ವಿದ್ಯಾರ್ಥಿನಿಯ ಪ್ರಾಣವನ್ನೇ ತೆಗೆದ ಮಾಂಸದ ತುಂಡು!

Share the Article

ಕೇರಳ : ಮಾಂಸದ ತುಂಡೊಂದು ವಿದ್ಯಾರ್ಥಿನಿಯ ಗಂಟಲಲ್ಲಿ ಸಿಲುಕಿ ಆಕೆಯ ಪ್ರಾಣವೇ ಹೋಗಿರುವ ಹೃದಯವಿದ್ರಾಯಕ ಘಟನೆ ಪಾಲಕ್ಕಾಡ್ ನಲ್ಲಿ ನಡೆದಿದೆ.

ಮೃತ ವಿದ್ಯಾರ್ಥಿನಿಯನ್ನು ಯಹ್ಯಾ ಎಂಬವರ ಮಗಳು ಫಾತಿಮಾ ಹನಾನ್(22) ಎಂದು ಗುರುತಿಸಲಾಗಿದೆ.

ಫಾತಿಮಾ ಭಾನುವಾರ ಮನೆಯಲ್ಲಿ ಊಟ ಮಾಡುತ್ತಿದ್ದಾಗ ಮಾಂಸದ ತುಂಡು ಗಂಟಲಲ್ಲಿ ಸಿಲುಕಿಕೊಂಡಿದೆ. ಏನೋ ಅವಸರದಲ್ಲಿ ಗಬ -ಗಬ ತಿಂದಿದ್ದಳೋ ಏನೋ, ಅದು ಆಕೇನ ಈ ಸ್ಥಿತಿಗೆ ತಳ್ಳಿತು. ಆದರೆ ತಕ್ಷಣ ಆಕೆಯನ್ನು ಪೆರಿಂತಲ್ಮಣ್ಣಾದ ಖಾಸಗಿ ಆಸ್ಪತ್ರೆಗೆ ದಾಖಲಿಸಿ, ಶಸ್ತ್ರ ಚಿಕಿತ್ಸೆ ನಡೆಸಲಾಗಿತ್ತು.ಆದರೆ ಚಿಕಿತ್ಸೆ ಫಲಿಸದೇ ಆಕೆ
ಇಹಲೋಕ ತ್ಯಜಿಸಿದ್ದಾಳೆ.

ಮೃತ ಫಾತಿಮಾ ಮನ್ನಾರ್ ಕಾಡ್ ನಲ್ಲಿ ಎಂಎಸ್ಸಿ ಸೈಕಾಲಜಿ ವಿದ್ಯಾಭ್ಯಾಸ ಮಾಡುತ್ತಿದ್ದಳು. ಇದೀಗ ಆಕೆ ತಾಯಿ, ಪತಿ, ಸಹೋದರರು ಹಾಗೂ ಬಂಧು ಮಿತ್ರರನ್ನು ಅಗಲಿದ್ದಾರೆ.

Leave A Reply