ಬೆಳ್ತಂಗಡಿ: ಎಸ್ ಡಿಪಿಐ ನಾಯಕ ಹೈದರ್ ನಿರ್ಸಲ್ ಹೃದಯಾಘಾತದಿಂದ ನಿಧನ

Share the Article

ಎಸ್ ಡಿಪಿಐ ನಾಯಕ, ಲಾಯಿಲ ಗ್ರಾಮದ ಕಾಶಿಬೆಟ್ಟು ನಿವಾಸಿ ಹೈದರ್ ನಿರ್ಸಲ್ ಹೃದಯಾಘಾತದಿಂದ ನಿಧನರಾಗಿದ್ದಾರೆ.

ಮೃತರಿಗೆ 55 ವರ್ಷ ವಯಸ್ಸಾಗಿತ್ತು. ಮೃತರು ಎಸ್ ಡಿಪಿಐ ತಾಲೂಕು ಸಮಿತಿ ಮಾಜಿ ಅಧ್ಯಕ್ಷ ಹಾಲಿ ಸದಸ್ಯ, ಜಮಿಯಾತ್ ಪಲಹ ತಾಲೂಕು ಸಮಿತಿ ಕಾರ್ಯದರ್ಶಿ, ಶಿರ್ಲಾಲ್ ಜುಮ್ಮಾ ಮಸೀದಿಯ ಗೌರವಾಧ್ಯಕ್ಷ, ಉಜಿರೆ ಹಳೆಪೇಟೆ ಜುಮ್ಮಾ ಮಸೀದಿಯ ಸದಸ್ಯರಾಗಿ ಸೇರಿದಂತೆ ಹಲವಾರು ಸಂಘಟನೆಗಳಲ್ಲಿ ತೊಡಗಿಸಿಕೊಂಡಿದ್ದರು.

ಮೃತರು ಪತ್ನಿ, 2 ಹೆಣ್ಣು, 1 ಗಂಡು ಮಕ್ಕಳನ್ನು ಅಗಲಿದ್ದಾರೆ. ಮೃತರ ಅಗಲಿಕೆಗೆ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.

Leave A Reply