I Love you -2 ಎನ್ನುತ್ತಾ ಇಬ್ಬರು ಯುವತಿಯರನ್ನು ಏಕಕಾಲದಲ್ಲಿ ಮದುವೆಯಾದ ಯುವಕ !!

Share the Article

ಇಬ್ಬರು ಯುವತಿಯರ ಪ್ರೀತಿಯಲ್ಲಿ ಬಿದ್ದ ಯುವಕನೊಬ್ಬ ನಾನು ಇಬ್ಬರನ್ನೂ ಪ್ರೀತಿಸುತ್ತೇನೆಂದು ಹೇಳಿ ಏಕಕಾಲದಲ್ಲಿ ಯುವತಿಯರಿಬ್ಬರನ್ನು ವಿವಾಹವಾಗಿರುವ ವಿಚಿತ್ರ ಘಟನೆ ಜಾರ್ಖಂಡ್‌ನ ಲೋಹರ್ದಗಾ ಎಂಬ ಹಳ್ಳಿಯಲ್ಲಿ ನಡೆದಿದೆ.

ಕುಸುಮ್ ಲಾಕ್ರಾ ಮತ್ತು ಸ್ವಾತಿ ಕುಮಾರಿ ಇಬ್ಬರೂ ಯುವತಿಯರು ವರ ಸಂದೀಪ್ ಓರಾನ್ ನನ್ನು ಪ್ರೀತಿಸುತ್ತಿದ್ದರು. ಇಂದು ಪರಸ್ಪರ ಒಪ್ಪಿ ಮದುವೆಯಾಗಿದ್ದಾರೆ. ಒಟ್ಟಿಗೆ ಮದುವೆಯಾಗಲು ಕಾನೂನು ಸಮಸ್ಯೆ ಇರಬಹುದು. ಆದರೆ ನಾನು ಇಬ್ಬರನ್ನೂ ಪ್ರೀತಿಸುತ್ತೇನೆ. ಇಬ್ಬರನ್ನೂ ಬಿಡಲು ಸಾಧ್ಯವಿಲ್ಲ ಎಂದು ನವ ವಿವಾಹಿತ ಸಂದೀಪ್ ಹೇಳಿದ್ದಾನೆ.

ಸಂದೀಪ್ ಹಾಗೂ ಕುಸುಮ್ ಲಾಕ್ರಾ ಕಳೆದ ಮೂರು ವರ್ಷಗಳಿಂದಲೂ ಪರಸ್ಪರ ಪ್ರೀತಿಸುತ್ತಾ ಲಿವ್‌ಇನ್ ರಿಲೇಶನ್‌ಶಿಪ್‌ನಲ್ಲಿದ್ದರು. ಅವರಿಬ್ಬರಿಗೂ ಒಂದು ಗಂಡು ಮಗು ಸಹ ಇದೆ. ಈ ನಡುವೆ ಸಂದೀಪ್ ಪಶ್ಚಿಮ ಬಂಗಾಳದ ಇಟ್ಟಿಗೆ ಗೂಡು ಕೆಲಸಕ್ಕೆ ಹೋದಾಗ ಅಲ್ಲಿಯೇ ಕೆಲಸಕ್ಕೆ ಬಂದಿದ್ದ ಸ್ವಾತಿ ಕುಮಾರಿಯನ್ನು ಭೇಟಿಯಾದ. ಮನೆಗೆ ಹಿಂದಿರುಗಿದ ನಂತರವೂ ಇಬ್ಬರೂ ಭೇಟಿಯಾಗುವುದನ್ನು ಮುಂದುವರಿಸಿದರು.

ಕೊನೆಗೆ ಇವರಿಬ್ಬರ ಸಂಬಂಧ ತಿಳಿದ ಕುಟುಂಬಸ್ಥರು ಹಾಗೂ ಗ್ರಾಮಸ್ಥರು ವಿರೋಧಿಸಿದರು. ಪ್ರತಿದಿನ ಒಂದಿಲ್ಲೊಂದು ಜಗಳವಾಗುತ್ತಲೇ ಇತ್ತು. ಈ ಸಂಬಂಧ ನ್ಯಾಯ ತೀರ್ಮಾನಿಸಲು ಗ್ರಾಮಸ್ಥರು ಗ್ರಾಮಪಂಚಾಯ್ತಿಗೆ ಸೇರಿಸಿದ್ದರು. ಈ ವೇಳೆ ಸಂದೀಪ್ ತಾನು ಇಬ್ಬರನ್ನೂ ಮದುವೆಯಾಗುವುದಾಗಿ ಹೇಳಿದ್ದಾನೆ. ಮೂವರು ಪರಸ್ಪರ ಒಪ್ಪಿಕೊಂಡು ಇದೀಗ ಮದುವೆಯಾಗಿದ್ದಾರೆ.

Leave A Reply