ಏಕಾಏಕಿ ಗುಂಡಿನ ದಾಳಿಗೆ ಬೆಚ್ಚಿಬಿದ್ದ ಅಮೇರಿಕಾ !! | ಶೂಟೌಟ್ ಗೆ 18 ವಿದ್ಯಾರ್ಥಿಗಳು ಸೇರಿದಂತೆ 21 ಜನ ಬಲಿ

Share the Article

ಅಮೆರಿಕಾದ ಟೆಕ್ಸಾಸ್‍ನಲ್ಲಿರುವ ರಾಬ್ ಎಲಿಮೆಂಟರಿ ಶಾಲೆಯಲ್ಲಿ ಬಂದೂಕುಧಾರಿಯಿಂದ ಏಕಾಏಕಿ ಶೂಟೌಟ್ ನಡೆದಿದ್ದು, ಶೂಟೌಟ್‍ಗೆ 18 ವಿದ್ಯಾರ್ಥಿಗಳು ಹಾಗೂ ಇತರೆ 3 ಮಂದಿ ಅಮಾನುಷವಾಗಿ ಬಲಿಯಾಗಿರುವ ಘಟನೆ ನಡೆದಿದೆ.

ಈ ಬಗ್ಗೆ ಟೆಕ್ಸಾಸ್ ಗವರ್ನರ್ ಗ್ರೆಗ್ ಅಬೊಟ್ ಮಾಹಿತಿ ನೀಡಿದ್ದು, ಸುಮಾರು 18 ವರ್ಷ ವಯಸ್ಸಿನ ಸಾಲ್ವಡೆರ್ ರೊಮೊಸ್ (18) ಎಂಬಾತ ಏಕಾಏಕಿ ಗುಂಡಿನ ಮಳೆಗರೆದಿದ್ದಾನೆ. ಘಟನೆಯಲ್ಲಿ ಒಟ್ಟಾರೆಯಾಗಿ 21 ಜನರು ಮೃತಪಟ್ಟಿದ್ದಾರೆ. ಅಷ್ಟೇ ಅಲ್ಲದೇ ಭದ್ರತಾ ಸಿಬ್ಬಂದಿ ಪ್ರತಿದಾಳಿಯಲ್ಲಿ ಆತ ಸಾವನ್ನಪ್ಪಿದ್ದಾನೆ ಎಂದು ತಿಳಿಸಿದ್ದಾರೆ.

ಶ್ವೇತಭವನದಲ್ಲಿ ಶೂಟೌಟ್‍ನಲ್ಲಿ ಮಡಿದವರಿಗೆ ಶೋಕ ವ್ಯಕ್ತಪಡಿಸಲು ಧ್ವಜಗಳನ್ನು ಅರ್ಧ ಹಾರಿಸಿ ಗೌರವಿಸಲಾಯಿತು. ನಂತರ ಮಾತನಾಡಿದ ಅಮೆರಿಕಾ ಅಧ್ಯಕ್ಷ ಜೋ ಬೈಡನ್ ಘಟನೆಯನ್ನು ಖಂಡಿಸಿದ್ದಾರೆ. ಈ ವರ್ಷದಲ್ಲೇ ಅತ್ಯಂತ ಭೀಕರ ದಾಳಿ ಇದಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

Leave A Reply