” ಸ್ವರ್ಣ” ಹೇರಳವಾಗಿ ಸಿಗುವ “ಚಿನ್ನದ ನದಿ” : ಅಪರೂಪದಲ್ಲೊಂದು ಅಪರೂಪದ ಸಂಗತಿ!!!
400ಕ್ಕೂ ಅಧಿಕ ನದಿಗಳು ಭಾರತದಲ್ಲಿ ಹರಿಯುತ್ತವೆ. ಇದರಲ್ಲಿ ಒಂದು ಪ್ರಮುಖ ನದಿ ಸ್ವರ್ಣರೇಖಾ ಕೂಡಾ ಒಂದು. ಈ ನದಿಗೆ ಒಂದು ವಿಶೇಷತೆ ಇದೆ. ಅದೇನೆಂದು ನೀವು ಕೇಳಿದರೆ ಅಚ್ಚರಿ ಪಡೋದು ಗ್ಯಾರಂಟಿ. ಈ ನದಿಯಲ್ಲಿ ಚಿನ್ನ ಹೇರಳವಾಗಿ ಸಿಗುತ್ತದೆಯಂತೆ. ಹೌದು, ಇಲ್ಲಿನ ನೀರನ್ನು ಫಿಲ್ಟರ್ ಮಾಡಿದಾಗ ಚಿನ್ನ ಸಿಗುತ್ತದೆ.
ಈ ನದಿಯ ಹೆಸರು ಸ್ವರ್ಣ ರೇಖಾ ನದಿ. ಈ ನದಿಯ ಹೆಸರು ಹೇಗಿದೆಯೋ ಅದೇ ರೀತಿ ಚಿನ್ನವೂ ಇದರಿಂದ ಹೊರಬರುತ್ತದೆ. ಈ ನದಿಯು ಜಾರ್ಖಂಡ್‌ನಲ್ಲಿ ಹರಿಯುತ್ತದೆ. ಈ ನದಿಯು ಇಲ್ಲಿ ವಾಸಿಸುವ ಸ್ಥಳೀಯ ಜನರಿಗೆ ಆದಾಯದ ಮೂಲವಾಗಿದೆ. ಇಲ್ಲಿನ ಜನರು ಪ್ರತಿನಿತ್ಯ ನದಿ ದಡಕ್ಕೆ ತೆರಳಿ ನೀರನ್ನು ಸೋಸಿ ಚಿನ್ನ ಸಂಗ್ರಹಿಸುತ್ತಾರೆ. ಜಾರ್ಖಂಡ್‌ನ ತಮರ್ ಮತ್ತು ಸರಂದಾದಂತಹ ಪ್ರದೇಶಗಳಲ್ಲಿ, ಜನರು ಶತಮಾನಗಳಿಂದ ನದಿಯಿಂದ ಚಿನ್ನವನ್ನು ಫಿಲ್ಟರ್ ಮಾಡುವ ಕೆಲಸವನ್ನು ಮಾಡುತ್ತಿದ್ದಾರೆ.
ಸ್ವರ್ಣ ರೇಖಾ ನದಿಯ ಮೂಲವು ಜಾರ್ಖಂಡ್‌ನ ರಾಜಧಾನಿ ರಾಂಚಿಯಿಂದ ಸುಮಾರು 16 ಕಿ.ಮೀ. ದೂರದಲ್ಲಿದೆ. ಈ ನದಿಯು ಜಾರ್ಖಂಡ್‌ನಲ್ಲಿ ಉದ್ಭವಗೊಂಡು ಪಶ್ಚಿಮ ಬಂಗಾಳ ಮತ್ತು ಒಡಿಶಾ ಮೂಲಕ ಹರಿದು ಬಂಗಾಳ ಕೊಲ್ಲಿಯನ್ನು ಸೇರುತ್ತದೆ. ಈ ನದಿಯ ಇನ್ನೊಂದು ವಿಶೇಷವೆಂದರೆ ಜಾರ್ಖಂಡ್‌ನಿಂದ ಹರಿದ ನಂತರ ಈ ನದಿ ಬೇರೆ ಯಾವುದೇ ನದಿಯೊಂದಿಗೆ ಬೆರೆಯದೆ ನೇರವಾಗಿ ಬಂಗಾಳ ಕೊಲ್ಲಿಗೆ ಸೇರುತ್ತದೆ.
ನೂರಾರು ವರ್ಷಗಳ ನಂತರವೂ ವಿಜ್ಞಾನಿಗಳಿಗೆ ಈ ನದಿಯಲ್ಲಿ ಚಿನ್ನ ಏಕೆ ಹರಿಯುತ್ತದೆ ಎಂದು ತಿಳಿಯಲು ಸಾಧ್ಯವಾಗಿಲ್ಲ. ಈ ನದಿಯ ಚಿನ್ನದ ಮೂಲ ನಿಗೂಢವಾಗಿದೆ. ಈ ನದಿಯು ಬಂಡೆಗಳ ಮೂಲಕ ಚಲಿಸುತ್ತದೆ ಮತ್ತು ಇದರಿಂದಾಗಿ ಚಿನ್ನದ ಕಣಗಳು ಅದರಲ್ಲಿ ಬರುತ್ತವೆ ಎಂದು ವಿಜ್ಞಾನಿಗಳು ಹೇಳುತ್ತಾರೆ. ಆದರೆ, ಇದು ಇನ್ನೂ ದೃಢಪಟ್ಟಿಲ್ಲ.