ಕಂಠ ಪೂರ್ತಿ ಕುಡಿದು ಫುಲ್‌ ಟೈಟ್‌ ಆಗಿ ಹಸೆಮಣೆ ಏರಿದ ವರ ಮಾಡಿದ್ದೇನು ಗೊತ್ತಾ!?- ವಿಡಿಯೋ ವೈರಲ್

ಮದುವೆ ಎಂಬುದು ಪ್ರತಿಯೊಬ್ಬ ಜೋಡಿಯ ಸುಂದರವಾದ ಘಟ್ಟ ಎಂದೇ ಹೇಳಬಹುದು. ಅಂದಿನ ಪ್ರತಿಯೊಂದು ಹೆಜ್ಜೆಯು ಜೇವನದ ಅಂತ್ಯದವರೆಗೂ ಅಚ್ಚಳಿಯಾಗಿ ಉಳಿಯಬಹುದು. ಆದ್ರೆ ಈ ಜೋಡಿಗೆ ಮಾತ್ರ ಮದುವೆಯೇ ಒಂದು ನಾಟಕ ಎಂಬಂತಾಗಿದೆ.

ಹೌದು. ವರನೊಬ್ಬ ಮದುವೆ ವೇಳೆ ಕಂಠ ಪೂರ್ತಿ ಕುಡಿದು ಫುಲ್‌ ಟೈಟ್‌ ಆಗಿ ತಾನು ಏನು ಮಾಡುತ್ತಿದ್ದೇನೆ ಎಂಬ ಅರಿವಿಲ್ಲದೇ, ವಧುವಿಗೆ ಹಾರ ಹಾಕುವ ಬದಲು ಆಕೆಯ ಅತ್ತಿಗೆ ಕತ್ತಿಗೆ ಹಾರ ಹಾಕಿ ಕಪಾಳ ಮೋಕ್ಷ ಮಾಡಿಸಿಕೊಂಡಿರುವ ಘಟನೆ ಉತ್ತರ ಪ್ರದೇಶದ ಹಮೀರ್‌ಪುರದಲ್ಲಿ ನಡೆದಿದೆ. ಇದೀಗ ಇದರ ವಿಡಿಯೋ ಕೂಡ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರ್‌ ಆಗಿದೆ.

ಈ ವರನಿಗೆ ನೇರ ನಿಂತುಕೊಳ್ಳುವುದಕ್ಕೂ ಆಗುತ್ತಿಲ್ಲ. ವೇದಿಕೆ ಮೇಲೆ ಹಾರ ಬದಲಾಯಿಸುವ ಸಲುವಾಗಿ ನಿಂತಿರುವ ವರನನ್ನು ಪಕ್ಕದಲ್ಲಿರುವ ವ್ಯಕ್ತಿ ಸಂಭಾಳಿಸುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು. ವೇದಿಕೆ ಮೇಲೆ ನಿಂತಿರುವ ವರ ಈಗ ಬೀಳುತ್ತಾನೋ ಆಗ ಬೀಳುತ್ತಾನೋ ಎನ್ನುವ ಹಾಗೆ ಸ್ಥಿಮಿತವೇ ಇಲ್ಲದಂತೆ ಕಾಣುತ್ತಾನೆ. ಅದರ ಮಧ್ಯೆಯೇ ಮದುವೆಯ ಶಾಸ್ತ್ರಗಳನ್ನು ನಡೆಸುವುದನ್ನು ಕಾಣಬಹುದು.

ಕುಡಿದು ನಿಲ್ಲುವುದಕ್ಕೂ ಆಗದ ವರನಿಗೆ ವಧುವೇನೋ ಹಾರ ಹಾಕುತ್ತಾಳೆ. ಆದರೆ ಸ್ಥಿಮಿತ ಕಳೆದುಕೊಂಡಿರುವ ಈ ವರ ಮಹಾಶಯನಿಗೆ ವಧು ಯಾರು? ನಾದಿನಿ ಯಾರು ಎನ್ನುವುದು ಕಾಣಿಸಬೇಕಲ್ಲ. ಆರತಿ ಬೆಳಗಲು ವೇದಿಕೆಗೆ ಬಂದಿರುವ ನಾದಿನಿಯ ಕೊರಳಿಗೆಯೇ ಹಾರ ಹಾಕಿ ಬಿಡುತ್ತಾನೆ. ಇಷ್ಟಾಗುತ್ತಿದ್ದಂತೆಯೇ ಕೆಂಡಾ ಮಂಡಲವಾದ ನಾದಿನಿ, ವರನಿಗೆ ಮನಸೋ ಇಚ್ಛೆ ಬಾರಿಸಿ ಬಿಡುತ್ತಾಳೆ. ಅಲ್ಲದೆ ಈ ಕೂಡಲೇ ಹಾರ ವಾಪಸ್ ತೆಗೆಯುವಂತೆ ಗದರುವುದನ್ನು ಕೂಡಾ ವಿಡಿಯೋದಲ್ಲಿ ನೋಡಬಹುದು.

ಇಷ್ಟಾದರೂ ವರನಿಗೆ ಮಾತ್ರ ಅಲ್ಲಿ ಏನು ಆಗುತ್ತಿದೆ ಎನ್ನುವುದು ಇನ್ನೂ ತಿಳಿದಂತೆ ಕಾಣುವುದಿಲ್ಲ. ಆತನ ಪಕ್ಕದಲ್ಲಿದ್ದ ವ್ಯಕ್ತಿ ಕೂಡಾ ನೀನು ಹಾರ ಹಾಕಿರುವುದು ವಧುವಿಗಲ್ಲ ಎನ್ನುವುದನ್ನು ಹೇಳುತ್ತಾನೆ. ಒಟ್ಟಿನಲ್ಲಿ ಮದುವೆ ಮನೆಯಲ್ಲಿ ಮಾತ್ರ ಕೆಲ ಕ್ಷಣ ಭರ್ಜರಿ ನಾಟಕ ನಡೆಯುತ್ತದೆ. ಈ ವೀಡಿಯೋ ಬಿಹಾರದ್ದು ಎಂದು ಹೇಳಲಾಗುತ್ತಿದ್ದು, @Vikki19751 ಎಂಬ ಹೆಸರಿನ ಟ್ವಿಟ್ಟರ್ ಬಳಕೆದಾರರು ಇದನ್ನು ಹಂಚಿಕೊಂಡಿದ್ದಾರೆ.

https://twitter.com/Vikki19751/status/1539259892376162307?s=20&t=F2xb_5eQ00qifSeBYxrNug

Leave A Reply

Your email address will not be published.