ನಿವೃತ್ತಿಯ ನಂತರ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರಿಗೆ ಸಿಗಲಿದೆ ಈ ಎಲ್ಲಾ ಸೌಲಭ್ಯಗಳು

ಭಾರತದ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರ ಅಧಿಕಾರಾವಧಿ ಜುಲೈ 24 ರಂದು ಮುಕ್ತಾಯವಾಗಲಿದೆ. ನಿವೃತ್ತಿಯಾದ ನಂತರ ರಾಷ್ಟ್ರಪತಿ ಕೋವಿಂದ್ ಅವರು ವಾಸಿಸು ಹೊಸ ಸ್ಥಳ ಯಾವುದು ಎಂಬ ಪ್ರಶ್ನೆ ಹಲವು ಜನರ ಮನಸ್ಸಿನಲ್ಲಿ ಇದೆ. ಇದಲ್ಲದೇ ಅವರಿಗೆ ಸಿಗುವ ಸೌಲಭ್ಯಗಳೇನು? ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.

ಪ್ರೆಸಿಡೆಂಟ್ ಎಲಿಮೆಂಟ್ಸ್ ಆಕ್ಟ್-1951 ರ ಪ್ರಕಾರ, ಭಾರತದ ರಾಷ್ಟ್ರಪತಿಗಳು ನಿವೃತ್ತಿಯ ನಂತರ ಅನೇಕ ಸರ್ಕಾರಿ ಸೌಲಭ್ಯಗಳನ್ನು ಪಡೆಯುತ್ತಾರೆ.

– ಮಾಸಿಕ ಪಿಂಚಣಿ
– ಇಬ್ಬರು ಕಾರ್ಯದರ್ಶಿಗಳು ಮತ್ತು ದೆಹಲಿ ಪೊಲೀಸರ ಭದ್ರತೆ
– ಕನಿಷ್ಠ 8 ಕೊಠಡಿಗಳೊಂದಿಗೆ ಸುಸಜ್ಜಿತ ಸರ್ಕಾರಿ ಬಂಗಲೆ
– 2 ಲ್ಯಾಂಡ್ ಲೈನ್ ಫೋನ್, 1 ಮೊಬೈಲ್ ಮತ್ತು 1 ಇಂಟರ್ನೆಟ್ ಸಂಪರ್ಕ
– ಉಚಿತ ನೀರು ಮತ್ತು ವಿದ್ಯುತ್
– ಕಾರುಗಳು ಮತ್ತು ಚಾಲಕರು
– ಜೀವಿತಾವಧಿಯವರೆಗೆ ರೈಲು ಮತ್ತು ವಿಮಾನಕ್ಕಾಗಿ ಉಚಿತ ಟಿಕೆಟ್
-ಅಧ್ಯಕ್ಷರ ಪತ್ನಿಗೆ ಕಾರ್ಯದರ್ಶಿ 30,000 ರೂ. ನೆರವು

ಮಾಧ್ಯಮ ವರದಿಗಳ ಪ್ರಕಾರ, ನಿವೃತ್ತಿಯ ನಂತರ, ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರು ರಾಷ್ಟ್ರ ರಾಜಧಾನಿ ದೆಹಲಿಯ 12 ಜನಪಥ್‌ನಲ್ಲಿರುವ ನಿವಾಸದಲ್ಲಿ ವಾಸಿಸಲಿದ್ದಾರೆ, ಇದು ಲುಟ್ಯೆನ್ಸ್ ದೆಹಲಿಯ ಅತಿದೊಡ್ಡ ಬಂಗಲೆಗಳಲ್ಲಿ ಒಂದಾಗಿದೆ. ಆದರೆ, ಅವರ ಹೆಸರಿಗೆ ಇನ್ನೂ ಹಂಚಿಕೆಯಾಗಿಲ್ಲ.

Leave A Reply

Your email address will not be published.