ಮೀನು ಹಿಡಿಯುತ್ತಿದ್ದಾಗ, ಹಠಾತ್ ಎದೆನೋವು, ಮೀನುಗಾರ ಸಾವು!

Share the Article

ಕಾಪು : ದೋಣಿಯಲ್ಲಿ ಮೀನು ಹಿಡಿಯುತ್ತಿದ್ದ ಸಂದರ್ಭದಲ್ಲಿ ಮೀನುಗಾರರೊಬ್ಬರಿಗೆ ಹಠಾತ್ತಾಗಿ ಎದೆನೋವು ಕಾಣಿಸಿಕೊಂಡಿದ್ದರಿಂದ, ನೀರಿಗೆ ಬಿದ್ದು ಮೃತಪಟ್ಟ ಘಟನೆ ಜು.1ರಂದು ಮಟ್ಟು ಗ್ರಾಮದಲ್ಲಿ ನಡೆದಿದೆ.

ಮೃತರನ್ನು ಮಟ್ಟು ಗ್ರಾಮದ ಗುಂಡಡ್ಕ ನಿವಾಸಿ ಗಣೇಶ್ (45) ಎಂದು ಗುರುತಿಸಲಾಗಿದೆ.

ಇವರು ದೋಣಿಯಲ್ಲಿ ಮಟ್ಟು ಗ್ರಾಮದ ಪಾಪನಾಶಿನಿ ನದಿಯಲ್ಲಿ ಮೀನು ಹಿಡಿಯುತ್ತಿರುವಾಗ ಎದೆ ನೋವು ಕಾಣಿಸಿಕೊಂಡಿತ್ತೆನ್ನ ಲಾಗಿದೆ. ಕೂಡಲೇ ಅವರು ದೋಣಿಯಿಂದ ನೀರಿಗೆ ಬಿದ್ದಿದ್ದಾರೆ. ಕೂಡಲೇ ಬೇರೆ ದೋಣಿಯವರು ಬಂದು ಇವರನ್ನು ನೀರಿನಿಂದ ಮೇಲಕ್ಕೆ ಎತ್ತಿ ದಡಕ್ಕೆ ತಂದು, ತೀವ್ರವಾಗಿ ಅಸ್ವಸ್ಥಗೊಂಡ ಇವರನ್ನು ಕೂಡಲೇ ಉಡುಪಿ ಜಿಲ್ಲಾಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ ದಾರಿ ಮಧ್ಯೆ ಮೃತಪಟ್ಟಿದ್ದಾರೆ.

ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave A Reply