯಿಂದ ಉಗ್ರ ಪ್ರತಿಭಟನೆಯನ್ನು ನಡೆಸಲಾಗುವುದಾಗಿ ಕೆಪಿಸಿಸಿ ಕಾರ್ಮಿಕ ಘಟಕ ಪ್ರದಾನ ಕಾರ್ಯದರ್ಶಿ ಅಬ್ದುಲ್‌ ರಹಿಮಾನ್ ಪಡ್ಪು ಎಚ್ಚರಿಸಿದ್ಗಾರೆ.

 

Leave A Reply

Your email address will not be published.