ಟೈಲರ್ ಕನ್ಹಯ್ಯಾ ಲಾಲ್ ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಆಘಾತಕಾರಿ ಮಾಹಿತಿ ಬಹಿರಂಗ !!

Share the Article

ರಾಜಸ್ಥಾನದ ಉದಯಪುರದಲ್ಲಿ ನಿನ್ನೆ ಕನ್ಹಯ್ಯಾ ಲಾಲ್ ಎಂಬ ಟೈಲರ್ ಅನ್ನು ಹಾಡಹಗಲಿನಲ್ಲಿ ತಾಲಿಬಾನ್ ರೀತಿಯಲ್ಲಿ ಹತ್ಯೆ ಮಾಡಲಾಗಿದೆ. ಹತ್ಯೆಗೀಡಾದ ಕನ್ಹಯ್ಯಾ ಲಾಲ್ ಪ್ರಾಥಮಿಕ ಮರಣೋತ್ತರ ಪರೀಕ್ಷೆ ವರದಿ ಹೊರಬಿದ್ದಿದ್ದು, ವರದಿಯಲ್ಲಿ ಕನ್ಹಯ್ಯಾ ಕತ್ತಿನ ಮೇಲೆ 7-8 ಭಾರಿ ಇರಿತ, ದೇಹದ ಮೇಲೆ 2 ಡಜನ್‌ಗೂ ಹೆಚ್ಚು ಗಾಯಗಳು ಪತ್ತೆಯಾಗಿವೆ.

ಕನ್ಹಯ್ಯಾ ಲಾಲ್ ಪ್ರಾಥಮಿಕ ಮರಣೋತ್ತರ ಪರೀಕ್ಷೆಯ ವರದಿಯಲ್ಲಿ, ಅನೇಕ ಮಾಹಿತಿಗಳು ಬಹಿರಂಗವಾಗಿವೆ. ದೇಹದ ಮೇಲೆ ಎರಡು ಡಜನ್‌ಗಿಂತಲೂ ಹೆಚ್ಚು ಗಾಯದ ಗುರುತುಗಳು ಕಂಡುಬಂದಿವೆ. ವರದಿ ಪ್ರಕಾರ ಆರೋಪಿಗಳು ಕನ್ಹಯ್ಯಾ ಲಾಲ್ ಕುತ್ತಿಗೆಗೆ ಏಳರಿಂದ ಎಂಟು ಚಾಕುವಿನಿಂದ ಇರದಿದ್ದಾರೆ.

ವರದಿಯಲ್ಲಿ ಕನ್ಹಯ್ಯಾ ಲಾಲ್‌ನ ಒಂದು ಕೈ ತುಂಡಾಗಿರುವುದು ಕೂಡ ಪತ್ತೆಯಾಗಿದೆ. ವರದಿಯ ಪ್ರಕಾರ, ಕನ್ಹಯ್ಯಾ ಲಾಲ್ ಸಾವಿಗೆ ಪ್ರಮುಖ ಕಾರಣವೆಂದರೆ ಭಾರೀ ರಕ್ತಸ್ರಾವ ಮತ್ತು ದೇಹದ ಒಂದೇ ಭಾಗದಲ್ಲಿ ಒಂದೇ ಕಡೆ ಹಲವು ಬಾರಿ ಇರಿದಿರುವುದು ಎಂಬ ಮಾಹಿತಿ ಲಭ್ಯವಾಗಿದೆ.

Leave A Reply