ಕಾನೂನು ಮೂಲಕ ಹೋರಾಟ ಮಾಡಿ ಗೆದ್ದು ಬೀಗಿದ ಆಧಿಲಾ | ಸಲಿಂಗಿ ಯುವತಿಯರಿಗೆ ಒಟ್ಟಿಗೆ ಜೀವಿಸಲು ಅನುಮತಿ ನೀಡಿದ ಕೇರಳ ಹೈಕೋರ್ಟ್!!!
ಕೇರಳದ ಜೋಡಿಹಕ್ಕಿಗಳಾದ ಆಧಿಲಾ ಮತ್ತು ನೋರಾಳ ಕಾನೂನು ಹೋರಾಟಕ್ಕೆ ಜಯ ದೊರಕಿದೆ. ಅಲುವಾ ಮೂಲದ ಆಧಿಲಾ ಸಲ್ಲಿಸಿದ್ದ ಹೇಬಿಯಸ್ ಕಾರ್ಪಸ್ ಅರ್ಜಿಯ ಅಡಿಯಲ್ಲಿ ಒಟ್ಟಿಗೆ ಬಾಳಲಯ ಕೇರಳದ ಹೈಕೋರ್ಟ್ ಅನುಮತಿ ನೀಡಿದೆ.
ಅವಳ ಬಿಟ್ಟು ಇರಲಾರೆ, ಸಲಿಂಗ ಕಾಮದ ಜೋಡಿಗಾಗಿ ಕಣ್ಣೀರಿಡುತ್ತಿರುವ ಯುವತಿ
ಹಾಗಾಗಿ ಸಲಿಂಗಕಾಮಿಗಳಾದ ಆಧಿಲಾ ಮತ್ತು ನೋರಾಳ ಹೋರಾಟಕ್ಕೆ ಜಯ ಸಿಕ್ಕಿದೆ. ಆಧಿಲಾಳ ಮನವಿಯನ್ನು ಪರಿಗಣಿಸಿದ ನ್ಯಾಯಾಲಯವು ಅವಳು ತನ್ನ ಸಂಗಾತಿಯೊಂದಿಗೆ ಮತ್ತೆ ಸೇರಬಹುದು. ಇಬ್ಬರು ವಯಸ್ಕರಾಗಿದ್ದು, ಅವರವರ ಇಚ್ಛೆಯಂತೆ ಒಟ್ಟಿಗೆ ಬಾಳಬಹುದಾಗಿದೆ. ಎಂದು ಹೈಕೋರ್ಟ್ ನಿನ್ನೆ (ಮೇ.31) ಮಹತ್ವದ ಆದೇಶ ಹೊರಡಿಸಿದೆ.
ತನ್ನ ಸಲಿಂಗ ಸಂಗಾತಿ ಫಾತಿಮಾ ನೋರಾಳನ್ನು ಸಂಬಂಧಿಕರು ಬಲವಂತವಾಗಿ ವಶಕ್ಕೆ ಪಡೆದಿದ್ದಾರೆ ಎಂದು ಆಧಿಲಾ ನಜ್ರನ್ ಮಂಗಳವಾರ (ಮೇ.31) ನ್ಯಾಯಾಲಯದ ಮೆಟ್ಟಿಲೇರಿದ್ದಳು. 2018ರ ಸೆಪ್ಟೆಂಬರ್ 6ರಂದು ಸುಪ್ರೀಂ ಕೋರ್ಟ್ ನೀಡಿರುವ ಆದೇಶದ ಪ್ರಕಾರ ನಮಗೆ ಒಟ್ಟಿಗೆ ವಾಸಿಸುವ ಹಕ್ಕಿದೆ ಎಂದು ಆಧಿಲಾ ತನ್ನ ಅರ್ಜಿಯಲ್ಲಿ ಪ್ರತಿಪಾದಿಸಿದ್ದರು. ನ್ಯಾಯಾಲಯ ಮತ್ತು ಪೊಲೀಸರು ತಮ್ಮ ಪರವಾಗಿ ನಿಲ್ಲುವಂತೆ ಅರ್ಜಿಯಲ್ಲಿ ಆಧಿಲಾ ಕೋರಿದ್ದರು. ಆಕೆಯ ಮನವಿಯನ್ನು ಪುರಸ್ಕರಿಸಿರುವ ಹೈಕೋರ್ಟ್ ಒಟ್ಟಿಗೆ ಬಾಳಲು ಅನುಮತಿ ನೀಡಿದೆ. ಇಬ್ಬರಿಗೂ ರಕ್ಷಣೆ ಒದಗಿಸಬೇಕೆಂದು ಪೊಲೀಸರಿಗೆ ನಿರ್ದೇಶನ ನೀಡಿದೆ.