IPL 2022: ಇಲ್ಲಿದೆ ಐಪಿಎಲ್‌ನ ಆರೆಂಜ್ ಕ್ಯಾಪ್-ಪರ್ಪಲ್ ಕ್ಯಾಪ್ ಬಗ್ಗೆ ನಿಮಗೆ ತಿಳಿಯದ ಸತ್ಯಾಂಶ!

Share the Article

IPL ಟೂರ್ನಿಯ 15 ನೇ ಆವೃತ್ತಿ ನಡೆಯುತ್ತಿದ್ದು, ಅಂತಿಮ ಪಂದ್ಯ ಮುಗಿದಿದ್ದು, ಸನ್ ರೈಸರ್ಸ್ ಹೈದರಾಬಾದ್ ತಂಡದ ವಿರುದ್ಧ ಪಂಜಾಬ್ ಕಿಂಗ್ಸ್ ಗೆಲುವು ಸಾಧಿಸಿದೆ. ಇನ್ನುಮುಂದೆ ಟೂರ್ನಿಯ ಪ್ಲೇ ಆಫ್ ಪಂದ್ಯಗಳು ನಡೆಯಲಿದ್ದು, ಫೈನಲ್‌ಗೆ ಲಗ್ಗೆ ಇಡಲು ನಾಲ್ಕು ತಂಡಗಳು ಕಾದಾಟ ನಡೆಸಲಿವೆ.

ನೀವು ಗಮನಿಸಿದ ಹಾಗೇ, ಐಪಿಎಲ್‌ನಲ್ಲಿ ಆರೆಂಜ್ ಕ್ಯಾಪ್ ಮತ್ತು ಪರ್ಪಲ್ ಕ್ಯಾಪ್ ಎಂಬ ಎರಡು ಸ್ಥಾನ ಇದೆ. ಆಟಗಾರರ ನಡುವೆ ಈ ಗರಿಮೆ ಪಡೆದುಕೊಳ್ಳಲು ಪೈಪೋಟಿ ನಡೆಯುತ್ತವೆ. ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಆರೆಂಜ್ ಕ್ಯಾಪ್ ಮತ್ತು ಪರ್ಪಲ್ ಕ್ಯಾಪ್‌ಗೆ ಮಹತ್ವದ ಸ್ಥಾನವಿದೆ. ಅಷ್ಟಕ್ಕೂ ಏನಿದು ಆರೆಂಜ್ ಕ್ಯಾಪ್ ಮತ್ತು ಪರ್ಪಲ್ ಕ್ಯಾಪ್. ಇಲ್ಲಿದೆ ನೋಡಿ ಕಂಪ್ಲೀಟ್ ಡಿಟೇಲ್ಸ್.

ಆರೆಂಜ್ ಕ್ಯಾಪ್: ಇಂಡಿಯನ್ ಪ್ರೀಮಿಯರ್ ಲೀಗ್‌ನ ಸೀಸನ್‌ಗಳಲ್ಲಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್‌ಮನ್‌ಗೆ ಆರೆಂಜ್ ಕ್ಯಾಪ್‌ನ್ನು ನೀಡಲಾಗುತ್ತದೆ. ಈ ಕ್ಯಾಪ್ ಗೆದ್ದ ಮೊದಲ ಆಟಗಾರ ನ್ಯೂಜಿಲೆಂಡ್ ಕ್ರಿಕೆಟರ್ ಬ್ರೆಂಡನ್ ಮೆಕಲಮ್. ಇನ್ನು ಆಸ್ಟ್ರೇಲಿಯಾದ ಡೇವಿಡ್ ವಾರ್ನರ್ ಎಲ್ಲರಿಗಿಂತ ಹೆಚ್ಚು ಆರೆಂಜ್ ಕ್ಯಾಪ್ ಪಡೆದಿರುವ ಆಟಗಾರ. 2015, 2017 ಮತ್ತು 2019 ರಲ್ಲಿ ಮೂರು ಬಾರಿ ಪಡೆದುಕೊಂಡಿದ್ದಾರೆ.

