ಪದವಿ ಗಿಟ್ಟಿಸಿಕೊಂಡ ಬೆಕ್ಕು…ಹ್ಯಾಟು, ಕೋಟು ಸನ್ಮಾನ !!! ಅಷ್ಟಕ್ಕೂ ಯಾವ ಡಿಗ್ರಿ ಪಾಸ್ ಮಾಡಿದೆ ಗೊತ್ತೇ ಈ ಬೆಕ್ಕು?

ಅಲ್ಲ, ಸರಿಯಾಗಿ ನಿದ್ದೆಗೆಟ್ಟು ಓದಿ, ಪರೀಕ್ಷೆ ಬರೆದರೂ ಕೆಲವೊಮ್ಮೆ ಪಾಸಾಗುವುದೇ ಕಷ್ಟ. ಅಂಥದರಲ್ಲಿ ಈ ಬೆಕ್ಕು ಎಂಬ ಪ್ರಾಣಿ ಪದವಿ ಗಿಟ್ಟಿಸಿಕೊಂಡಿದೆ ಅಂದರೆ ನಂಬುತ್ತೀರಾ ? ಅಷ್ಟಕ್ಕೂ ಇದು ಎಷ್ಟು ಓದಿ ಪಾಸ್ ಮಾಡಿದೆ ಬನ್ನಿ ತಿಳಿಯೋಣ.

 

ಅಮೆರಿಕದ ಪ್ರಸಿದ್ಧ ಟೆಕ್ಸಾಸ್ ವಿಶ್ವವಿದ್ಯಾನಿಲಯದಲ್ಲಿ ನಡೆದ ಪದವಿ ಪ್ರದಾನ ಸಮಾರಂಭದಲ್ಲಿ ಈ ಬಾರಿ ಗಮನ ಸೆಳೆದದ್ದು ಒಂದು ಮುದ್ದಾದ ಬೆಕ್ಕು. ಹೌದು ಇದರ ಹೆಸರು ಸುಕಿ. ಇದು ತನ್ನ ಒಡತಿ ಫ್ರಾನ್ಸೆಸ್ಕಾ ಬೋರ್ಡಿಯರ್ ಜತೆ ವಿಶ್ವವಿದ್ಯಾಲಯದಿಂದ ಪದವಿ ಪಡೆದುಕೊಂಡಿದೆ.

ಪದವಿ ಪ್ರದಾನ ಸಮಾರಂಭದಲ್ಲಿ ಅದಕ್ಕೆ ಪದವೀಧರರಿಗೆ ನೀಡುವ ಹ್ಯಾಟ್ ಮತ್ತು ಕೋಟ್ ನೀಡಿ ಗೌರವಿಸಲಾಗಿದೆ. ಅಷ್ಟಕ್ಕೂ ಇದಕ್ಕೆ ಇಂಥದ್ದೊಂದು ಗೌರವ ಸಂದಲು ಕಾರಣ ಏನೆಂದರೆ, ಇದರ ಒಡತಿ ಹಾಜರಾಗುತ್ತಿದ್ದ ಪ್ರತಿ ಆನ್‌ಲೈನ್ (ಜೂಮ್) ಕ್ಲಾಸ್ ಗೆ ಮಿಸ್ ಮಾಡದೆ ಹಾಜರಾಗುತ್ತಿತ್ತಂತೆ!

ಆದ್ದರಿಂದ ಪದವಿ ಪ್ರದಾನ ಸಮಾರಂಭದಲ್ಲಿ ಸಾವಿರಾರು ವಿದ್ಯಾರ್ಥಿಗಳು ಮಧ್ಯೆ ಬೆಕ್ಕಿಗೂ ಪದವಿ ನೀಡಲಾಗಿದೆ. ಈ ಕುರಿತು ಅದರ ಒಡತಿ ಫ್ರಾನ್ಸೆಸ್ಕಾ ಬೋರ್ಡಿಯರ್ ತನ್ನ ಇನ್‌ಸ್ಟಾಗ್ರಾಮ್‌ನಲ್ಲಿ ಫೋಟೋ ಶೇರ್ ಮಾಡಿಕೊಂಡಿದ್ದಾಳೆ.

https://www.instagram.com/p/Cd3mK6WOlye/?utm_source=ig_web_copy_link

ಪದವಿ ಪ್ರದಾನ ಸಮಾರಂಭದಲ್ಲಿ ನಾನು ಒಂಟಿಯಾಗಿರಲಿಲ್ಲ. ಈ ರೀತಿಯ ಮೈಲಿಗಲ್ಲನ್ನು ಸಾಧಿಸುವಲ್ಲಿ ನನ್ನ ಮುದ್ದಿನ ಬೆಕ್ಕು ಸುಕಿಯೂ ನನ್ನ ಜೊತೆ ಇತ್ತು ಎಂದು ಕ್ಯಾಪ್ಶನ್ ಕೊಟ್ಟಿದ್ದಾಳೆ. ನನ್ನ ಬೆಕ್ಕು
ಪದವಿ ಪ್ರದಾನ ಸಮಾರಂಭದಲ್ಲಿ ಅದಕ್ಕೆ ಪದವೀಧರರಿಗೆ ನೀಡುವ ಹ್ಯಾಟ್ ಮತ್ತು ಕೋಟ್ ನೀಡಿ ಗೌರವಿಸಲಾಗಿದೆ. ಆದ್ದರಿಂದ ನಾವಿಬ್ಬರೂ ಆಸ್ಟಿನ್‌ನಲ್ಲಿರುವ ಟೆಕ್ಸಾಸ್ ವಿಶ್ವವಿದ್ಯಾಲಯದಿಂದ ಒಟ್ಟಿಗೆ ಪದವಿ ಪಡೆಯುತ್ತೇವೆ ಎಂದಿದ್ದಾಳೆ.

Leave A Reply

Your email address will not be published.