Home Interesting ಚರ್ಚ್‌ನ ಮೇಲೆ ಬಂದೂಕುಧಾರಿಗಳಿಂದ ಸಾಮೂಹಿಕ ದಾಳಿ | ಮಕ್ಕಳು ಸೇರಿದಂತೆ ಕನಿಷ್ಠ 50 ಮಂದಿ ಸಾವು,...

ಚರ್ಚ್‌ನ ಮೇಲೆ ಬಂದೂಕುಧಾರಿಗಳಿಂದ ಸಾಮೂಹಿಕ ದಾಳಿ | ಮಕ್ಕಳು ಸೇರಿದಂತೆ ಕನಿಷ್ಠ 50 ಮಂದಿ ಸಾವು, ಹಲವರಿಗೆ ಗಾಯ

Hindu neighbor gifts plot of land

Hindu neighbour gifts land to Muslim journalist

ನೈಜೀರಿಯಾದ ಒಂಡೋ ರಾಜ್ಯದ ಕ್ಯಾಥೋಲಿಕ್ ಚರ್ಚ್‌ನ ಮೇಲೆ ಭಾನುವಾರ ಬಂದೂಕುಧಾರಿಗಳಿಂದ ಸಾಮೂಹಿಕ ದಾಳಿ ನಡೆದಿದ್ದು, ಮಕ್ಕಳು ಸೇರಿದಂತೆ ಕನಿಷ್ಠ 50 ಮಂದಿ ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿರುವ ಘಟನೆ ನಡೆದಿದೆ.

ಭಾನುವಾರದಂದು ಬೆಳಗಿನ ಜಾವದ ಸಮಯದಲ್ಲಿ ಚರ್ಚ್‌ನಲ್ಲಿ ಅನೇಕ ಆರಾಧಕರು ಜಮಾಯಿಸಿದ್ದರು. ಈ ವೇಳೆ ಅಲ್ಲಿ ಮುತ್ತಿಗೆ ಹಾಕಿದ ಬಂದೂಕುಧಾರಿಗಳು ದಾಳಿ ನಡೆಸಿದ್ದಾರೆ ಎಂದು ವರದಿಯಾಗಿದೆ.

ವರದಿ ಪ್ರಕಾರ, ಬಂದೂಕುಧಾರಿಗಳು ಮೊದಲು ಚರ್ಚ್ ಬಲಿಪೀಠದ ಬಳಿ ಸ್ಫೋಟಕಗಳನ್ನು ಸ್ಫೋಟಿಸಿದರು. ನಂತರ ಆರಾಧಕರ ಮೇಲೆ ಗುಂಡು ಹಾರಿಸಿದ್ದಾರೆ. ಘಟನೆ ಬಗ್ಗೆ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಭದ್ರತಾ ಕಾರ್ಯಕರ್ತರು ಧಾವಿಸಿ ಗಾಯಗೊಂಡವರನ್ನು ಕೂಡಲೇ ಆಸ್ಪತ್ರೆಗೆ ರವಾನಿಸಿದ್ದಾರೆ. ಈ ವೇಳೆ ಕೆಲವರು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.