ಭಾರತೀಯರ ಜೀವಿತಾವಧಿ ಬರೊಬ್ಬರಿ 2 ವರ್ಷ ಹೆಚ್ಚಳ, ಮಹಿಳೆಯರೇ ಮತ್ತೆ ಮೇಲುಗೈ !!

ಭಾರತೀಯರ ಜನರ ಜೀವಿತಾವಧಿ ಬರೊಬ್ಬರಿ 2ವರ್ಷ ಹೆಚ್ಚುವರಿಯಾಗಿದ್ದು, ಜೀವಿತಾವಧಿಯು ಸರಾಸರಿ 69.7 ವರ್ಷಗಳಿಗೆ ಏರಿಕೆಯಾಗಿದೆ. ಇಡೀ ಜನನ ಸಮಯದ ಜೀವಿತಾವಧಿ ಆಗಿದ್ದು, ಹುಟ್ಟಿದ ಶಿಶುಗಳನ್ನು ಕೂಡಾ ಪರಿಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಆದರೆ ನಾವಿನ್ನೂ ಬಹು ದೂರ ಬೀಸು ನಡಿಗೆ ಹಾಕಬೇಕಾಗಿದೆ. ಕಾರಣ, ಈಗಿನ ನಮ್ಮ ಜೀವಿತಾವಧಿ ಜಾಗತಿಕ ಸರಾಸರಿಯಾಗಿರುವ 72.6 ವರ್ಷ ಗಳಿಗಿಂತ ಬಹಳ ಕಡಿಮೆಯಿದೆ.

 

2015-19 ರ ನಡುವಣ ನಾಲ್ಕು ವರ್ಷಗಳ ಅವಧಿಯಲ್ಲಿ ಇದ್ದುದಕ್ಕಿಂತ 2ವರ್ಷ ಸೇರ್ಪಡೆ ಯಾಗಿದ್ದು, ಅಚ್ಚರಿ ಮೂಡಿಸಿದೆ. ಪ್ರಧಾನಿ ನರೇಂದ್ರ ಮೋದಿಯವರು ಅಧಿಕಾರ ವಹಿಸಿಕೊಂಡ ನಂತರ ಆಹಾರ ಪಡಿತರ ವ್ಯವಸ್ಥೆಯಲ್ಲಿ ತಂಡ ಆಮೂಲಾಗ್ರ ಬದಲಾವಣೆ, ಆರೋಗ್ಯ ವಿಮೆ, ಜನೌಶದ ಮುಖ್ಯವಾಗಿ ಶಿಶು ಮರಣ ಪ್ರಮಾಣದಲ್ಲಾದ ವ್ಯಾಪಕ ಕುಸಿತ ಇತ್ಯಾದಿ ಕ್ರಾಂತಿಕಾರಿ ಬದಲಾವಣೆಗಳೊಂದಿಗೆ ಈ 2 ವರ್ಷ ಆಯುಷ್ಯ ಏರಿಕೆಯಾಗಿದೆ ಎನ್ನಲಾಗಿದೆ.

ಇತ್ತೀಚೆಗೆ ಬಿಡುಗಡೆಯಾದ “ಅಬ್ರಿಡ್ಜ್ಡ್‌ ಲೈಫ್ ಟೇಬಲ್ಸ್‌ 2015-19′ ವರದಿಯಲ್ಲಿ ಈ ವಿಚಾರ ಬಹಿರಂಗಗೊಂಡಿದ್ದು, ಭಾರತೀಯರ ಜೀವಿತಾವಧಿ 2 ವರ್ಷ ಹೆಚ್ಚಳವಾಗಲು 10 ವರ್ಷಗಳು ಬೇಕಾದವು ಎಂದು ವರದಿ ಹೇಳಿದೆ. ಜನನ ಸಮಯದ ಜೀವಿತಾವಧಿ ದೊಡ್ಡ ಮಟ್ಟಿನ ಏರಿಕೆ ಕಾಣದಿರಲು ಜನನ ಸಮಯದಲ್ಲಿ ಶಿಶು ಮರಣ ಮತ್ತು 5 ವರ್ಷದೊಳಗಿನ ಮಕ್ಕಳ ಮರಣ ಪ್ರಮಾಣ ಹೆಚ್ಚಿರುವುದೇ ಕಾರಣ.

ಪ್ರಾಂತ್ಯವಾರು ನೋಡಿದರೆ, ಭಾರತದ ಗ್ರಾಮೀಣ ಪ್ರದೇಶಗಳ ಜನರ ಸರಾಸರಿ ನಗರ ಪ್ರದೇಶದ ಜನರ ಜೀವಿತ ಅವಧಿಗಿಂತ ಕಮ್ಮಿ. ಒಳ್ಳೆಯ ಗಾಳಿ, ಆಹಾರ ಇದ್ದರೂ ಗ್ರಾಮೀಣ ಭಾಗದಲ್ಲಿನ ಸಾ ಅಂಕಿ ಸಂಖ್ಯೆ ಅಚ್ಚರಿ ಹುಟ್ಟಿಸುತ್ತಿದೆ. ಗ್ರಾಮೀಣ ಭಾಗದಲ್ಲಿ ಜೀವಿತಾವಧಿ 68.3 ವರ್ಷ ಇದ್ದರೆ, ನಗರ ಪ್ರದೇಶಗಳಲ್ಲಿ ಈ ಪ್ರಮಾಣ 73 ವರ್ಷ.
ಇನ್ನೊಂದು ವಿಶೇಷವೇನೆಂದರೆ, ಜೀವಿತಾವಧಿಯಲ್ಲಿ ಕೂಡಾ ಮಹಿಳೆಯರು ಬಿಟ್ಟು ಕೊಟ್ಟಿಲ್ಲ. ರಾಷ್ಟ್ರೀಯ ಮಟ್ಟದಲ್ಲಿ ಪುರುಷರ ಜೀವಿತಾವಧಿ 68.4 ವರ್ಷಗಳಾದರೆ, ಮಹಿಳೆಯರದ್ದು 71.1 ವರ್ಷಗಳಾಗಿವೆ. ಕಡಿಮೆ ದುರಭ್ಯಾಸ ಇರುವ ಆಕ್ಟಿವ್ ಜೀವನ ಇದಕ್ಕೆ ಕಾರಣ ಎನ್ನಲಾಗಿದೆ.

