Home News ಟೈಲರ್ ಶಿರಚ್ಛೇದ ಮಾಡಿದವರನ್ನು ನಡು ರಸ್ತೆಯಲ್ಲಿ ಗಲ್ಲಿಗೆ ಹಾಕಲು ಆಗ್ರಹ !! | ಪ್ರಕರಣವನ್ನು ಎನ್ಐಎಗೆ...

ಟೈಲರ್ ಶಿರಚ್ಛೇದ ಮಾಡಿದವರನ್ನು ನಡು ರಸ್ತೆಯಲ್ಲಿ ಗಲ್ಲಿಗೆ ಹಾಕಲು ಆಗ್ರಹ !! | ಪ್ರಕರಣವನ್ನು ಎನ್ಐಎಗೆ ಹಸ್ತಾಂತರಿಸಿದ ಕೇಂದ್ರ ಸರ್ಕಾರ

Hindu neighbor gifts plot of land

Hindu neighbour gifts land to Muslim journalist

ನೂಪುರ್ ಶರ್ಮಾ ಅವರ ಪರ ಪೋಸ್ಟರ್ ಹಾಕಿದ್ದ ಟೈಲರ್ ಅನ್ನು ನಿನ್ನೆ ಹಾಡಹಗಲೇ ಇಬ್ಬರು ಹಂತಕರು ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ಈ ಹತ್ಯೆಯನ್ನು ಖಂಡಿಸಿ ದೇಶಾದ್ಯಂತ ಪ್ರತಿಭಟನೆಗಳು ನಡೆಯುತ್ತಿದ್ದು, ಈ ನಡುವೆ ಹತ್ಯೆ ನಡೆಸಿದವರನ್ನು ನಡು ರಸ್ತೆಯಲ್ಲಿ ಗಲ್ಲಿಗೇರಿಸುವಂತೆ ಬಿಹಾರದ ಮಾಜಿ ಸಿಎಂ ಜಿತನ್ ರಾಮ್ ಮಾಂಝಿ ಹೇಳಿದ್ದಾರೆ.

ಘಟನೆ ಬಗ್ಗೆ ಟ್ವೀಟ್ ನಲ್ಲಿ ಕಿಡಿಕಾರಿರುವ ಮಾಂಝಿ, ಉದಯ್ ಪುರದಲ್ಲಿ ನಡೆದ ಕೊಲೆ ತುಂಬಾ ನೋವಿನ ಮತ್ತು ಆಘಾತಕಾರಿ ಸಂಗತಿಯಾಗಿದೆ. ದೇಶದ ಕಾನೂನು ವ್ಯವಸ್ಥೆಯಡಿ ನಿರ್ದಿಷ್ಟ ಧರ್ಮದ ಸ್ವಯಂ ಘೋಷಿತ ರಕ್ಷಕರು ಎಂದು ಕರೆಯಲ್ಪಡುವ ಆರೋಪಿಗಳ ವಿರುದ್ಧ ಶೀಘ್ರವೇ ವಿಚಾರಣೆ ನಡೆಸಿ ಅವರನ್ನು ರಸ್ತೆ ನಡುವೆ ಗಲ್ಲಿಗೇರಿಸಬೇಕು. ಈ ಮೂಲಕ ಧರ್ಮದ ಹೆಸರಿನಲ್ಲಿ ಇಂತಹ ಪೈಶಾಚಿಕ ಕೃತ್ಯ ಎಸಗುವವರಿಗೆ ಎಚ್ಚರಿಕೆಯ ಸಂದೇಶ ರವಾನಿಸಬೇಕು” ಎಂದು ಉಲ್ಲೇಖಿಸಿದ್ದಾರೆ.

ಆರ್ ಜೆಡಿ ಮುಖಂಡ ತೇಜಸ್ವಿ ಯಾದವ್ ಕೂಡಾ ಟ್ವೀಟ್ ಮಾಡಿದ್ದು, ಉದಯಪುರದಲ್ಲಿ ನಡೆದ ಅಮಾನುಷ ಕೃತ್ಯದಿಂದ ತೀವ್ರ ನೊಂದಿದ್ದೇನೆ. ಧಾರ್ಮಿಕ ಉಗ್ರವಾದ ಕೇವಲ ಯಾವುದೇ ಸಮುದಾಯವನ್ನು ಮಾತ್ರವಲ್ಲ ಅವರ ಆಲೋಚನಾ ಸಾಮರ್ಥ್ಯವನ್ನು ಕೂಡಾ ಕುರುಡರನ್ನಾಗಿ ಮಾಡಿಸುತ್ತದೆ. ಈ ಕೃತ್ಯ ಎಸಗಿದವರಿಗೆ ಕೂಡಲೇ ಶಿಕ್ಷೆಯಾಗಬೇಕು ಎಂದು ತಿಳಿಸಿದ್ದಾರೆ.

ಅದಲ್ಲದೆ, ಟೈಲರ್ ಶಿರಚ್ಛೇದ ಪ್ರಕರಣವನ್ನು ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‌ಐಎ) ವಿಚಾರಣೆ ನಡೆಸಲಿದೆ. ಟೈಲರ್ ಕನ್ಹಯ್ಯ ಲಾಲ್ ಅವರ ಭೀಕರ ಹತ್ಯೆ ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಳ್ಳುವಂತೆ ಕೇಂದ್ರ ಗೃಹ ಸಚಿವಾಲಯವು ಎನ್‌ಐಎಗೆ ನಿರ್ದೇಶನ ನೀಡಿದೆ.
ಪ್ರಕರಣದಲ್ಲಿ ಭಾಗಿಯಾಗಿರುವ ಸಂಘಟನೆ ಮತ್ತು ಅಂತರರಾಷ್ಟ್ರೀಯ ಸಂಬಂಧದ ಕುರಿತಂತೆ ಎನ್‌ಐಎ ಸಮಗ್ರ ತನಿಖೆ ನಡೆಸಲಿದೆ ಎಂದು ಗೃಹ ಸಚಿವಾಲಯ ಟ್ವೀಟ್ ಮೂಲಕ ತಿಳಿಸಿದೆ.

ಸಾಮಾಜಿಕ ಮಾಧ್ಯಮಗಳಲ್ಲಿ ವಿವಾದಾತ್ಮಕ ಪೋಸ್ಟ್‌ವೊಂದನ್ನು ಹಾಕಿಕೊಂಡಿದ್ದರು ಎಂಬ ಕಾರಣಕ್ಕೆ ರಾಜಸ್ಥಾನದ ಉದಯಪುರದಲ್ಲಿ ಟೈಲರ್‌ ಕನ್ಹಯ್ಯ ಲಾಲ್‌ ಎಂಬುವವರನ್ನು ಇಬ್ಬರು ದುಷ್ಕರ್ಮಿಗಳು ಮಂಗಳವಾರ ಕತ್ತು ಸೀಳಿ ಹತ್ಯೆ ಮಾಡಿದ್ದರು. ಈ ಘಟನೆ ಖಂಡಿಸಿ ರಾಜಸ್ಥಾನದ ಜತೆಗೆ ದೇಶದ ವಿವಿಧೆಡೆ ಪ್ರತಿಭಟನೆಗಳು ಆರಂಭವಾಗಿವೆ. ಘಟನೆ ಸಂಬಂಧ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.