ಖ್ಯಾತ ಕನ್ನಡ ಧಾರವಾಹಿ ‘ಗೀತಾ’ ‘ದೊರೆಸಾನಿ’ ನಟಿ ಕಾಸ್ಮೆಟಿಕ್ ಸರ್ಜರಿ ವೇಳೆ ವೈದ್ಯರ ಎಡವಟ್ಟಿನಿಂದ ಸಾವು !!!

ಬಣ್ಣದ ಲೋಕದಲ್ಲಿ ಮಿಂಚಲೇ ಬೇಕು ಎಂಬ ಅತೀವ ಆಸೆಯಿಂದ ಕಿರುತೆರೆ, ಹಿರಿತೆರೆಗೆ ಬರುವ ಅನೇಕ ನಟ ನಟಿಯರು ಇದ್ದಾರೆ. ಹಾಗೆನೇ ಅವರು ತಮ್ಮ ಸೌಂದರ್ಯದ ಬಗ್ಗೆ ಅತೀವ ಕಾಳಜಿ ಕೂಡಾ ಹೊಂದಿರುತ್ತಾರೆ. ಹಾಗಾಗಿ ಅವರು ಅದಕ್ಕೆ ಬಳಸುವ ವಸ್ತುಗಳು ಅತೀ ದುಬಾರಿಯದ್ದಾಗಿರುತ್ತದೆ. ಕೆಲವರು ಇನ್ನೂ ಮುಂದಕ್ಕೆ ಹೋಗಿ ಸೌಂದರ್ಯ ಸರ್ಜರಿ ಕೂಡಾ ಮಾಡುತ್ತಾರೆ. ಅದು ದೇಹದ ಯಾವುದೇ ಭಾಗವಾಗಿದ್ದರೂ ಸರಿ ಅಲ್ಲಿ ಏನೇ ಲೋಪ ಕಂಡರೂ ಈಗ ಸರ್ಜರಿ ಮೂಲಕ ಸರಿ ಮಾಡಬಹುದು. ಅಂತಹ ಸರ್ಜರಿ ಮಾಡಲು ಹೋಗಿಯೇ ಕನ್ನಡದ ಕಿರುತೆರೆ ನಟಿಯೋರ್ವಳು ಈಗ ಸಾವನ್ನಪ್ಪಿದ್ದಾರೆ.

 

ಕಿರುತೆರೆ ನಟಿ ಚೇತನಾ ರಾಜ್ ( 21) ಎಂಬಾಕೆಯೇ ಮೃತ ದುರ್ದೈವಿ. ಕಾಸ್ಮೆಟಿಕ್ ಆಸ್ಪತ್ರೆಯಲ್ಲಿ ಫ್ಯಾಟ್ ಸರ್ಜರಿ ವೇಳೆಯಲ್ಲಿ ಅವರು ಮೃತಪಟ್ಟಿದ್ದಾರೆ. ಶ್ವಾಸಕೋಶದಲ್ಲಿ ನೀರಿನ ಅಂಶ ಸೇರಿಕೊಂಡು ಅವರು ಸಾವನ್ನಪ್ಪಿದ್ದಾರೆ.

ಇತ್ತ ಕಡೆ ತಾಯಿ ಮುನಿಲಕ್ಷ್ಮಿ ಅವರು ವೈದ್ಯರ ನಿರ್ಲಕ್ಷದಿಂದ ಚೇತನಾ ಮೃತಪಟ್ಟಿದ್ದಾರೆ. ಪೋಷಕರ ಒಪ್ಪಿಗೆ ಇಲ್ಲದೆ ಸರ್ಜರಿ ಮಾಡಿದ್ದೇ ಘಟನೆಗೆ ಕಾರಣವೆಂದು ಆರೋಪ ಮಾಡಿದ್ದಾರೆ.

ಹಲವಾರು ಧಾರಾವಾಹಿ, ಸಿನಿಮಾಗಳಲ್ಲಿ ಚೇತನ ರಾಜ್ ಅಭಿನಯಿಸಿದ್ದಾರೆ. ಸುಬ್ರಹ್ಮಣ್ಯ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ‘ಗೀತಾ’, ‘ದೊರೆಸಾನಿ’ ಧಾರಾವಾಹಿ ಹಾಗೂ ಹಲವು ಚಿತ್ರಗಳಲ್ಲಿ ಅವರು ಅಭಿನಯಿಸಿದ್ದಾರೆ.

ನಟ ನಟಿಯರು ತಮ್ಮ ಸಹಜ ಸೌಂದರ್ಯದಿಂದಲೇ ಕೋಟ್ಯಾಂತರ ವೀಕ್ಷಕರ ಮನ ಗೆಲ್ಲಬಹುದು. ಈ ಸೌಂದರ್ಯ ಉಳಿಸೋ ಭರದಲ್ಲಿ ಸಾವಿನ ಬಾಗಿಲು ತಟ್ಟುವುದು ಎಷ್ಟು ಸರಿ…

Leave A Reply

Your email address will not be published.