ಮಗಳ ವಯಸ್ಸಿನ ಯುವತಿಯನ್ನು 3ನೇ ಮದುವೆಯಾಗಿ ಸುದ್ದಿಯಾಗಿದ್ದ ಸಂಸದ ನಿಧನ

Share the Article

ವರ್ಷಾರಂಭದಲ್ಲಿ 18 ವರ್ಷದ ಯುವತಿಯನ್ನು 3ನೇ ಮದುವೆಯಾಗಿ ಸುದ್ದಿಯಾಗಿದ್ದ ಪಾಕಿಸ್ತಾನದ ಸಂಸದ ಆಮಿರ್ ಲಿಯಾಕತ್ ಹುಸ್ಸೇನ್(49) ಗುರುವಾರ ಸಾವನ್ನಪ್ಪಿದ್ದಾರೆ.

ಆಮಿರ್‌ಗೆ ಬುಧವಾರ ರಾತ್ರಿಯೇ ಅನಾರೋಗ್ಯ ಕಾಣಿಸಿಕೊಂಡಿತ್ತು.

ಸಾಯುವ ಸಮಯದಲ್ಲಿ ಲಿಯಾಕತ್ ಅವರ ಕೋಣೆಯ ಒಳಗಿನಿಂದ ಲಾಕ್ ಆಗಿತ್ತು. ಮನೆಯ ಸಿಬ್ಬಂದಿ ಹಲವು ಬಾರಿ ಬಾಗಿಲು ತಟ್ಟಿದರೂ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ. ಕಳೆದ ಕೆಲವು ದಿನಗಳಿಂದ ಅವರು ಅನಾರೋಗ್ಯದಲ್ಲಿದ್ದರು ಎಂದು ಮನೆಯ ಕೆಲಸದವರು ಹೇಳಿದ್ದಾರೆ. ಅದಲ್ಲದೆ, ಅವರಿಗೆ ಕೆಲ ದಿನದ ಹಿಂದೆ ಎದೆ ನೋವು ಕೂಡ ಕಾಣಿಸಿಕೊಂಡಿತ್ತು ಎಂದು ತಿಳಿಸಿದ್ದಾರೆ.

ಗುರುವಾರ ಬೆಳಗ್ಗೆ ಅವರು ಕೂಗಿಕೊಳ್ಳುವುದು ಕೇಳಿಸಿ, ಮನೆಯ ಕೆಲಸಗಾರರು ಬಾಗಿಲು ಒಡೆದು ಒಳಗೆ ಹೋಗಿದ್ದಾರೆ. ತಕ್ಷಣವೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯುಲಾಗಿದೆಯಾದರೂ ಅವರು ಚಿಕಿತ್ಸೆಗೆ ಸ್ಪಂದಿಸದೆ ಸಾವನ್ನಪ್ಪಿದ್ದಾರೆ.

ಹೃದಯಸ್ತಂಭನದಿಂದ ಅಮಿರ್ ಲಿಯಾಕತ್ ಸಾವನ್ನಪ್ಪಿರಬಹುದು ಎಂದು ಹೇಳಲಾಗಿದೆ. ಕಳೆದ ಫೆಬ್ರವರಿಯಲ್ಲಿ 2ನೇ ಪತ್ನಿ ಟೂಬಾಗೆ ವಿಚ್ಚೇದನ ನೀಡಿದ 24 ಗಂಟೆಯ ಒಳಗಾಗಿ ಕೇವಲ 18 ವರ್ಷ ವಯಸ್ಸಿನ ದನಿಯಾ ಶಾ ಅವರನ್ನು ವಿವಾಹವಾಗುವ ಮೂಲಕ ಸುದ್ದಿಯಾಗಿದ್ದರು. ಅವರ ಮೂರನೇ ಮದುವೆಯೂ ಹೆಚ್ಚು ಕಾಲ ಉಳಿದಿರಲಿಲ್ಲ. ಕಳೆದ ತಿಂಗಳು ದನಿಯಾ ಶಾಗೆ ಕೂಡ ಅಮಿರ್ ಲಿಯಾಕತ್ ವಿಚ್ಛೇದನ ನೀಡಿದ್ದರು.

ಆಮಿರ್ 3ನೇ ವಿವಾಹವಾಗಿ ಒಂದೇ ತಿಂಗಳಲ್ಲಿ ಪತ್ನಿ “ಆಮಿರ್ ಡ್ರಗ್ಸ್ ಅಡಿಕ್ಟ್’ ಎಂದು ದೂರಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು. ಪಿಟಿಐ ಪಕ್ಷದ ಆಮಿರ್ ಹಾಸ್ಯ ಕಲಾವಿದ ಹಾಗೂ ಕೆಲವು ಟಿವಿ ಕಾರ್ಯಕ್ರಮಗಳ ನಿರೂಪಣೆ ಕೂಡ ಮಾಡುತ್ತಿದ್ದರು.

Leave A Reply