ಮಂಗಳೂರು : ಖಾಸಗಿ ಗೆಸ್ಟ್ ಹೌಸ್‌ನಲ್ಲಿ ಕುಡಿದು ದಾಂಧಲೆ,ಸ್ಥಳೀಯ ಮನೆಗಳಿಗೆ ನುಗ್ಗಿ ಹೊಡೆದಾಟ

ಉಳ್ಳಾಲ: ಉಚ್ಚಿಲ ಬಟ್ಟಪ್ಪಾಡಿಯ ಖಾಸಗಿ ಗೆಸ್ಟ್ ಹೌಸ್ ನಲ್ಲಿ ಬೆಂಗಳೂರು ‌ಮೂಲದ ತಂಡಗಳ ನಡುವೆ ಹೊಡೆದಾಟ ನಡೆದಿದ್ದು, ಹೊಡೆದಾಟದ ಸಂದರ್ಭದಲ್ಲಿ ಸ್ಥಳೀಯ ಮನೆಗಳಿಗೆ ನುಗ್ಗಿ ತೊಂದರೆ ನೀಡಿದ್ದಾರೆ ಎಂದು ಸ್ಥಳೀಯರು ಅರೋಪಿಸಿ ಪ್ರತಿಭಟನೆ ನಡೆಸಿದ್ದಾರೆ.

 

ಖಾಸಗಿ ಗೆಸ್ಟ್ ಹೌಸ್ ನಲ್ಲಿ ಪಾರ್ಟಿ ನಡೆಯುತ್ತಿದ್ದು ಎರಡು ಬಸ್ ಗಳಲ್ಲಿ ಜನರು ಆಗಮಿಸಿದ್ದರು. ತಡರಾತ್ರಿವರೆಗೆ ಪಾರ್ಟಿ ನಡೆಸಿದ ತಂಡದ ನಡುವೆ ಹೊಡೆದಾಟ ಆರಂಭವಾಗಿದ್ದು, ಬಳಿಕ ಹೊಡೆದಾಟ ಗೆಸ್ಟ್ ಹೌಸ್ ಹೊರಗಡೆ ರಸ್ತೆ ಬದಿಗೆ ಬಂದಿದೆ.

ಈ ಸಂದರ್ಭದಲ್ಲಿ ಹೊಡೆದಾಟ ನಡೆಸಿದ ಕುಡಿತದ ಅಮಲಿನಲ್ಲಿದ್ದ ತಂಡ ಸ್ಥಳೀಯ ಮನೆಯೊಂದಕ್ಕೆ ನುಗ್ಗಿ ದಾಂದಲೆ ನಡೆಸಿದ್ದಾರೆ ಎಂದು ಸ್ಥಳೀಯರು ಅಪಾದಿಸಿ ಪ್ರತಿಭಟನೆ ನಡೆಸಿದ್ದಾರೆ.

ಘಟನೆಯಲ್ಲಿ ಓರ್ವ ಗಾಯಗೊಂಡಿದ್ದು, ಪೊಲೀಸರು ಸ್ಥಳಕ್ಕೇ ಧಾವಿಸುತ್ತಿದ್ದಂತೆ ಪರಾರಿಯಾಗಿದ್ದಾರೆ. ಸ್ಥಳೀಯರು ಅರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಉಳ್ಳಾಲ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

Leave A Reply

Your email address will not be published.