ಉಗ್ರರ ಗುಂಡಿನ ದಾಳಿಗೆ ಟಿಕ್ ಟಾಕ್ ಕಲಾವಿದೆ ಬಲಿ !!

Share the Article

35 ವರ್ಷದ ಟಿಕ್ ಟಾಕ್ ಕಲಾವಿದೆಯನ್ನು ಭಯೋತ್ಪಾದಕರು ಗುಂಡಿಕ್ಕಿ ಹತ್ಯೆ ಮಾಡಿದ್ದು, ದಾಳಿಯಲ್ಲಿ ಮಹಿಳೆಯ ಸೋದರಳಿಯ 10 ವರ್ಷದ ಬಾಲಕ ಕೂಡಾ ಗಂಭೀರ ಗಾಯಗೊಂಡಿರುವ ಘಟನೆ ಜಮ್ಮು- ಕಾಶ್ಮೀರದ ಬುದ್ಗಾಮ್ ಜಿಲ್ಲೆಯಲ್ಲಿ ನಡೆದಿದೆ.

ರಾತ್ರಿ 7.55ರ ಸುಮಾರಿನಲ್ಲಿ ಭಯೋತ್ಪಾದಕರು ಅಮ್ರೀನ್ ಭಟ್ ಎಂಬ ಮಹಿಳೆಯ ಮನೆಯ ಮೇಲೆ ಉಗ್ರರು ಗುಂಡು ಹಾರಿಸಿದ್ದಾರೆ. ಗಾಯಗೊಂಡ ಸ್ಥಿಯಲ್ಲಿದ್ದ ಆಕೆಯನ್ನು ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಆದರೆ, ಅಲ್ಲಿ ಆಕೆ ಸಾವನ್ನಪ್ಪಿದ್ದಾರೆ ಎಂದು ವೈದ್ಯರು ಘೋಷಿಸಿದರು ಎಂದು ಕಾಶ್ಮೀರ ವಲಯ ಪೊಲೀಸರು ತಿಳಿಸಿದ್ದಾರೆ.

ಘಟನೆಯಲ್ಲಿ ಮಹಿಳೆಯ ಸೋದರಳಿಯ ಫರ್ಹಾನ್ ಜುಬೈರ್ ಕೂಡಾ ಗಾಯಗೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಪ್ರದೇಶವನ್ನು ಪೊಲೀಸರು ಸುತ್ತುವರೆದಿದ್ದು, ದಾಳಿಕೋರರನ್ನು ಹಿಡಿಯಲು ಶೋಧ ಕಾರ್ಯ ಆರಂಭಿಸಿದ್ದಾರೆ.

ಸಾಮಾಜಿಕ ಮಾಧ್ಯಮಗಳಲ್ಲಿ ಸಕ್ರಿಯರಾಗಿದ್ದ ಅಮ್ರೀನ್ ಭಟ್, ಅವರ ಗಾಯನ, ಕಿರುಚಿತ್ರದ ಹಲವು ಕ್ಲಿಪ್‌ಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು.

Leave A Reply