ಚಪ್ಪಲಿ ಆಯಿತು, ಈಗ ಇನ್ನೊಂದು ವಿವಾದ ಮೈಮೇಲೆ ಎಳ್ಕೊಂಡ ನಯನತಾರಾ | CCTV ಯಲ್ಲಿ ಸೆರೆಯಾದ ಇನ್ನೊಂದು ಬಿಗ್ ಮಿಸ್ಟೇಕ್ | ಗರಂ ಆದ ಟಿಟಿಡಿ
ಯಾಕೋ ಏನೋ ತಾರಾದಂಪತಿಗಳಾದ ನಯನತಾರಾ-ವಿಘ್ನೇಶ್ ಶಿವನ್ ಅವರ ಮದುವೆಯಾದ ಘಳಿಗೆ ಚೆನ್ನಾಗಿಲ್ಲ ಎಂದು ಕಾಣುತ್ತೆ. ಮದುವೆಯಾದ ಮರುದಿನವೇ ತಿರುಪತಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿ ದೇವರ ಆಶೀರ್ವಾದ ಪಡೆದಿದ್ದಾರೆ. ಆದರೆ, ಅವರು ಮಾಡಿಕೊಂಡ ಒಂದು ಸಣ್ಣ ಎಡವಟ್ಟು ಇದೀಗ ನಯನಾ ಮತ್ತು ವಿಘ್ನೇಶ್‌ಗೆ ಸಂಕಷ್ಟ ತಂದಿದೆ.
ತಿರುಪತಿಯ ಭೇಟಿ ವೇಳೆ ನಯನತಾರಾ ದೇವಸ್ಥಾನದ ಆವರಣದಲ್ಲಿ ಚಪ್ಪಲಿ ಹಾಕಿಕೊಂಡೇ ಓಡಾಡಿದ್ದಾರೆ. ಇದು ಭಕ್ತರ ಆಕ್ರೋಶಕ್ಕೆ ಗುರಿಯಾಗಿ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದ್ದಂತೆ ತಾರಾದಂಪತಿ ಕ್ಷಮೆ ಕೂಡ ಕೇಳಿದ್ದಾರೆ. ಆದರೆ, ಈ ಪ್ರಕರಣ ಇಲ್ಲಿಗೆ ಕೊನೆಯಾಗುವ ರೀತಿ ಕಾಣುತ್ತಿಲ್ಲ. ಏಕೆಂದರೆ, ತಿರುಮಲ ತಿರುಪತಿ ದೇವಸ್ಥಾನಂ ಮಂಡಳಿ (ಟಿಟಿಡಿ) ಪ್ರಕರಣ ಗಂಭೀರವಾಗಿ ಪರಿಗಣಿಸಿದ್ದು, ಲೀಗಲ್ ನೋಟಿಸ್ ನೀಡಲು ಮುಂದಾಗಿದೆ.
ಆದರೆ ಈಗ ತಿಳಿದಿರೋ ಮಾಹಿತಿ ಪ್ರಕಾರ, ತಿರುಮಲ ತಿರುಪತಿ ದೇವಸ್ಥಾನಂ ಬೋರ್ಡ್‌ನ ಮುಖ್ಯ ವಿಜಿಲೆನ್ಸ್ ಸೆಕ್ಯುರಿಟಿ ಆಫೀಸರ್ ನರಸಿಂಹ ಕಿಶೋರ್ ಮಾತನಾಡಿದ್ದು, ತಿರುಪತಿ ದೇವಸ್ಥಾನದ ಭೇಟಿ ವೇಳೆ ನಯನತಾರಾ ದೇವಸ್ಥಾನದ ಎರಡು ಪ್ರಮುಖ ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎಂದು ಹೇಳಿದ್ದಾರೆ. ಅದಕ್ಕಾಗಿಯೇ ಅವರಿಗೆ ಲೀಗಲ್ ನೋಟಿಸ್ ಕಳುಹಿಸಲಾಗುತ್ತಿದೆ. ಎಂದಿದ್ದಾರೆ.
ದರ್ಶನದ ವೇಳೆ ನಯನತಾರಾ ದೇವಸ್ಥಾನದ ಬಹುಮುಖ್ಯ ಭಾಗವಾದ ಮಾತಾ ಬೀದಿಯಲ್ಲಿ ಚಪ್ಪಲಿ ಧರಿಸಿ ತೆರಳುವ ಮೂಲಕ ನಿಯಮ ಉಲ್ಲಂಘಿಸಿದ್ದಾರೆ. ಇನ್ನೊಂದು ಭೇಟಿಯ ಸಂದರ್ಭದಲ್ಲಿ ತಮ್ಮದೇ ಛಾಯಾಗ್ರಾಹಕರನ್ನು ಪಕ್ಕದಲ್ಲಿ ಇರಿಸಿಕೊಂಡು ಫೋಟೋ ತೆಗೆಸಿದ್ದು, ಎರಡು ಅಪರಾಧವಾಗಿದೆ. ದೇವಸ್ಥಾನದ ನಿಯಮಗಳ ಪ್ರಕಾರ ಖಾಸಗಿ ಛಾಯಾಗ್ರಾಹಕರಿಗೆ ದೇವಸ್ಥಾನದ ಒಳಗೆ ಪ್ರವೇಶವಿಲ್ಲ. ಆದರೆ, ಎರಡು ನಿಯಮಗಳನ್ನು ಉಲ್ಲಂಘನೆ ಮಾಡಿದ್ದಾರೆಂದು ಹೇಳಲಾಗಿದೆ.
ಕ್ಷಮೆಯಾಚಿಸುವ ವೀಡಿಯೊವನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಾಗುವುದು ಎಂದು ವಿಘ್ನೇಶ್ ಹೇಳಿದರೂ, ನಿಯಮ ಉಲ್ಲಂಘನೆ ಮಾಡಿರುವುದರಿಂದ ಲೀಗಲ್ ನೋಟಿಸ್ ಕಳಿಸಲಾಗುವುದು ಎಂದು ಹೇಳಿದ್ದಾರೆ.