Home latest ಬೈದು-ಹೊಡೆದವರನ್ನು ಬೆನ್ನಟ್ಟುವ ದೇವರ ಕೋಣ | ಕೋಣದ ಕಾಟಕ್ಕೆ ಬೇಸತ್ತ ಗ್ರಾಮದ ಮೂವರು ಯುವಕರು

ಬೈದು-ಹೊಡೆದವರನ್ನು ಬೆನ್ನಟ್ಟುವ ದೇವರ ಕೋಣ | ಕೋಣದ ಕಾಟಕ್ಕೆ ಬೇಸತ್ತ ಗ್ರಾಮದ ಮೂವರು ಯುವಕರು

Hindu neighbor gifts plot of land

Hindu neighbour gifts land to Muslim journalist

ದೇವರಿಗೆ ಬಿಟ್ಟ ಕೋಣವೊಂದು ತನಗೆ ಬೈದು ಹೊಡೆದವರನ್ನು ಬೆಂಬಿಡದೆ ಕಾಡುತ್ತಿರೋ ವಿಚಿತ್ರ ಘಟನೆ ಕೊಪ್ಪಳ ತಾಲೂಕಿನ ಹಳೇ ಬಂಡಿಹರ್ಲಾಪುರ ಗ್ರಾಮದಲ್ಲಿ ನಡೆದಿದೆ. ಜಿಲ್ಲೆಯಲ್ಲಿರುವ ಪ್ರಸಿದ್ಧ ದೇವರಾದ ಶ್ರೀಕಂಟೆಮ್ಮ ದುರ್ಗಾ ದೇವಿಯ ಹರಕೆಗೆಂದು ಕೋಣವನ್ನು ಬಿಡಲಾಗಿತ್ತು. ಈ ಕೋಣ ಗ್ರಾಮದಲ್ಲಿ ಮೇವು ತಿನ್ನುತ್ತಿದ್ದ ವೇಳೆ ರೋಷನ್ ದೇವರಾಜು ಹಾಗೂ ಅನಿಲ್ ಎಂಬುವರು ಬೈದು ಓಡಿಸಿದ್ದಾರೆ. ಹೊಡೆದು ಓಡಿಸಿದವರ ವಿರುದ್ಧ ಕೋಣ ತಿರುಗಿಬಿದ್ದಿದ್ದು, ರೋಷನ್, ಅನಿಲ್, ದೇವರಾಜು ಎಲ್ಲಿ ಕಂಡರೂ ತಿವಿದು ಅಟ್ಟಾಡಿಸಿಕೊಂಡು ಹೋಗುತ್ತಿದೆ. ಆದರೆ ಊರಿನ ಉಳಿದ ಗ್ರಾಮಸ್ಥರಿಗೆ ಏನೂ ಉಪದ್ರ ಮಾಡಲ್ಲ ಕೋಣ.

ರೋಷನ್ ಹೊರಬರುವುದನ್ನೇ ಕಾಯುತ್ತಿರುವ ಕೋಣ ಕಳೆದ ಕೆಲ ದಿನಗಳಿಂದ ಕಾಟ ಕೊಡುತ್ತಿದೆ. ಇದರಿಂದ ರೋಷನ್ ಮನೆಯಿಂದ ಹೊರಬರದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇತ್ತ ದೇವಿಗೆ ಹರಕೆಯಾಗಿ ಬಿಟ್ಟಿರುವ ಕೋಣ ಇದಾಗಿರುವುದರಿಂದ ಇದು ದೇವಿಯ ಪವಾಡ ಹಾಗಾಗಿ ಈ ರೀತಿ ತೊಂದರೆ ಕೊಡುತ್ತಿದೆ ಎಂದು ಗ್ರಾಮಸ್ಥರು ಅಭಿಪ್ರಾಯಪಟ್ಟಿದ್ದಾರೆ. ರೋಷನ್ ಜೊತೆ ಕೋಣದೊಂದಿಗೆ ತಪ್ಪಾಯಿತು ಎಂದು ಬೇಡಿಕೊಳ್ಳಲು ಗ್ರಾಮಸ್ಥರು ಸಲಹೆ ನೀಡಿದ್ದಾರೆ.

ರೋಷನ್ ಅಲಿ ಕೋಣಕ್ಕೆ ಒಂದೆಡರಡು ಏಟು ನೀಡಿದ್ದಾನಡ‌ ಹಾಗಾಗಿ ಕೋಣ ಬೆನ್ನು ಬಿದ್ದಿದೆ. ಇದು ಕಂಟೆಮ್ಮ ದೇವಿಯ ಪಾವಡವಾಗಿದೆ. ಅದಕ್ಕೆ ಮಹಿಳೆಯರಾಗಲಿ, ಪುರುಷರಾಗಲಿ, ಮಕ್ಕಳೇ ಇರಲಿ ಯಾರು ಬೈಯ್ಯುತ್ತಾರೋ, ಹೊಡಿತಾರೋ ಅವರನ್ನು ಅಟ್ಟಾಡಿಸುತ್ತದೆ ಎಂದು ಹೇಳುತ್ತಾರೆ. ಅದಾಗ್ಯೂ ಶಾಸ್ರೋಕ್ತವಾಗಿ ಕ್ಷಮೆಯಾಚಿಸುವಂತೆ ಗ್ರಾಮಸ್ಥರು ಅಲಿಗೆ ಹೇಳುತ್ತಿದ್ದಾರೆ.

ಇದು ಶ್ರೀ ಕಂಟೆಮ್ಮ ದುರ್ಗಾ ದೇವಿಯ ಹರಕೆಯ ಕೋಣವಾಗಿದೆ. ಈ ಕೋಣಕ್ಕೆ ಯಾರಾದರು ಬೈದರೆ ಅದು ಸುಮ್ಮನೆ ನಿಲ್ಲಲು ಬಿಡುವುದಿಲ್ಲ ಹಾಯಲು ಹೋಗುತ್ತದೆ, ಅಟ್ಟಾಡಿಸುತ್ತದೆ. ಅಷ್ಟೇ ಅಲ್ಲ ಜಮೀನುಗಳಲ್ಲಿ ಮೇಯುತ್ತಿದ್ದಾಗ ಬೈದರೂ ಬೆನ್ನು ಬೀಳುತ್ತದೆ. ತನಗೆ ಬಡಿದಿದ್ದಾರೆ ಎಂಬ ಕಾರಣಕ್ಕೆ ಹರಕೆಯ ಕೋಣ ದೇವರಾಜ್, ಅನಿಲ್, ರೋಷನ್ ಅಲಿ ಎಂಬವರನ್ನು ಕಂಡಕಂಡಲ್ಲಿ ಅಟ್ಟಾಡಿಸಿಕೊಂಡು ತಿವಿಯಲು ಹೋಗುತ್ತದೆ.

ಆದರೆ ಅಲಿ ಮಾತ್ರ ಅದಕ್ಕೂ ನನಗೂ ಯಾವುದೇ ಸಂಬಂಧ ಇಲ್ಲ ಎಂದು ಹೇಳುತ್ತಾನಂತೆ. ಇನ್ನು ಕೊನೆಯದಾಗಿ ಅಲಿಯ ಮನವೊಲಿಸಿ ಕ್ಷಮೆಯಾಚಿಸುವಂತೆ ಮಾಡಲು ಗ್ರಾಮದ ಹಿರಿಯರು ಮುಂದೆ ಬಂದಿದ್ದಾರೆ.