Home ದಕ್ಷಿಣ ಕನ್ನಡ ಒಳ್ಳೆಯ ಯೋಜನೆಗಳನ್ನು ವಿರೋಧಿಸುವುದು ಕಾಂಗ್ರೆಸ್‌ನ ಮಾನಸಿಕತೆ- ನಳಿನ್ ಕುಮಾರ್

ಒಳ್ಳೆಯ ಯೋಜನೆಗಳನ್ನು ವಿರೋಧಿಸುವುದು ಕಾಂಗ್ರೆಸ್‌ನ ಮಾನಸಿಕತೆ- ನಳಿನ್ ಕುಮಾರ್

Hindu neighbor gifts plot of land

Hindu neighbour gifts land to Muslim journalist

ಮಂಗಳೂರು : ದೇಶದಲ್ಲಿ 2014ರ ಅನಂತರ ಎನ್‌ಡಿಎ ಸರಕಾರ ಬಂದ ಮೇಲೆ ಪರಿವರ್ತನೆಯ ಹಾದಿ ಆರಂಭವಾಗಿದೆ. ರಾಷ್ಟ್ರಕ್ಕೆ ಉಪಯುಕ್ತವಾದ ಹತ್ತಾರು ಯೋಜನೆಗಳನ್ನು ಸರಕಾರ ತರುತ್ತಿದೆ. ದೇಶಕ್ಕೆ ಒಳ್ಳೆಯದಾಗುವ ಯೋಜನೆಗಳನ್ನು ವಿರೋಧಿಸುವುದು ಕಾಂಗ್ರೆಸ್‌ನ ಮಾನಸಿಕತೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ, ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದರು.

ಪತ್ರಕರ್ತರ ಜತೆ ಮಾತನಾಡಿದ ಅವರು, ಅಗ್ನಿಪಥ ಸೇನೆಯಲ್ಲಿ ಯುವಜನತೆ ಬರಬೇಕು, ಯುವಸೈನ್ಯ ಇರಬೇಕು ಎಂಬುದು ಉದ್ದೇಶದ ಯೋಜನೆ. ಎಲ್ಲರಿಗೂ ಮಿಲಿಟರಿ ಸಂಸ್ಕಾರ, ಶಿಕ್ಷಣ ಸಿಗಬೇಕು. ರಾಷ್ಟ್ರಭಕ್ತಿ ಜಾಗೃತವಾಗಬೇಕು. ಆಗ ಅವರ ಜೀವನದಲ್ಲಿ ಒಳ್ಳೆಯದಾಗುತ್ತದೆ. ರಾಷ್ಟ್ರಕ್ಕೂ ಒಳ್ಳೆಯದಾಗುತ್ತದೆ. ಇದನ್ನು ಕಾಂಗ್ರೆಸ್‌ನವರಲ್ಲಿ ಕೇಳಿಲ್ಲ. ಉದ್ಯೋಗ ಬಯಸುವವರಿಗೆ, ಸೇನೆ ಸೇರಲು ಬಯಸುವವರಿಗೆ, ರಾಷ್ಟ್ರಕ್ಕಾಾಗಿ ದುಡಿಯುವವರಿಗೆ ಅವಕಾಶವನ್ನು ಮಾಡಿಕೊಡಲಾಗುತ್ತಿದೆ. ಅಗ್ನಿಪಥ ಯುವಜನತೆಯ ಭವಿಷ್ಯಕ್ಕಾಗಿ. ಮುಂದೆಯೂ ಅವರಿಗೆ ಉದ್ಯೋಗ ದೊರೆಯುವ ಅವಕಾಶವಿದೆ. ಕಾಂಗ್ರೆಸ್‌ನದ್ದು ವಿರೋಧದ ಮಾನಸಿಕತೆ ಎಂದರು.

ಕಾಂಗ್ರೆಸ್ ದ್ವೇಷದ ಭಾವನೆ ಮೂಡಿಸುತ್ತಿದೆ. ರಾಜ್ಯದಲ್ಲಿ ಸರಕಾರ ಇರುವಾಗಲೂ ನಿರಂತರವಾಗಿ ಗಲಭೆಗೆ ಪ್ರಚೋದನೆ ನೀಡುತ್ತಾ ಬಂದಿದೆ. ಘಟನೆಗಳಲ್ಲಿ ಸೂತ್ರಧಾರಿಯಾಗಿ ಇರುವುದನ್ನು ಕಂಡಿದ್ದೇವೆ. ಡಿಜೆ ಹಳ್ಳಿ, ಕೆಜೆ ಹಳ್ಳಿ, ಶಿವಮೊಗ್ಗ ಹುಬ್ಬಳ್ಳಿ ಗಲಭೆಯ ಹಿಂದೆ ಕಾಂಗ್ರೆಸ್ ಇದೆ. ಕಾಂಗ್ರೆಸ್ ದ್ವೇಷದ ರಾಜಕಾರಣ ಹರಡುತ್ತದೆ. ಪಠ್ಯ ಪುಸ್ತಕದಲ್ಲಿ ಏನಿದೆ ಎಂದು ಓದದೆ ಮೂರ್ಖತನದ ಪರಮಾವಧಿ ತೋರಿಸುತ್ತಿದೆ ಎಂದು ವಾಗ್ದಾಳಿ ನಡೆಸಿದರು.

ಬಿಜೆಪಿ ಯಾವುದಕ್ಕೂ ಕ್ಷಮೆ ಕೇಳುವುದಿಲ್ಲ. ಆಡಳಿತ ನಡೆಸುವುದು ಹೇಗೆಂದು ಗೊತ್ತಿದೆ. ಸಾಹಿತಿಗಳು ಕೂಡ ಯೋಚನೆ ಮಾಡಲಿ. ಯಾವ ಕಾಲಘಟ್ಟದಲ್ಲಿ ಯಾವ ಹೋರಾಟ ಮಾಡಿದ್ದಾರೆಂದು. ಯಾರೇ ಆದರೂ ಕೂಡ ಪುಸ್ತಕದಲ್ಲಿರುವ ವಿಷಯಗಳನ್ನು ಮೊದಲು ತಿಳಿದುಕೊಳ್ಳಲಿ ಎಂದು ಹೇಳಿದರು.