Home News ಮಸೀದಿಗಳಿಗೆ ಧ್ವನಿವರ್ಧಕ ತೆರವಿಗೆ ನೀಡಿದ್ದ ಗಡುವು ಅಂತ್ಯ | ಇಂದಿನಿಂದ ದೇಗುಲಗಳಲ್ಲಿ ಹನುಮಾನ್ ಚಾಲೀಸ್, ಭಜನೆ

ಮಸೀದಿಗಳಿಗೆ ಧ್ವನಿವರ್ಧಕ ತೆರವಿಗೆ ನೀಡಿದ್ದ ಗಡುವು ಅಂತ್ಯ | ಇಂದಿನಿಂದ ದೇಗುಲಗಳಲ್ಲಿ ಹನುಮಾನ್ ಚಾಲೀಸ್, ಭಜನೆ

Hindu neighbor gifts plot of land

Hindu neighbour gifts land to Muslim journalist

ಮಸೀದಿಗಳಲ್ಲಿ ಧ್ವನಿವರ್ಧಕ ತೆರವಿಗೆ ನೀಡಿದ್ದ ಗಡುವು ಅಂತ್ಯವಾಗಿದ್ದು, ಸೋಮವಾರದಿಂದ ಮಸೀದಿಗಳ ಸಮೀಪದ ದೇಗುಲಗಳಲ್ಲಿ ಹನುಮಾನ್ ಚಾಲೀಸ್ ಮತ್ತು ಭಜನೆಗಳನ್ನು ಲೌಡ್ ಸ್ಪೀಕರ್ ಗಳಲ್ಲಿ ಮೊಳಗಿಸುವುದಾಗಿ ಶ್ರೀರಾಮಸೇನೆ ಹೇಳಿದೆ.

ಈ ಕುರಿತು ಮಾಹಿತಿ ನೀಡಿರುವ ಶ್ರೀರಾಮಸೇನೆ ರಾಜ್ಯ ಘಟಕದ ಅಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ, ಕಲಬುರಗಿ ನಗರದ ಸೂಪರ್ ಮಾರ್ಕೆಟ್ ಆಟೊ ನಿಲ್ದಾಣದ ಬಳಿಯ ದೇವಸ್ಥಾನದಲ್ಲಿ ಹನುಮಾನ್ ಚಾಲೀಸಾ ಹಾಕಲಾಗುವುದು. ಮಧ್ಯಾಹ್ನ 12ರಿಂದ 2 ಗಂಟೆಯವರೆಗೆ ಭಜನೆ, ಹನುಮಾನ ಚಾಲಿಸಾ ಪಠಿಸಲಾಗುವುದು ಎಂದು ಹೇಳಿದ್ದಾರೆ.

ಸೋಮವಾರದಿಂದ ರಾಜ್ಯದ ಬಹುತೇಕ ದೇವಸ್ಥಾನಗಳಲ್ಲಿ ಹನುಮಾನ್ ಚಾಲೀಸದ ಜೊತೆಗೆ ವೇದಮಂತ್ರಗಳನ್ನು ಮೊಳಗಿಸಲು ಶ್ರೀರಾಮಸೇನೆ ಮತ್ತು ಇತರ ಹಿಂದುತ್ವಪರ ಸಂಘಟನೆಗಳು ಮುಂದಾಗಿವೆ.