ಪರ್ಪಲ್ ಕ್ಯಾಪ್: ಇಂಡಿಯನ್ ಪ್ರೀಮಿಯರ್ ಲೀಗ್‌ನ ಟೂರ್ನಿಯಲ್ಲಿ ಯಾರು ಅತೀ ಹೆಚ್ಚು ವಿಕೆಟ್ ಪಡೆಯುತ್ತಾರೆಯೋ ಅವರಿಗೆ ಪರ್ಪಲ್ ಕ್ಯಾಪ್ ನೀಡಿ ಗೌರವಿಸಲಾಗುತ್ತದೆ. ಹರ್ಷಲ್ ಪಟೇಲ್ ಕಳೆದ ವರ್ಷ ಐಪಿಎಲ್‌ನ ಒಂದೇ ಆವೃತ್ತಿಯಲ್ಲಿ ಅತಿ ಹೆಚ್ಚು 32 ವಿಕೆಟ್‌ಗಳನ್ನು ಪಡೆಯುವ ಮೂಲಕ ಪರ್ಪಲ್ ಕ್ಯಾಪ್ ಗೌರವ ಪಡೆದಿದ್ದರು. ಭುವನೇಶ್ವರ್ ಕುಮಾರ್ ಮತ್ತು ಡೇನ್ ಬ್ರಾವೋ ಮಾತ್ರ ಎರಡು ಬಾರಿ ಪರ್ಪಲ್ ಕ್ಯಾಪ್ ಗಳಿಸಿದ್ದಾರೆ. ಭುವನೇಶ್ವರ್ ಅವರು 2016 ಮತ್ತು 2017 ರಲ್ಲಿ ಕ್ರಮವಾಗಿ 23 ಮತ್ತು 27 ವಿಕೆಟ್‌ಗಳನ್ನು
ಪಡೆದಿದ್ದು, ಸತತ ಎರಡು ಟೂರ್ನಿಗಳಲ್ಲಿ ಪರ್ಪಲ್ ಕ್ಯಾಪ್ ಗೆದ್ದ ಏಕೈಕ ಆಟಗಾರನಾಗಿದ್ದಾರೆ.

ಈ ಬಾರಿಯ ಐಪಿಎಲ್ ಟೂರ್ನಿಯ ಆರೆಂಜ್ ಕ್ಯಾಪ್ ಮತ್ತು ಪರ್ಪಲ್ ಕ್ಯಾಪ್ ಯಾರ ಮುಡಿಯೇರಲಿದೆ ಎಂಬುದನ್ನು ಕಾದುನೋಡಬೇಕಿದೆ. ಇದೀಗ ಪಟ್ಟಿ ಬಿಡುಗಡೆ ಮಾಡಲಾಗಿದ್ದು, ಆರೆಂಜ್ ಕ್ಯಾಪ್‌ನ ಮೊದಲ ಎರಡು ಸ್ಥಾನವನ್ನು ಜೋಸ್ ಬಟ್ಲರ್ ಹಾಗೂ ಕೆ ಎಲ್ ರಾಹುಲ್ ಪಡೆದುಕೊಂಡಿದ್ದಾರೆ. ಇಬ್ಬರು ಕ್ರಮವಾಗಿ 623 ರನ್ ಮತ್ತು 537 ರನ್ ಬಾರಿಸಿದ್ದಾರೆ. ಲೀಗ್ ಮುಗಿಯುವಷ್ಟರಲ್ಲಿ ಯಾವ ಆಟಗಾರ ಹೆಚ್ಚು ರನ್ ಗಳಿಸುತ್ತಾನೋ ಅವರಿಗೆ ಆರೆಂಜ್ ಕ್ಯಾಪ್ ಲಭಿಸಲಿದೆ.

Leave A Reply