ಇದು ವಿಶ್ವದ ಅತ್ಯಂತ ದುಬಾರಿ ಪನ್ನೀರ್ | ಇದರ ಬೆಲೆ ಕೇಳಿದರೆ ನೀವು ಶಾಕ್ ಆಗುವುದು ಪಕ್ಕಾ !!
ಸಾಮಾನ್ಯವಾಗಿ ಪನ್ನೀರ್ ಎಂದರೆ ಸಣ್ಣ ಮಕ್ಕಳು, ಹಿರಿಯರು ಪ್ರತಿಯೊಬ್ಬರಿಗೂ ಇಷ್ಟ. ಅದರಲ್ಲಿಯೂ ವೆಜ್ ಪ್ರಿಯರಿಗೆ ಪನ್ನೀರ್ ಬಹಳ ಪ್ರಿಯ. ಪನ್ನೀರ್ ಮಸಾಲ ಪನ್ನೀರ್ ಬಟರ್ ಮಸಾಲ, ಪನ್ನೀರ್ ಟಿಕ್ಕಾ ಮುಂತಾದ ಐಟಮ್ ಗಳನ್ನು ಚಪ್ಪರಿಸಿ ತಿನ್ನುತ್ತಾರೆ. ವಿಶ್ವದ ಅತ್ಯಂತ ದುಬಾರಿ ಚೀಸ್ ಎಂದು ಕರೆಯಲ್ಪಡುವ ಪನ್ನೀರ್ ಒಂದರ ಬೆಲೆ ಭಾರೀ ದುಬಾರಿಯಾಗಿದೆ. ಅಷ್ಟಕ್ಕೂ ಈ ಪನ್ನೀರ್ ವಿಶೇಷತೆ ಏನು? ಈ ಪನ್ನೀರ್ ಬೆಲೆ ಏಕೆ ದುಬಾರಿ ಎಂಬುವುದರ ಮಾಹಿತಿ ಇಲ್ಲಿದೆ ನೋಡಿ.
ಹೌದು. ಈ ವಿಶೇಷ ಪನ್ನೀರ್ ಬೆಲೆ ಪ್ರತಿ ಕಿಲೋಗ್ರಾಮ್‍ಗೆ ಸುಮಾರು 800 ರಿಂದ 1,000 ಯುರೋಗಳಷ್ಟು ಅಂದರೆ 82,000 ರೂ.ಗಳಷ್ಟು ವೆಚ್ಚವಾಗುತ್ತದೆ. ಏಕೆಂದರೆ ಈ ಚೀಸ್ ಪನ್ನೀರ್ ಅನ್ನು ಕತ್ತೆಯ ಹಾಲಿನಿಂದ ತಯಾರಿಸಲಾಗುತ್ತದೆ. ತುಂಡು ತುಂಡಾಗಿರುವ ಈ ಪನ್ನೀರ್ ಬಿಳಿಬಣ್ಣದಿಂದ ಕೂಡಿರುತ್ತದೆ. ಇದು ಒಂದು ರೀತಿ ಸ್ಪ್ಯಾನಿಷ್ ಮ್ಯಾಂಚೆಗೊ ಚೀಸ್‍ನಂತೆಯೇ ಇರುತ್ತದೆ. ಆದರೆ ಅದಕ್ಕಿಂತಲೂ ಹೆಚ್ಚು ರುಚಿಕರವಾಗಿರುತ್ತದೆ. ಸ್ಪ್ಯಾನಿಷ್ ಮ್ಯಾಂಚೆಗೊ ಬ್ರಿಟಿಷ್ ಸೂಪರ್ ಮಾರ್ಕೆಟ್‍ಗಳಲ್ಲಿ ಪ್ರತಿ ಕೆ.ಜಿಗೆ 13 ಡಾಲರ್ (1,025ರೂ.) ಆಗಿದೆ. ಆದರೆ ಇದಕ್ಕಿಂತಲೂ ಕತ್ತೆ ಹಾಲಿನಿಂದ ತಯಾರಿಸಲಾದ ಈ ಪನ್ನೀರ್ ಹೆಚ್ಚು ದುಬಾರಿ ಆಗಿದೆ.
ಪುಲೆ ಎಂದು ಕರೆಯಲಾಗುವ ಕತ್ತೆಗಳ ಗಿಣ್ಣನ್ನು ಸೆರ್ಬಿಯಾದ ಜಸಾವಿಕಾದಲ್ಲಿರುವ ಕತ್ತೆ ಫಾರ್ಮ್‍ನಲ್ಲಿ ಉತ್ಪಾದಿಸಲಾಗುತ್ತದೆ. ಈ ಗಿಣ್ಣಿನಿಂದ ಒಂದು ಕಿಲೋಗ್ರಾಂ ಚೀಸ್ ಪನ್ನೀರ್ ತಯಾರಿಸಲು ಸುಮಾರು 25 ಲೀಟರ್ ತಾಜಾ ಕತ್ತೆ ಹಾಲು ಬೇಕಾಗುತ್ತದೆ ಎನ್ನಲಾಗುತ್ತದೆ. ಪೌರಾಣಿಕ ಕಥೆಗಳಲ್ಲಿ ಈಜಿಪ್ಟ್ ರಾಣಿ ಕ್ಲಿಯೋಪಾತ್ರ ತಮ್ಮ ಸೌಂದರ್ಯವನ್ನು ಕಾಪಾಡಿಕೊಳ್ಳಲು ಈ ಕತ್ತೆ ಹಾಲಿನಿಂದ ಪ್ರತಿದಿನ ಸ್ನಾನ ಮಾಡುತ್ತಿದ್ದರು ಎಂದು ಹೇಳಲಾಗುತ್ತಿದೆ.