ಆಪರೇಷನ್ ವೇಳೆ ಮಗುವಿನ ತಲೆಯನ್ನು ತಾಯಿಯ ಹೊಟ್ಟೆಯಲ್ಲೇ ಬಿಟ್ಟ ಆಸ್ಪತ್ರೆ ಸಿಬ್ಬಂದಿ !!

ಶಸ್ತ್ರಚಿಕಿತ್ಸೆ ವೇಳೆ ನವಜಾತ ಶಿಶುವಿನ ತಲೆಯನ್ನು ಕತ್ತರಿಸಿ ತಾಯಿಯ ಹೊಟ್ಟೆಯಲ್ಲಿಯೇ ಬಿಟ್ಟಿರುವ ಘಟನೆ ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ಗ್ರಾಮೀಣ ಆರೋಗ್ಯ ಕೇಂದ್ರದಲ್ಲಿ ನಡೆದಿದ್ದು, ಇದರಿಂದ ಮಹಿಳೆ ಸಾವು-ಬದುಕಿನ ಮಧ್ಯೆ ಹೋರಾಟ ನಡೆಸಿದ್ದಾರೆ.

 

ತಾರ್ಪಾರ್ಕರ್ ಜಿಲ್ಲೆಯ ಹಳ್ಳಿಯೊಂದಕ್ಕೆ ಸೇರಿದ 32 ವರ್ಷದ ಹಿಂದೂ ಮಹಿಳೆ, ಭಾನುವಾರ ಸಮೀಪದ ಗ್ರಾಮೀಣ ಆರೋಗ್ಯ ಕೇಂದ್ರಕ್ಕೆ ಹೋಗಿದ್ದರು. ಈ ವೇಳೆ ಮಹಿಳಾ ಡಾಕ್ಟರ್ ಇಲ್ಲದೇ ಇರುವ ಕಾರಣ ಅನುಭವಿ ಸಿಬ್ಬಂದಿ ತಾನೇ ಶಸ್ತ್ರ ಚಿಕಿತ್ಸೆ ನಡೆಸಲು ಮುಂದಾದಾಗ ಈ ಘಟನೆ ನಡೆದಿದೆ ಎಂದು ಜಮ್ಶೊರೊದಲ್ಲಿರುವ ಲಿಯಾಕತ್ ಯೂನಿವರ್ಸಿಟಿ ಆಫ್ ಮೆಡಿಕಲ್ ಅಂಡ್ ಹೆಲ್ತ್ ಸೈನ್ಸಸ್‍ನ ಸ್ತ್ರೀ ರೋಗ ಶಾಸ್ತ್ರ ಘಟಕದ ಮುಖ್ಯಸ್ಥರು ತಿಳಿಸಿದ್ದಾರೆ.

ನಂತರ ಮಹಿಳೆ ಸ್ಥಿತಿ ಗಂಭೀರವಾದಾಗ ಆಕೆಯನ್ನು ಮಿಥಿಯ ಹತ್ತಿರದ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ದಾಖಲಿಸಲಾಯಿತು. ಕೊನೆಗೆ ಆಸ್ಪತ್ರೆಗೆ ಭೇಟಿ ನೀಡಿದ ಮಹಿಳೆಯ ಕುಟುಂಬಸ್ಥರು ನವಜಾತ ಶಿಶುವಿನ ಉಳಿದ ದೇಹವನ್ನು ಗರ್ಭದಿಂದ ಹೊರತೆಗೆದು ಆಕೆಯ ಜೀವವನ್ನು ಉಳಿಸುವಂತೆ ತಿಳಿಸಿದರು.

ಮಗುವಿನ ತಲೆ ಒಳಗೆ ಸಿಕ್ಕಿಹಾಕಿಕೊಂಡಿದ್ದರಿಂದ ತಾಯಿಯ ಗರ್ಭಕೋಶ ನಾಶವಾಗಿತ್ತು. ಹೀಗಾಗಿ ಶಸ್ತ್ರಚಿಕಿತ್ಸೆಯ ಮೂಲಕ ಮಗುವಿನ ತಲೆಯನ್ನು ಹೊರತೆಗೆದು ಆಕೆಯ ಜೀವವನ್ನು ಉಳಿಸಲಾಯಿತು ಎಂದು ವೈದ್ಯರು ಹೇಳಿದ್ದಾರೆ. ವೈದ್ಯರ ಈ ಎಡವಟ್ಟಿನಿಂದ ತಾಯಿ, ಮಗು ಇಬ್ಬರ ಪ್ರಾಣ ಕೂಡ ಅಪಾಯದಲ್ಲಿ ಸಿಲುಕಿದ್ದು, ಇದೀಗ ಮಹಿಳೆಯಾದರೂ ಬಂದಿರುವುದು ಪುಣ್ಯವೇ ಸರಿ.

Leave A Reply

Your email address will not be published.