ಪುತ್ತೂರು : ನರಿಮೊಗರಿನಲ್ಲಿ ವಿದ್ಯುತ್ ಶಾಕ್ ಹೊಡೆದು ಮರದಿಂದ ಬಿದ್ದು ಯುವಕ ಮೃತ್ಯು

Share the Article

ಪುತ್ತೂರು: ಮರ ಕಡಿಯುತ್ತಿದ್ದ ವೇಳೆ ವಿದ್ಯುತ್ ತಂತಿ ತಾಗಿ ಮರದಿಂದ ಕೆಳಗೆ ಬಿದ್ದು ಗಂಭೀರ ಗಾಯಗೊಂಡಿದ್ದ ವ್ಯಕ್ತಿಯೋರ್ವ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ ಘಟನೆ ನಡೆದಿದೆ.

ಮೃತರನ್ನು ಮಾಡನ್ನೂರು ನಿವಾಸಿ ವಸಂತ್ ಎಂ (33) ಎನ್ನಲಾಗಿದೆ.

ವಸಂತ್ ರವರು ನರಿಮೊಗರಿನಲ್ಲಿ ವ್ಯಕ್ತಿಯೊಬ್ಬರಿಗೆ ಸೇರಿದ ಖಾಸಗಿ ಜಾಗದಲ್ಲಿ ಮರ ಕಡಿಯುವಾಗ ವಿದ್ಯುತ್ ತಂತಿಗೆ ತಾಗಿ ಕೆಳಗೆ ಬಿದ್ದು, ಗಂಭೀರ ಗಾಯಗೊಂಡಿದ್ದರು.

ಮೃತರು ಪತ್ನಿ, ಇಬ್ಬರು ಮಕ್ಕಳು, ಮತ್ತು ಕುಟುಂಬಸ್ಥರನ್ನು ಅಗಲಿದ್ದಾರೆ.

Leave A Reply