ದಕ್ಷಿಣ ಭಾರತದ ಅತ್ಯಂತ ದೊಡ್ಡ ಸ್ಫಟಿಕಲಿಂಗ ಕಳ್ಳತನ !!

ಮಠದ ಬಾಗಿಲು ಮುರಿದು ಗರ್ಭಗುಡಿಯ ಸ್ಫಟಿಕ ಲಿಂಗವೊಂದನ್ನು ಕಳ್ಳರು ಹೊತ್ತೊಯ್ದಿರುವ ಘಟನೆ ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಲಿಂಗದಹಳ್ಳಿ ಹಿರೇಮಠದಲ್ಲಿ ನಡದಿದೆ.

 

ಸ್ಫಟಿಕ ಲಿಂಗವು ಒಟ್ಟು 13 ಇಂಚು ಉದ್ದ ಮತ್ತು 13 ಇಂಚು ಸುತ್ತಳತೆ ಹೊಂದಿದ್ದು, ದಕ್ಷಿಣ ಭಾರತದಲ್ಲೇ ಅತ್ಯಂತ ದೊಡ್ಡ ಸ್ಫಟಿಕಲಿಂಗ ಎಂದು ಹೆಸರುವಾಸಿಯಾಗಿತ್ತು.

ನಿನ್ನೆ ರಾತ್ರಿ ಮಠದಲ್ಲಿ ವೀರಭದ್ರ ಶಿವಾಚಾರ್ಯ ಸ್ವಾಮೀಜಿಗಳು ಇಲ್ಲದ ವೇಳೆ ಕಳ್ಳತನ ನಡೆದಿದೆ. ಹಲಗೇರಿ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.

Leave A Reply

Your email address will not be published.