

ಕೆಲವೊಬ್ಬರು ಹಾಗೆನೇ ಕೆಲಸ ಅಂದರೆ ದೇವರಿಗೆ ಸಮಾನ ಎಂದು ತಿಳ್ಕೋತ್ತಾರೆ. ಅಷ್ಟು ಮಾತ್ರವಲ್ಲ ನಿಷ್ಠೆಯಿಂದ ದುಡಿಯುತ್ತಾರೆ. ಹಾಗಾಗಿಯೇ ಅವರಿಗೆ ಕೆಲವೊಮ್ಮೆ ಯಾರೂ ಊಹಿಸದಂತಹ ಕೆಲವೊಂದು ಆಶ್ಚರ್ಯಕರ ಘಟನೆ ನಡೆಯುತ್ತದೆ. ಹಾಗೆಯೇ ಇಲ್ಲೊಬ್ಬ ವ್ಯಕ್ತಿಗೂ ಕೂಡಾ ಅಂತಹುದೇ ಒಂದು ಬಂಪರ್ ಲಾಟರಿ ದೊರಕಿದೆ. ಹೇಗೇ ಅಂತೀರಾ? ಬನ್ನಿ ತಿಳಿಯೋಣ.
ಒಂದು ದಿನವೂ ರಜೆ ತೆಗೆದುಕೊಳ್ಳದೇ ಸತತ 27 ವರ್ಷ ಕೆಲಸ ಮಾಡಿದ್ದಕ್ಕೆ ಈ ಉದ್ಯೋಗಿಗೆ ಬರೋಬ್ಬರಿ 1.2 ಕೋಟಿ ರೂಪಾಯಿ ಸಿಕ್ಕಿದೆ. ಅಂದ ಹಾಗೆ ಈ ವ್ಯಕ್ತಿಗೆ ಭಕ್ಷೀಸು ಕೊಟ್ಟಿರುವುದು ಆತ ಕೆಲಸ ಮಾಡುತ್ತಿರುವ ಕಂಪನಿಯಲ್ಲ. ಸಾರ್ವಜನಿಕರು !
https://twitter.com/IBC_Yoh/status/1538542045824004100?ref_src=twsrc%5Etfw%7Ctwcamp%5Etweetembed%7Ctwterm%5E1538542045824004100%7Ctwgr%5E%7Ctwcon%5Es1_c10&ref_url=https%3A%2F%2Fd-32921149442535723284.ampproject.net%2F2206101637000%2Fframe.html
ಹೌದು, ಕೆವಿನ್ ಫೋರ್ಡ್ ಎಂಬಾತ ಬರ್ಗರ್ ಕಿಂಗ್ ಕಂಪನಿಯಲ್ಲಿ ಸತತ 27 ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಅದೂ ಕೂಡ ಒಂದು ದಿನವೂ ರಜೆಯನ್ನು ತೆಗೆದುಕೊಳ್ಳದೇ ತಮ್ಮ ಕರ್ತವ್ಯ ನಿಭಾಯಿಸುತ್ತಿದ್ದಾರೆ. ಅವರ ಈ ಬದ್ಧತೆಯ ಕಾರ್ಯಕ್ಕೆ ಕಂಪನಿಯು ಅವರಿಗೆ ಸತ್ಕರಿಸಿದೆ.
ಆದರೆ, ಕೆವಿನ್ ಮಗಳು ಸೆರಿನಾ ತನ್ನ ತಂದೆಯ ಪರಿಶ್ರಮಕ್ಕೆ ಏನಾದರೂ ಕೊಡುಗೆ ನೀಡಬೇಕೆಂದು ಬಯಸಿದ್ದಳು. ಅದರಂತೆ ಗೋಫಂಡ್ ಮಿ ಎಂಬ ಸಂಸ್ಥೆಯ ವೆಬ್ ಸೈಟ್ ನಲ್ಲಿ ಈ ವಿಚಾರವನ್ನು ಸಾರ್ವಜನಿಕರೊಂದಿಗೆ ಹಂಚಿಕೊಂಡಿದ್ದಳು. ಇದಕ್ಕೆ ಸ್ಪಂದಿಸಿದ ಸಾರ್ವಜನಿಕರು 1,50,000 ಡಾಲರ್ ಅಂದರೆ ಬರೋಬ್ಬರಿ 1,17,44,100 ರೂಪಾಯಿಗಳ ದೇಣಿಗೆ ನೀಡಿದ್ದಾರೆ. ಹಾಲಿವುಡ್ ನ ಖ್ಯಾತ ಹಾಸ್ಯನಟ ಡೇವಿಡ್ ಸ್ಪೇಡ್ ಅವರು 5,000 ಡಾಲರ್ (3,91,470 ರೂಪಾಯಿ) ದೇಣಿಗೆ ನೀಡಿದ್ದಾರೆ. ಸಾರ್ವಜನಿಕರು ನೀಡಿದ ಈ ದೇಣಿಗೆಯನ್ನು ಕಂಡ ಕೆವಿನ್ ಭಾವುಕರಾಗಿದ್ದಾರೆ.
ಈ ಬಗ್ಗೆ ಮಾತನಾಡಿರುವ ಸೆರಿನಾ, ನನ್ನ ತಂದೆ ಕಳೆದ 27 ವರ್ಷಗಳಿಂದ ಒಂದು ದಿನವೂ ರಜೆಯನ್ನು ಹಾಕದೇ ಕೆಲಸ ಮಾಡಿದ್ದಾರೆ ಎಂದು ಹೇಳಿದ್ದಾರೆ. ಕೆವಿನ್ ಕುರಿತಾದ ವಿಡಿಯೋ ಇಂಟರ್ನೆಟ್ ನಲ್ಲಿ ವೈರಲ್ ಆಗಿದ್ದು, ಅವರ ಕರ್ತವ್ಯ ನಿಷ್ಠೆಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.













