Home latest ರೊಚ್ಚಿಗೆದ್ದ ಶಾಸಕನ ಸಖತ್ ಡ್ಯಾನ್ಸ್ | ಯುವತಿಯರ ಕುರ್ತಾ ಮೇಲಕ್ಕೆತ್ತಿ, ಫ್ಲೈಯಿಂಗ್ ಕಿಸ್ ಕೊಡುತ್ತಾ ಮೈಮರೆತ...

ರೊಚ್ಚಿಗೆದ್ದ ಶಾಸಕನ ಸಖತ್ ಡ್ಯಾನ್ಸ್ | ಯುವತಿಯರ ಕುರ್ತಾ ಮೇಲಕ್ಕೆತ್ತಿ, ಫ್ಲೈಯಿಂಗ್ ಕಿಸ್ ಕೊಡುತ್ತಾ ಮೈಮರೆತ MLA

Hindu neighbor gifts plot of land

Hindu neighbour gifts land to Muslim journalist

ಶಾಸಕರೆಂದರೆ ಒಂದು ಘನತೆ ಗಾಂಭೀರ್ಯದಿಂದ ಇರ್ತಾರೆ, ಜವಾಬ್ದಾರಿಯಿಂದ ಮತ್ತು ಅಷ್ಟೇ ನಿಷ್ಠೆಯಿಂದ ತಮ್ಮ ಕೆಲಸಗಳನ್ನು ಮಾಡುತ್ತಾರೆ ಎಂಬ ಒಂದು ಕಲ್ಪನೆ ಸಾಧಾರಣವಾಗಿ ಸಾಮಾನ್ಯ ಜನರಲ್ಲಿ ಇದೆ. ಅವರು ಎದುರಿಗೆ ಬಂದರೆ ಕೈ ಮುಗಿಯೋಣ ಅಂತ ಅನಿಸುತ್ತೆ… ಆದರೆ ಕೆಲವರ ನಡೆ ನೋಡಿದರೆ ಇವರೇನಾ ನಮ್ಮ ಶಾಸಕರು…ಅಂತ ನಾವೇ ಆಶ್ಚರ್ಯಚಕಿತರಾಗಿ ನೋಡುತ್ತೇವೆ. ಈ ರೀತಿ ಯಾಕೆ ಹೇಳುತ್ತಾ ಇದ್ದೀವಿ ಅಂದರೆ ಇಲ್ಲೊಬ್ಬ ಶಾಸಕರು ಅಸಭ್ಯ ವರ್ತನೆ ಮಾಡಿದ್ದಾರೆ… ಅದೇನೆಂದು ಮುಂದೆ ಓದಿ…

ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಪಕ್ಷದ ಶಾಸಕರೊಬ್ಬರು ತಮ್ಮ ಕ್ಷೇತ್ರದಲ್ಲಿ ನಡೆದ ಮದುವೆ ಸಮಾರಂಭವೊಂದರಲ್ಲಿ ಯುವತಿಯರೊಂದಿಗೆ ನೃತ್ಯ ಮಾಡುತ್ತಾ ಫ್ಲೈಯಿಂಗ್ ಕಿಸ್ ನೀಡುತ್ತಾ ಹಣವನ್ನು ಎಸೆದಿರುವ ವೀಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಹರಿದಾಡುತ್ತಿದೆ.

ಬಿಹಾರದ ಭಾಗಲ್ಪುರ್ ಜಿಲ್ಲೆಯ ಫತೇಪುರ್ ಗ್ರಾಮದಲ್ಲಿ ನಡೆದ ಮದುವೆಯ ಆರತಕ್ಷತೆ ಸಮಾರಂಭದಲ್ಲಿ ಜೆಡಿಯು ಶಾಸಕ ಗೋಪಾಲ್ ಮಂಡಲ್ ಅವರು ಬಾಲಿವುಡ್‌ನ ಫೇಮಸ್ ದಿಲ್ಬರ್, ದಿಲ್ಬರ್ ಸಾಂಗ್‌ಗೆ ಧರಿಸಿದ್ದ ಕುರ್ತಾವನ್ನು ಮೇಲಕ್ಕೆ ಎತ್ತಿ ಡ್ಯಾನ್ಸ್ ಮಾಡಿದ್ದಾರೆ. ಜೊತೆಗೆ ಯುವತಿಯರ ಕೈ ಹಿಡಿದು ವೇದಿಕೆ ಮೇಲೆ ಎಲ್ಲರ ಮುಂದೆ ಕುಣಿದು ಕುಪ್ಪಳಿಸಿದ್ದಾರೆ.

ಗೋಪಾಲ್ ಮಂಡಲ್ ಅವರ ಡ್ಯಾನ್ಸ್ ವೀಡಿಯೋಗೆ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದೆ. ಅಲ್ಲದೇ ಈ ಕುರಿತಂತೆ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಗೋಪಾಲ್ ಮಂಡಲ್ ಅವರನ್ನು ಪ್ರಶ್ನಿಸಿದ್ದಾರೆ. ಇದಕ್ಕೆ ಗೋಪಾಲ್ ಮಂಡಲ್, ಮ್ಯೂಸಿಕ್ ಕೇಳಿದಾಗಲೆಲ್ಲ ನನಗೆ ಡ್ಯಾನ್ಸ್ ಮಾಡಬೇಕೆಂದು ಅನಿಸುತ್ತದೆ. ಕಲಾವಿದರು ಕುಣಿಯುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಹೇಳುವ ಮೂಲಕ ತಮ್ಮ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ.