ಸ್ಯಾಂಡಲ್ ವುಡ್ ನಟ ಜೈಜಗದೀಶ್ ರಿಂದ ವ್ಯಕ್ತಿಯೋರ್ವನ ಮೇಲೆ ಅವಾಚ್ಯ ಶಬ್ದಗಳ ನಿಂದನೆ, ಹಲ್ಲೆ : ಪ್ರಕರಣ ದಾಖಲು

Share the Article

ಸಮಾಜದಲ್ಲಿ ಉನ್ನತ ಸ್ಥಾನದಲ್ಲಿರುವ ವ್ಯಕ್ತಿ, ಚಿತ್ರನಟ ಕೂಡಾ, ಸಾರ್ವಜನಿಕವಾಗಿ ಯಾವುದೇ ರೀತಿಯ ಉದ್ಧಟತನ ಪ್ರದರ್ಶಿಸದೇ, ತಮ್ಮದೇ ವ್ಯಕ್ತಿತ್ವದಿಂದ ಇತರರಿಗೆ ಮಾದರಿಯಾಗಿರುತ್ತಾರೆ. ಏಕೆಂದರೆ ಚಿತ್ರನಟರನ್ನು ಅವರ ಅಭಿಮಾನಿಗಳು ಆರಾಧಿಸುತ್ತಾರೆ. ಅವರ ನಡೆ ನುಡಿಯನ್ನು ಫಾಲೋ ಮಾಡುತ್ತಾರೆ. ಆದರೆ ಆ ವ್ಯಕ್ತಿಗಳೇ ಸಾರ್ವಜನಿಕವಾಗಿ ಉದ್ಧಟತನ ತೋರಿದರೆ ಏನು ಮಾಡಬೇಕು….ಅಂಥದ್ದೇ ಒಂದು ಘಟನೆ ಈಗ ನಡೆದಿದೆ. ನಟ, ಖಳ ಪಾತ್ರದಲ್ಲಿ ಮಿಂಚಿದ್ದ ಜೈ ಜಗದೀಶ್ ಮೇಲೆ ಈ ಆರೋಪ ಕೇಳಿ ಬಂದಿದೆ.

ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ನಟ ಜೈಜಗದೀಶ್ ಮತ್ತಿತರರ ವಿರುದ್ಧ ಮಂಡ್ಯ ಜಿಲ್ಲೆ ನಾಗಮಂಗಲ ತಾಲ್ಲೂಕು ಬೆಳ್ಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಜೂನ್ 5ರಂದು ಈ ಘಟನೆ ನಡೆದಿದೆ.

ಜಯರಾಮೇಗೌಡ ಎಂಬವರು ಸಾರಿಗೆ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದರು. ಈ ವೇಳೆ ಅವರು ನಿರ್ವಾಹಕನಿಗೆ ಹೇಳಿ ಬಸ್ಸಿನಿಂದ ಕೆಳಗೆ ಇಳಿದಿದ್ದಾರೆ. ಇದೇ ಸಂದರ್ಭದಲ್ಲಿ ಹಿಂದಿನಿಂದ ಕಾರಿನಲ್ಲಿ ಬಂದ ಜೈಜಗದೀಶ್ ಮತ್ತಿತರರು, ಯಾಕೋ ಬಸ್ಸಿನಿಂದ ಬಾಟಲಿ ಎಸೆಯುತ್ತೀಯಾ ಎಂದು ಪ್ರಶ್ನಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಈ ಸಂಬಂಧ ಈಗ ಪ್ರಕರಣ ದಾಖಲಾಗಿದೆ.

Leave A Reply