ಶೂಟಿಂಗ್ ನೆಪದಲ್ಲಿ ಗಾಯಕಿಯನ್ನು ಕರೆದುಕೊಂಡು ಹೋದ ದುಷ್ಕರ್ಮಿ | 12 ದಿನಗಳ ಬಳಿಕ ಶವ ಪತ್ತೆ | ಕೊಲೆ ಪ್ರಕರಣಕ್ಕೆ ರೋಚಕ ಟ್ವಿಸ್ಟ್

Share the Article

ಪ್ರಖ್ಯಾತ ಗಾಯಕಿಯೋರ್ವಳು ಎರಡು ವಾರಗಳ ಬಳಿಕ ಶವವಾಗಿ ಪತ್ತೆಯಾಗಿದ್ದಾಳೆ. ಮೇ.11 ರಂದು ಗಾಯಕಿ ನಾಪತ್ತೆಯಾಗಿದ್ದಳು. ಹರಿಯಾಣದ ರೋಹಕ್ ಜಿಲ್ಲೆಯ ಪ್ಲೈಓವರ್ ಬಳಿ ಸಮಾಧಿ ಸ್ಥಿತಿಯಲ್ಲಿ ಆಕೆಯ ಮೃತದೇಹ ಪತ್ತೆಯಾಗಿದೆ.

ಮೃತಳನ್ನು ಸಂಗೀತಾ ಎಂದು ಗುರುತಿಸಲಾಗಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಅವರ ವಿರುದ್ಧ ಅಪಹರಣ ಮತ್ತು ಕೊಲೆ ಪ್ರಕರಣವನ್ನು ದಾಖಲಿಸಲಾಗಿದೆ.

ಘಟನೆ ವಿವರ : ಮ್ಯೂಸಿಕ್ ವಿಡಿಯೋ ಶೂಟಿಂಗ್‌ಗೆ ಎಂದು ಹೇಳಿ ಇಬ್ಬರು ವ್ಯಕ್ತಿಗಳು ಗಾಯಕಿಯನ್ನು ದೆಹಲಿಯಿಂದ ರೊಸ್ಟಕ್‌ಗೆ ಕರೆದುಕೊಂಡು ಹೋಗಿದ್ದರು. ಅನಂತರ ಆಕೆಯನ್ನು ಸಂಪರ್ಕಿಸಲು ಕುಟುಂಬದವರು ಪ್ರಯತ್ನಿಸಿದರೂ ಸಾಧ್ಯವಾಗಿರಲಿಲ್ಲ. ಆಕೆಯ ಫೋನ್ ಕೂಡ ಸ್ವಿಚ್ ಆಫ್ ಆಗಿತ್ತು. ಗಾಬರಿಗೊಂಡ ಕುಟುಂಬ ಮೇ 14ರಂದು ದೆಹಲಿಯ ಅ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಇದಾದ ಬಳಿಕ ಪೊಲೀಸರು ಪ್ರಕರಣದ ತನಿಖೆ ಆರಂಭಿಸಿದರು. ಶನಿವಾರ ಆಕೆಯ ಫೋನ್ ಸ್ವಿಚ್ ಆ ಆಗಿರುವುದನ್ನು ಗಮನಿಸಿದ ಪೊಲೀಸರು ತನಿಖೆ ತೀವ್ರ ಗೊಳಿಸಿದರು. ಅನಂತರ ರವಿ ಮತ್ತು ಗಾಯಕಿಗೆ ಇರುವ ನಂಟಿನ ಬಗ್ಗೆ ತಿಳಿದು ಆತನನ್ನು ಪತ್ತೆಹಚ್ಚಿ ವಶಕ್ಕೆ ಪಡೆದಿದ್ದರು. ಆತನನ್ನು ವಿಚಾರಣೆ ಮಾಡಿದಾಗ, ಆಕೆಯನ್ನು ಕೊಲೆಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ.

ಹರಿಯಾಣ ಪೊಲೀಸರು ಭೈರೋನ್ ಭೈನಿ ಗ್ರಾಮದ ಬಳಿಯ ಫೈಓವರ್ ಬಳಿ ಶವವೊಂದನ್ನು ವಶಪಡಿಸಿಕೊಂಡರು. ಮೃತದೇಹ ಹರ್ಯಾಣ ಗಾಯಕಿಯದ್ದು ಎಂದು ಗುರುತು ಹಿಡಿಯಲಾಯಿತು.
ಈ ಪ್ರಕರಣದ ಇನ್ನಷ್ಟು ವಿಚಾರಣೆ ನಡೆಯುತ್ತಿದ್ದು, ತನಿಖೆ ಮುಂದುವರಿದಿದೆ.

Leave A Reply