ಸುಳ್ಯ: ಬೇಂಗಮಲೆ ಕಾಡಿನಲ್ಲಿ ಆತ್ಮಹತ್ಯೆಗೆ ಶರಣಾದ ವೃದ್ಧ

ಸುಳ್ಯ: ಬೇಂಗಮಲೆ ಕಾಡಿನಲ್ಲಿ ವೃದ್ಧರೊಬ್ಬರು ನೈಲಾನ್ ಹಗ್ಗದಿಂದ ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಇಂದು ನಡೆದಿದೆ.

 

ಮೃತರನ್ನು ಕಳಂಜ ಗ್ರಾಮದ ನಾಗಪ್ಪ ಎಂದು ಗುರುತಿಸಲಾಗಿದೆ.

ಬೇಂಗಮಲೆ ರಸ್ತೆ ಬದಿಯ ರಕ್ಷಿತಾರಣ್ಯದ ಒಳಗೆ ನೈಲಾನ್ ಹಗ್ಗದಿಂದ ಕುತ್ತಿಗೆಗೆ ಬಿಗಿದು ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದು, ಸ್ಥಳದಲ್ಲಿ ಚಪ್ಪಲಿಗಳು, ತಾಂಬೂಲ ಕಂಡುಬಂದಿದೆ.

ವಿಷಯ ತಿಳಿದು ಸ್ಥಳೀಯರು ಆಗಮಿಸಿದ್ದು, ಬಳಿಕ ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ. ಮೃತರು ಸಾರಣೆ ಕೆಲಸ ಮಾಡುತ್ತಿದ್ದು, ಕೆಲವು ದಿನಗಳ ಹಿಂದೆ ಅಸೌಖ್ಯದಿಂದ ಬಳಲುತ್ತಿದ್ದ ಕಾರಣ ಸುಳ್ಯ ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆದಿದ್ದರು ಎನ್ನಲಾಗಿದೆ. ಆದರೆ ಇಂದು ಸುಳ್ಯದಿಂದ ಹಗ್ಗ ಖರೀದಿಸಿ ನಡೆದುಕೊಂಡೆ ಬೆಂಗಮಲೆಯತ್ತ ಹೋಗಿ ಅಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಹೇಳಲಾಗಿದೆ.

Leave A Reply

Your email address will not be published.