1970-75 ಕ್ಕೆ ಹೋಲಿಸಿದ್ರೆ ಜನರ ಜೀವಿತಾವಧಿ 20 ವರ್ಷ ಏರಿಕೆ ಆಗಿದೆ. ಆಗ ಭಾರತೀಯರ ಜನನ ಸಮಯದ ಜೀವಿತಾವಧಿ 49.7 ವರ್ಷ ಗಳಾಗಿದ್ದವು. 2015-19ರ ಅವಧಿಯಲ್ಲಿ ಇದು 69.7 ವರ್ಷಗಳಿಗೇರಿದೆ. 4 ದಶಕಗಳಲ್ಲಿ ಜೀವಿತಾವಧಿಯು ಬರೋಬರಿ 20 ವರ್ಷಗಳಷ್ಟು ಹೆಚ್ಚಳ ಕಂಡಿದೆ.

ನಮ್ಮ ಕರ್ನಾಟಕ ರಾಜ್ಯದಲ್ಲಿ ಕೂಡಾ ಕನ್ನಡಮ್ಮನವರೆ ಮುಂದು. ಇಲ್ಲಿನ ಪುರುಷರ ಜೀವಿತಾವಧಿ 67.9 ವರ್ಷ ಆಗಿದ್ದರೆ, ಮಹಿಳೆಯರ ಜೀವಿತಾವಧಿ 3.5 ವರ್ಷ ಹೆಚ್ಚು. ಅಂದರೆ ಕನ್ನಡಮ್ಮನವರ ಆಯಸ್ಸು 71.3 ವರ್ಷ, ಒಟ್ಟಾರೆ ಕನ್ನಡಿಗರ ಸರಾಸರಿ ಜೀವಿತಾವಧಿ ಸರಾಸರಿ 69.5 ವರ್ಷಗಳು

ದೇಶದಲ್ಲಿ ಎಲ್ಲಿ ಹೆಚ್ಚು ಎಲ್ಲಿ ಕಡಿಮೆ ಗೊತ್ತೇ ?
ದೇಶದಲ್ಲಿಯೇ ಅತೀ ಹೆಚ್ಚು ಜೀವಿತಾವಧಿ ರೆಕಾರ್ಡ್ ಆದ ರಾಜ್ಯವೆಂದರೆ ದಿಲ್ಲಿ. ಇಲ್ಲಿ ಸರಾಸರಿ ಜೀವಿತಾವಧಿ 75.9 ವರ್ಷಗಳು. ನಮ್ಮ ಪಕ್ಕದ ರಾಜ್ಯ ಕೇರಳವು 2ನೇ ಸ್ಥಾನದಲ್ಲಿ ನಿಂತಿದ್ದು, ಇಲ್ಲಿನ ಜನರ ಜೀವಿತಾವಧಿ 75.2 ವರ್ಷಗಳು. ಜನರ ಆಯಸ್ಸು ಕಡಿಮೆಯಿರುವ ರಾಜ್ಯವೆಂದರೆ ಛತ್ತೀಸ್‌ಗಢ-65.3 ವರ್ಷಗಳು.

ಜಾಗತಿಕ ಸ್ಥಿತಿಗತಿಗೆ ನೋಡಿದರೆ ನಾರ್ವೆ, ಆಸ್ಟ್ರೇಲಿಯಾ, ಸ್ವಿಜರ್ಲೆಂಡ್‌, ಐಸ್‌ಲ್ಯಾಂಡ್‌: 83 ವರ್ಷ ಭಾರತ: 69.7 ವರ್ಷಗಳು ಬಾಂಗ್ಲಾದೇಶ: 72.1 ವರ್ಷಗಳು ನೇಪಾಲ: 70.5 ವರ್ಷಗಳು. ಜಪಾನ್ ವಿಶ್ವದ ಅತ್ಯಂತ ಜೀವಿತಾವಧಿ ಉಳ್ಳ ದೇಶವಾಗಿದ್ದು ಮತ್ತೆ ತನ್ನ ಸ್ಥಾನವನ್ನು ಉಳಿಸಿಕೊಂಡಿದೆ. ಜಪಾನ್‌ ನ ಜೀವಿತಾವಧಿ ಸರಾಸರಿ 85 ವರ್ಷಗಳು !!

Leave A Reply

Your email address will not be published.