ದೇಶದಲ್ಲಿ ಪ್ರತೀ ಗಂಟೆಗೆ 17 ಮಂದಿ ಅಪಘಾತದಲ್ಲಿ ಸಾವು !! | ವಾಹನಗಳಿಗೆ ಇನ್ನು ಮುಂದೆ 6 ಏರ್ ಬ್ಯಾಗ್ ಕಡ್ಡಾಯ

ನವದೆಹಲಿ: ವಾಹನಗಳ ಪ್ರಯಾಣಿಕರ ಸುರಕ್ಷತೆಗೆ ಅತಿ ಹೆಚ್ಚಿನ ಆದ್ಯತೆ ನೀಡುತ್ತಿರುವ ಕೇಂದ್ರ ಸರ್ಕಾರ, ಕಳೆದ ಕೆಲ ವರ್ಷಗಳಲ್ಲಿ ಹಲವು ಹೊಸ ರಸ್ತೆ ಸುರಕ್ಷತಾ ನಿಯಮಗಳನ್ನು ಜಾರಿಗೆ ತಂದಿದೆ.

ಇದೀಗ ಮತ್ತೊಂದು ನಿಯಮ ಜಾರಿಗೊಳಿಸಲು ಮುಂದಾಗಿದ್ದು, ಎಂಟು ಸೀಟಿನ ವಾಹನಗಳಿಗೆ ಆರು ಏರ್‌ಬ್ಯಾಗ್ ಇರಲೇಬೇಕೆಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ. 8 ಪ್ರಯಾಣಿಕರನ್ನು ಸಾಗಿಸುವ ಎಲ್ಲಾ ವಾಹನಗಳಲ್ಲಿ ಆರು ಏರ್ ಬ್ಯಾಗ್ ಅಳವಡಿಕೆ ಕಡ್ಡಾಯ ನಿಯಮವನ್ನು ತಿಳಿಸಿದ್ದಾರೆ.

ವಾಹನಗಳನ್ನು ಮತ್ತಷ್ಟು ಸುರಕ್ಷತೆ ಹೆಚ್ಚಿಸುವ ಅನಿವಾರ್ಯವಿದ್ದು, ದೇಶದಲ್ಲಿ ಪ್ರತಿವರ್ಷ ರಸ್ತೆ ಅಪಘಾತದಿಂದಲೇ 5 ಲಕ್ಷಕ್ಕೂ ಅಧಿಕ ಮಂದಿ ಮೃತಪಡುತ್ತಿದ್ದಾರೆ. ವಿಶ್ವದಲ್ಲೇ ಭಾರತದಲ್ಲೇ ಅಧಿಕ ಮಂದಿ ಅಪಘಾತದಲ್ಲಿ ಮೃತಪಡುವವರ ಸಂಖ್ಯೆ ಅಧಿಕವಾಗಿದ್ದು, ಇದಕ್ಕೆ ವಾಹನಗಳು ಸುರಕ್ಷತಾ ಕ್ರಮ ವೈಫಲ್ಯವೂ ಆಗಿವೆ. ವಾಹನ ತಯಾರಿಕಾ ಕಂಪನಿಗಳು ಈ ಬಗ್ಗೆ ಹೆಚ್ಚು ಒತ್ತು ನೀಡಬೇಕಿದೆ ಎಂದು ಅವರು ಹೇಳಿದ್ದಾರೆ.

ವಿಶ್ವದ ಬಹುತೇಕ ರಾಷ್ಟ್ರಗಳಿಗೆ ಹೋಲಿಸಿದರೆ, ಭಾರತದಲ್ಲಿವಾಹನಗಳ ಸಂಖ್ಯೆಯೂ ಅಧಿಕವಾಗಿದ್ದು, ಶೇ.11ರಷ್ಟುಸಾವಿನ ಪ್ರಮಾಣವೂ ಇದೆ. ಪ್ರತಿ ಗಂಟೆಗೆ 17ಮಂದಿಮೃತಪಡುತ್ತಿದ್ದು, 10 ಅಪಘಾತ ಪ್ರಕರಣದಲ್ಲಿ 6 ವಾಣಿಜ್ಯವಾಹನಗಳು ಸೇರಿದ್ದು, ಇದರಿಂದ ವರ್ಷಕ್ಕೆ 48,000ಕೋಟಿರೂ. ನಷ್ಟವಾಗುತ್ತಿದೆ ಎಂದು ತಿಳಿಸಿದ್ದಾರೆ.ಇನ್ನು ಮುಂದೆ ತಯಾರಾಗುವ ವಾಹನಗಳಿಗೆ ರೇಟಿಂಗ್ ಕೂಡ ನೀಡಲಾಗುವುದು. ಜನರ ಸುರಕ್ಷತೆಯ ಮಾನದಂಡವನ್ನು ಆಧರಿಸಿ ಈ ರೇಟಿಂಗ್ ಸಿಗಲಿದೆ. ಇದರಿಂದ ಅಪಘಾತವನ್ನು ತಡೆಗಟ್ಟುವ ಉದ್ದೇಶವನ್ನು ಸರ್ಕಾರ ಹೊಂದಿದ್ದು, ವಾಹನ ತಯಾರಕಾ ಖಂಪನಿಗಳು ಅಗತ್ಯವಾಗಿ ಈ ನಿಯಮ ಪಾಲಿಸಬೇಕು ಎಂದು ಹೇಳಿದ್ದಾರೆ.

Leave A Reply

Your email address will not be published.