ಪಾರ್ಕಿಂಗ್ ಪ್ರದೇಶದಲ್ಲಿ ಭಾರೀ ಅಗ್ನಿ ಅವಘಡ !! | ಬೆಂಕಿಯ ಕೆನ್ನಾಲಿಗೆಗೆ 90 ವಾಹನಗಳು ಸುಟ್ಟು ಭಸ್ಮ
ಮೆಟ್ರೊ ಪಾರ್ಕಿಂಗ್ ಪ್ರದೇಶದಲ್ಲಿ ಅಗ್ನಿ ಅವಘಡ ಸಂಭವಿಸಿ ಕನಿಷ್ಠ 90 ಎಲೆಕ್ಟ್ರಿಕ್ ವಾಹನಗಳು ಹೊತ್ತಿ ಉರಿದ ಘಟನೆ ಆಗ್ನೇಯ ದೆಹಲಿಯ ಜಾಮಿಯಾ ನಗರದಲ್ಲಿ ನಡೆದಿದೆ.
ಘಟನೆಯಲ್ಲಿ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ. ಜಾಮಿಯ ನಗರದ ಟಿಕೋನಾ ಪಾರ್ಕ್‌ನಲ್ಲಿ ಅಗ್ನಿ ಅವಘಡಕ್ಕೆ ಸಂಬಂಧಿಸಿದಂತೆ ಮುಂಜಾನೆ 5 ಗಂಟೆ ಸುಮಾರಿಗೆ ಕರೆ ಬಂದಿದೆ. 11 ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಧಾವಿಸಿದ್ದು, ಬೆಂಕಿಯನ್ನು ಹತೋಟಿಗೆ ತರಲಾಗಿದೆ ಎಂದು ದೆಹಲಿಯ ಅಗ್ನಿ ಶಾಮಕ ಸೇವೆಗಳ ನಿರ್ದೇಶಕರು ತಿಳಿಸಿದ್ದಾರೆ.
ಬೆಂಕಿಯಲ್ಲಿ ಹಲವು ವಾಹನಗಳು ಸುಟ್ಟು ಭಸ್ಮವಾಗಿದ್ದು, ಕನಿಷ್ಠ 90ರಷ್ಟು ವಾಹನಗಳಿಗೆ ಹಾನಿಯಾಗಿದೆ. ಇದರಲ್ಲಿ 10 ಕಾರುಗಳು, 1 ಬೈಕ್, 2 ಸ್ಕೂಟರ್, 30 ಹೊಸ ಎಲೆಕ್ಟ್ರಿಕ್ ರಿಕ್ಷಾ ಹಾಗೂ 50 ಹಳೆಯ ಇ-ರಿಕ್ಷಾಗಳು ಸೇರಿವೆ. ಎಲ್ಲವೂ ಎಲೆಕ್ಟ್ರಿಕ್ ವಾಹನಗಳಾಗಿರುವ ಹಿನ್ನೆಲೆ ಇದು ಶಾರ್ಟ್ ಸಕ್ಯೂರ್ಟ್ ನಿಂದ ಆಗಿರುವ ಸಾಧ್ಯತೆ ಇದೆ, ಈ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಸ್ಥಳೀಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.