ಕಾಲಿಗೆ ಮೊಬೈಲ್ ಕಟ್ಟಿಕೊಂಡು ವಿಕೃತ ಮನಸ್ಸಿನ ವ್ಯಕ್ತಿಯಿಂದ ಮಾರುಕಟ್ಟೆ ತುಂಬಾ ಓಡಾಟ! ಯಾಕೆ ಹೀಗೆ ಮಾಡ್ತಿದ್ದ ಗೊತ್ತಾ?
ಹೆಣ್ಮಕ್ಕಳು ಹೊರಗಡೆ ಹೋದಾಗ ಎಷ್ಟೇ ಹುಷಾರಾಗಿದ್ದರೂ ಅಷ್ಟೇ… ಸುರಕ್ಷತೆ ದೃಷ್ಟಿಯಿಂದ ಕಮ್ಮಿ ಎಂದೇ ಹೇಳಬಹುದು. ಉತ್ತಮ ವಾಗ್ಮಿಗಳಿಂದ ಈ ಕುರಿತು ನಿರಂತರ ಚರ್ಚೆ ಮಹಿಳಾ ಸುರಕ್ಷತೆ ಬಗ್ಗೆ ಎತ್ತರದ ಧ್ವನಿಯಲ್ಲಿ ಕೇಳಿ ಬರುತ್ತದೆ. ಆದರೂ ಕೆಲವೊಂದು ಸ್ಥಳಗಳು ಮಹಿಳೆಯರಿಗೆ ಅಷ್ಟು ಸುರಕ್ಷಿತವಲ್ಲ ಎಂದು ಹೇಳಲಾಗುತ್ತದೆ.
ಹೌದು, ಇತ್ತೀಚಿನ ದಿನಗಳಲ್ಲಿ ಇದಕ್ಕೆ ಸಂಬಂಧಿಸಿದ ವೀಡಿಯೊ ಮತ್ತು ಚಿತ್ರವೊಂದು ಸಾಮಾಜಿಕ ಮಾಧ್ಯಮದಲ್ಲಿ ತೀವ್ರವಾಗಿ ವೈರಲ್ ಆಗುತ್ತಿದೆ. ಇದನ್ನು ನೋಡಿದರೆ ಇಂದಿನ ಕಾಲದಲ್ಲೂ ಜನರ ಮನಸ್ಥಿತಿ ಬದಲಾಗಿಲ್ಲ ಎಂದು ಎಲ್ಲರೂ ಭಾವಿಸಬೇಕಾಗುತ್ತದೆ.
ಇದು 2022 ರಲ್ಲಿ ಸಂಶೋಧಿಸಲಾದ ಹೊಸ ವ್ಯಸನ. ಈ ಘಟನೆ ಮಲೇಷ್ಯಾದಲ್ಲಿ ನಡೆದಿದೆ ಎಂದು ಹೇಳಲಾಗುತ್ತಿದ್ದು, ಇಲ್ಲೊಬ್ಬ ವ್ಯಕ್ತಿ ತನ್ನ ಕಾಲಿನ ಪಾದದ ಮೇಲ್ಭಾಗಕ್ಕೆ ಮೊಬೈಲ್ ಕಟ್ಟಿಕೊಂಡು ಹೆಣ್ಣು ಮಕ್ಕಳು ಹೆಚ್ಚಾಗಿ ಅಡ್ಡಾಡುತ್ತಿರುವ ಕಡೆ ಓಡಾಡುತ್ತಿದ್ದಾರೆ. ಈ ಸಂಬಂಧಿತ ವೀಡಿಯೋ ಈಗ ವೈರಲ್ ಆಗಿದೆ. ಈ ವಿಡಿಯೋಗೆ ಸಂಬಂಧಿಸಿದ ಚಿತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಕೂಲಂಕುಷವಾಗಿ ನೋಡಿದರೆ ಆ ವ್ಯಕ್ತಿ ಮೊಬೈಲ್ ಅನ್ನು ತಲೆಕೆಳಗಾಗಿ ಇಟ್ಟಿರುವುದು ಅಂದರೆ, ಕ್ಯಾಮೆರಾದ ಬದಿ ಮೇಲ್ಮುಖವಾಗಿರುವುದು ಕಂಡು ಬರುತ್ತದೆ. ಇದನ್ನು ನೋಡಿದ ಜನರಿಗೆ ಆ ವ್ಯಕ್ತಿ ಯಾಕೆ ಹೀಗೆ ಮಾಡಿದ್ದಾನೆ, ಆತನ ಉದ್ದೇಶವೇನು ಎಂಬುದೇ ಮೊದಲು ತಿಳಿದಿರಲಿಲ್ಲ.
ವಾಸ್ತವವಾಗಿ ಆತ ಮಾರುಕಟ್ಟೆಯಲ್ಲಿ, ಅಲ್ಲಿಗೆ ಬರುವ ಹುಡುಗಿಯರ ಸ್ಕರ್ಟ್ ಅಡಿಯಲ್ಲಿ ಚಿತ್ರಗಳನ್ನು ತೆಗೆಯುತ್ತಿದ್ದನು ಎನ್ನಲಾಗಿದೆ. ಮಾರುಕಟ್ಟೆಗೆ ಶಾರ್ಟ್ ಸ್ಕರ್ಟು ಹಾಕಿಕೊಂಡು ಬರುವ ಹುಡುಗಿಯರೇ ಈತನ ಟಾರ್ಗೆಟ್. ಅಂತಹಾ ಸ್ಕರ್ಟ್ ಧರಿಸಿದ ಹುಡುಗೀರ ಪಕ್ಕ ಹೋಗಿ ಅಮಾಯಕನಂತೆ ಆತ ನಿಲ್ಲುತ್ತಾನೆ. ಕಾಲಿಗೆ ಮೊಬೈಲ್ ಕಟ್ಟಿಕೊಂಡು, ಕಾಲು ವಿಸ್ತರಿಸಿ ನಿಲ್ಲುತ್ತಾನೆ. ಹುಡುಗೀರ ಒಳಗಿನ ದೃಷ್ಯಗಳೆಲ್ಲ ಆತನ ಮೊಬೈಲ್ ನಲ್ಲಿ ಭದ್ರ ಆಗುತ್ತದೆ. ಅಷ್ಟೇ, ಆತ ಅಲ್ಲಿಂದ ಜಾಗ ಖಾಲಿ ಮಾಡಿ ಬೇರೊಂದು ಮಿಕದ ಬಳಿ ಇಂತದ್ದೇ ಕೃತ್ಯಕ್ಕೆ ತೊಡಗುತ್ತಾನೆ. ಪಕ್ಕದಲ್ಲಿ ನಿಂತಿರುವ ಹುಡುಗಿಗೆ ಇದರ ಯಾವ ಅವಗಾಹನೆ ಕೂಡಾ ಇರೋದಿಲ್ಲ. ಇಂಥಹ ನೀಚ ಮನಸ್ಥಿತಿಯ ಕಾಮುಕರ ಮಧ್ಯೆ ಹೆಣ್ಮಕ್ಕಳು ಎಲ್ಲಿಗೂ ಹೊರಗಡೆ ಹೋದರೂ ಡೇಂಜರೇ ಎಂದು ಹೇಳಬಹುದು.